ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.20:
ಕರ್ನಾಟಕದ ಕಲ್ಬುರ್ಗಿಯಲ್ಲಿ ಇರುವ ಕೇಂದ್ರೀೀಯ ಕೇಂದ್ರೀೀಯ ವಿಶ್ವವಿದ್ಯಾಾಲಯಕ್ಕೆೆ 2025-26 ನೇ ಸಾಲಿನ ಪ್ರವೇಶಗಳು ಪ್ರಾಾರಂಭವಾಗಿದ್ದು ಡಿಸೆಂಬರ್ 14 ರಿಂದ ಜನವರಿ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾರ್ಚ್ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರೀೀಯ ವಿಶ್ವವಿದ್ಯಾಾಲಯದ ಬಿಜಿನೆಸ್ ಮ್ಯಾಾನೇಜ್ಮೆೆಂಟ್ ಮುಖ್ಯಸ್ಥರಾದ ಡಾ. ಸೋಫಿಯ ಪರ್ವೀನ್ ಅವರು ತಿಳಿಸಿದ್ದಾಾರೆ.
ಪತ್ರಿಿಕಾ ಭವನದಲ್ಲಿ ಪತ್ರಕರ್ತರ ಜೊತೆ ಶನಿವಾರ ಮಾತನಾಡಿದ ಅವರು, ಈ ವಿಶ್ವವಿದ್ಯಾಾಲಯದಲ್ಲಿ 18 ಕೋರ್ಸ್ಗಳಿವೆ. ಈ ವರ್ಷದ ಶೈಕ್ಷಣಿಕ ಸಾಲಿನಿಂದ ಲೈಬ್ರರಿ ಸೈನ್ಸ್, ಬಾಟನಿ, ಪ್ರಾಾಣಿಶಾಸ್ತ್ರ, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಸೇರಿದಂತೆ ಆರು ಹೊಸ ಕೋರ್ಸ್ಗಳು ಪ್ರಾಾರಂಭವಾಗಿವೆ. ಎಂಬಿಎ, ಎಂಕಾಂ ಸೋಷಿಯಾಲಜಿ, ಎಂಸಿಎ, ಎಲ್ಎಲ್ಎಂ ಸೇರಿ ವಿವಿಧ ಕೋರ್ಸ್ಗಳಿವೆ ಎಂದರು.
ಎನ್ಟಿಎ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರೀೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸೀಟನ್ನು ಪಡೆಯಬೇಕು. ಪದವಿ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ ಬರೆದಿರುವ ವಿದ್ಯಾಾರ್ಥಿಗಳು ಕೂಡ ಈ ಪರೀಕ್ಷೆಗೆ ಪ್ರವೇಶವಿದೆ. ಅರ್ಜಿ ಸಲ್ಲಿಸುವಿಕೆ, ಲಿತಾಂಶ ಎಲ್ಲವದೂ ಆನ್ಲೈನ್ನಲ್ಲಿ ನಡೆಯಲಿದೆ.
ಇಂಗ್ಲೀಷ್ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿ ಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕು. ಅರ್ಜಿ ಸಲ್ಲಿಸಲು ಆಸಕ್ತರು ವಿವರಗಳಿಗಾಗಿ ಣಣಠಿ://ಟಿಣಚಿ.ಚಿಛಿ.ಟಿ/ ಭೇಟಿ ನೀಡಿ ಮಾಹಿತಿ ಪಡೆಯಬೇಕು. ವಿವರಗಳಿಗಾಗಿ
ದೂರವಾಣಿ ಸಂಖ್ಯೆೆ : 011-40759000 / 69227700 ಸಂಪರ್ಕಿಸಬಹುದಾಗಿದೆ.

