ಸುದ್ದಿಮೂಲ ವಾರ್ತೆ ರಾಯಚೂರು, ಡಿ.20:
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾಾನಕ್ಕೆೆ ಉಪ ಚುನಾವಣೆಯ ಮತದಾನವು ಡಿಸೆಂಬರ್ 21ರಂದು ನಡೆಯಲಿದ್ದು, ಪಟ್ಟಣ ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯ ತಯಾರಿಕಾ ಘಟಕಗಳು, ಸಾಗಾಣಿಕೆ, ಸಂಗ್ರಹಣೆಯನ್ನು ಹಾಗೂ ಮಾರಾಟ ಮಳಿಗೆಗಳನ್ನು ಡಿ.21ರ ಮಧ್ಯರಾತ್ರಿಿ 12 ಗಂಟೆವರೆಗೆ ಬಂದ್ ಇಡುವಂತೆ ಹಾಗೂ ಜಾತ್ರೆೆ, ಜಾನುವಾರ ಸಂತೆ, ಉತ್ಸವ, ಉರುಸು ಹಾಗೂ ಮುಂತಾದವುಗಳನ್ನು ಮುಂದೂಡಿದ್ದಲ್ಲದೆ ಪಟ್ಟಣ ಪಂಚಾಯಿತಿ ವ್ಯಾಾಪ್ತಿಿಯಲ್ಲಿ ಬರುವ ಎಲ್ಲಾ ಆಯುಧಗಳನ್ನು ಪರವಾನಿಗೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿ ಹಾಗೂ ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ.

