ಸುದ್ದಿಮೂಲ ವಾರ್ತೆ ಕವಿತಾಳ, ಡಿ.20:
ಡಿ, 21 ರಿಂದ 24 ವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತಿದ್ದು 5 ವರ್ಷದ ಒಳಗಿನ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ನಮ್ಮ ಕ್ಲಿಿನಿಕ್ ಕಂದ್ರದ ಪ್ರಯೋಗಾಲಯ ತಂತ್ರಜ್ಞ ಹನುಮಂತ ಹೀರಾ ಅವರು ತಿಳಿಸಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಾಥಮಿಕ ಕನ್ಯಾಾ ಶಾಲೆ ಮಕ್ಕಳಿಂದ ಗುರುವಾರ ಹಮ್ಮಿಿಕೊಂಡ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಶಾಲೆ ಯಿಂದ ಸಂತೆ ಬಜಾರ, ಪಲ್ಲೆದ್ ಕಟ್ಟಿಿ ಸೇರಿದಂತೆ ಪ್ರಮುಖ ರಸ್ತೆೆಗಳಲ್ಲಿ ಮಕ್ಕಳಿಂದ ಜಾಥಾ ನಡೆಯಿತು. ಪೋಲಿಯೋ ಮುಕ್ತ ಭಾರತ ಮಾಡೋಣ ಎಂದು ಮಕ್ಕಳು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಅಯ್ಯನಗೌಡ, ಪ್ರಾಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸುಮಿತ್ರಾಾ, ಆಂಜನಮ್ಮ, ಶಿಕ್ಷಕರಾದ ಆವಿಷ್ ಪಾಷ, ಸುಪ್ರಿಿತಾ, ಬಸಮ್ಮ, ಮಂಜುಳಾ, ಶ್ರೀದೇವಿ, ಲಕ್ಷ್ಮಿಿ, ಆಶಾ ಕಾರ್ಯಕರ್ತರಾದ ಹುಚ್ಚಮ್ಮ, ನಿಂಗಮ್ಮ, ಶಾಕಿರ್ ಬಾನು, ರೇಣುಕಾ, ಸರಸ್ವತಿ ಮತ್ತು ಮಕ್ಕಳು ಉಪಸ್ಥಿಿತರಿದ್ದರು.
ತಪ್ಪದೇ ಲಸಿಕೆ ಹಾಕಿಸಿ – ಹೀರಾ

