ಸುದ್ದಿಮೂಲ ವಾರ್ತೆ ಮಸ್ಕಿ, ಡಿ.20:
ಎಳ್ಳ ಅಮಾವಾಸ್ಯೆೆ ನಿಮಿತ್ತ ಪಟ್ಟಣದ ಕಟ್ಟೆೆದುರ್ಗಾದೇವಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆೆ ದುರ್ಗಾದೇವಿ ವಿಗ್ರಹಕ್ಕೆೆ ಅಭಿಷೇಕ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಸುತ್ತಲಿನ ಗ್ರಾಾಮಗಳ ಭಕ್ತರು ಭೇಟಿ ನೀಡಿ, ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಸಂಜೆ 6 ಗಂಟೆಗೆ ದುರ್ಗಾದೇವಿ ರಥೋತ್ಸವಕ್ಕೆೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಾಪನೆ ಮಾಡಿದ ನಂತರ ರಥೋತ್ಸವಕ್ಕೆೆ ಚಾಲನೆ ನೀಡಲಾಯಿತು.
ಭಕ್ತರು ಜಯ ಘೋಷ ಹಾಕಿದರು. ಉತ್ತುತ್ತಿಿ ಎಸೆದು ಭಕ್ತಿಿ ಸಮರ್ಪಿಸಿದರು. ಅನೇಕ ಮುಖಂಡರು, ನೂರಾರು ಭಕ್ತರು ಭಾಗವಹಿಸಿದ್ದರು.
ಅದ್ಧೂರಿಯಾಗಿ ಜರುಗಿದ ಕಟ್ಟೆ ದುರ್ಗಾದೇವಿ ಜಾತ್ರೆ

