ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.20:
ವಿದ್ಯಾಾರ್ಥಿಗಳು ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸಿ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆೆ ಪ್ರಯತ್ನಿಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಾಲಯದ ಮಾಜಿ ಕುಲಸಚಿವ ಪ್ರೊೊ. ನಜೀರ್ ಅಹ್ಮದ್ ಅವರು ತಿಳಿಸಿದ್ದಾಾರೆ.
ಬಳ್ಳಾಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಾಯತ್ತ ಕಾಲೇಜಿನಲ್ಲಿ ನಡೆದ, ‘ವ್ಯವಹಾರ, ಪರಿಸರ ಮತ್ತು ಪತ್ರಿಿಕೋದ್ಯಮದ ಸಾಮಾಜಿಕ ನ್ಯಾಾಯ ಮತ್ತು ನೀತಿಶಾಸ’ ವಿಷಯವಾಗಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊೊಂಡು ಅವರು ಮಾತನಾಡಿದರು.
ಪರಿಸರ ಹಾನಿ ದುರ್ಬಲ ಸಮುದಾಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡುವುದು, ಸುಸ್ಥಿಿರ ಸಂಪನ್ಮೂಲ ಬಳಕೆ, ಪರಿಸರ ಪ್ರಯೋಜನಗಳು ನ್ಯಾಾಯಯುತವಾಗಿ ಹಂಚಿಕೊಳ್ಳಲಾಗಿದೆಯೆ ಎಂದು ಪ್ರಭುತ್ವಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯದ ವಾಣಿಜ್ಯ ವಿಭಾಗದ ಪ್ರಾಾಧ್ಯಾಾಪಕರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಜಿಲಾನ್ ಬಾಷಾ, ಹಂಪಿ ಕನ್ನಡ ವಿಶ್ವವಿದ್ಯಾಾಲಯದ ಪತ್ರಿಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಾಧ್ಯಾಾಪಕ ಡಾ. ಲೋಕೇಶ್ ಮಾತನಾಡಿದರು.
ಕಾಲೇಜಿನ ಪ್ರಾಾಂಶುಪಾಲ ಪ್ರೊೊ. ಪ್ರಹ್ಲಾಾದ್ ಚೌಧರಿ ಅಧ್ಯಕ್ಷತೆ ವಹಿಸಿ, ಉದ್ಘಾಾಟನಾ ಭಾಷಣ ಮಾಡಿದರು. ಸಮಾಜಶಾಸ ವಿಭಾಗದ ಮುಖ್ಯಸ್ಥರಾದ ಡಾ. ಇಸ್ಮಾಾಯಿಲ್ ಎಂ.ಮಕಾಂದರ್ ಅವರು ಪ್ರಾಾಸ್ತಾಾವಿಕ ಭಾಷಣ ಮಾಡಿದರು. ಇತಿಹಾಸ ವಿಭಾಗದ ಸಹಾಯಕ ಪ್ರಾಾಧ್ಯಾಾಪಕ ಡಾ. ಕೆ.ಬಸಪ್ಪ ಅವರು ಸ್ವಾಾಗತಿಸಿದರು. ಡಾ. ಅಪರ್ಣಾ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪರಿಸರ ಸಂರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಿಸಿ : ಪ್ರೊ. ನಜೀರ್ ಅಹ್ಮದ್

