ಸುದ್ದಿಮೂಲ ವಾರ್ತೆ ರಾಯಚೂರು , ಡಿ.21:
ರಾಷ್ಟ್ರೀಯ ಪಲ್ಸ್ಪೋಲಿಯೋ ದಿನದ ಅಂಗವಾಗಿ ರಾಯಚೂರು ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ, ಜಿಲ್ಲಾಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಪಲ್ಸ್ ಪೋಲೀಯೋ ಅಭಿಯಾನಕ್ಕೆೆ ಮಕ್ಕಳಿಗೆ ಹನಿ ಹಾಕುವ ಮೂಲಕ ಸಚಿವ ಎನ್.ಎಸ್.ಬೋಸರಾಜ್ ಚಾಲನೆ ನೀಡಿದರು.
ನಗರದ ಕೆಇಬಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಪಲ್ಸ್ ಪೊಲೀಯೋ ನಿಯಂತ್ರಣಕ್ಕಾಾಗಿನ ಹನಿ ಹಾಕುವ ಕಾರ್ಯಕ್ಕೆೆ ಸಚಿವ, ಸಂಸದರು ಚಾಲನೆ ನೀಡಿ ದೇಶವನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತವನ್ನಾಾಗಿಸುವ ಮಹತ್ವಾಾಕಾಂಕ್ಷೆಯೊಂದಿಗೆ ಕರ್ನಾಟಕದಾದ್ಯಂತ ಇಂದಿನಿಂದ ಆರಂಭಿಸಿದ್ದು ಎಲ್ಲರೂ ಸಹಕರಿಸಲು ಕೋರಿದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ, 5 ವರ್ಷದ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಪೋಲಿಯೋ ಎಂಬುದು ಅತ್ಯಂತ ಭೀಕರ ರೋಗವಾಗಿದ್ದು, ಇದು ಭಾರತದ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟುಮಾಡುತ್ತದೆ. ಆದರೆ, ಲಸಿಕೆಯ ಮೂಲಕ ಇದನ್ನು ಶೇ.100 ರಷ್ಟು ತಡೆಗಟ್ಟಲು ಸಾಧ್ಯವಿದೆ. ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯಕ್ಕೆೆ ರಕ್ಷಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್, ಮಹಾನಗರ ಪಾಲಿಕೆಯ ಆಯುಕ್ತ ಜಬೀನ್ ಮಹೋಪಾತ್ರಘಿ,ಸಿಇಓ ಈಶ್ವರ ಕುಮಾರ ಕಾಂದೂ, ಡಿಎಚ್ಓ ಸುರೇಂದ್ರ ಬಾಬು, ಜಯಣ್ಣ, ಕೆ.ಶಾಂತಪ್ಪ, ಜಿ.ಶಿವಮೂರ್ತಿ , ಜಯವಂತರಾವ್ ಪತಂಗೆ, ತ್ರಿಿವಿಕ್ರಮ ಜೋಶಿ,ಅಮರೇಗೌಡ ಹಂಚಿನಾಳ,ಮಾನವ ಹಕ್ಕುಗಳ ಸಂಘದ ಅಧ್ಯಕ್ಷ ಚಂದ್ರಕಾಂತ ವಕೀಲ, ಬಸವರಾಜ್ ಪಾಟೀಲ್ ಅತ್ತನೂರು, ಬಿಇಓ ಡಾ.ಈರಣ್ಣ ಕೋಸಗಿ ಸೇರಿ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಮಕ್ಕಳ ಪಾಲಕರಿದ್ದರು.
ಪಲ್ಸ್ ಪೋಲೀಯೋ ಲಸಿಕೆ ಅಭಿಯಾನಕ್ಕೆ ಸಚಿವ, ಸಂಸದರಿಂದ ಚಾಲನೆ ಪೋಲೀಯೋ ಮುಕ್ತ ಭಾರತಕ್ಕೆ ಎರಡು ಹನಿ ಮಕ್ಕಳಿಗೆ ಹಾಕಿಸಲು ಸಲಹೆ

