ಸುದ್ದಿಮೂಲ ವಾರ್ತೆ ಮಾನ್ವಿ, ಡಿ.20:
ಮಾನ್ವಿಿ ತಾಲೂಕಿನ ಬೈಲ್ ಮರ್ಚೆಡ್ ಗ್ರಾಾಮದಲ್ಲಿ ಶುಕ್ರವಾರ ಬೆಳಿಗ್ಗೆೆ ಆಕಸ್ಮಿಿಕ ಬೆಂಕಿ ದುರಂತದಿಂದ ಹತ್ತಿಿ ಹಾಗೂ ಭತ್ತ ಮತ್ತು ಜೋಳದ ಸೊಪ್ಪೆೆಯ ಬಣವೆ ಸಂಪೂರ್ಣ ಸುಟ್ಟು ಹೋಗಿದೆ.
ಗ್ರಾಾಮದ ಚಂದ್ರ, ಅನುಸೂಯಮ್ಮ, ಆಂಜನೇಯ, ಈಶಪ್ಪ, ಮೌನೇಶ ಇವರ ಮನೆ ಹತ್ತಿಿರ ತಮ್ಮ ಜಾನುವಾರುಗಳಿಗಾಗಿ ಬಯಲು ಪ್ರದೇಶದಲ್ಲಿ ಸಂಗ್ರಹಿಸಿದ ಭತ್ತದ ಮೇವಿನ ಎರಡು ಬಣವೆಗಳು ಹಾಗೂ ಜೋಳದ ಸೊಪ್ಪೆೆಯ ಒಂದು ಬಣವೇ ಹಾಗೂ ರೈತರು ತಮ್ಮ 20 ಎಕರೆಯಲ್ಲಿ ಬೆಳೆದು ಸಂಗ್ರಹಿಸಿದ ಹತ್ತಿಿ ಸಂಪೂರ್ಣವಾಗಿ ಸುಟ್ಟು ಅಂದಾಜು 4 ಲಕ್ಷ ರೂ.ವರೆಗೆ ನಷ್ಟವಾಗಿರಬಹುದು ಎಂದು ಮಾನ್ವಿಿ ಆಗ್ನಿಿ ಶಾಮಕ ಠಾಣಾಧಿಕಾರಿ ತಿಳಿಸಿದರು.
ಆಗ್ನಿಇನಾಹುತವಾಗಿರುವ ಕುರಿತು ಮಾಹಿತಿ ತಿಳಿಯುತ್ತಲೇ ಮಾನ್ವಿಿ ಆಗ್ನಿಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿಗಳಾದ ಹಾಜಿಮೀಯ ಹಾಗೂ ಸಿಬ್ಬಂದಿಗಳು ಗ್ರಾಾಮಕ್ಕೆೆ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಗ್ರಾಾಮದಲ್ಲಿ ಇನ್ನೂ ಹೆಚ್ಚಿಿನ ಇತರ ಜನವಸತಿ ಪ್ರದೇಶಗಳಿಗೆ ವ್ಯಾಾಪಿಸಿ ಹಾನಿಯುಂಟಾಗುವುದನ್ನು ತಪ್ಪಿಿಸಿದರು.
ಬೆಂಕಿ ಹತ್ತುತ್ತಲೇ ಗ್ರಾಾಮಸ್ಥರು ಬಣವೆ ಹತ್ತಿಿರ ಕಟ್ಟಿಿ ಹಾಕಲಾದ ಹಸು ಮತ್ತು ಎಮೆಗಳನ್ನು ರಕ್ಷಿಸುವುದಕ್ಕೆೆ ಸಹಕಾರ ನೀಡಿದರು.
ಬೈಲ್ ಮರ್ಚೆಡ್ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ದುರಂತ, ಅಪಾರ ಹಾನಿ

