ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.21:
ತಾಲೂಕಿನ ಗಬ್ಬೂರು ಕಂದಾಯ ಹೋಬಳಿಯ ಹೊನ್ನಟಗಿ ಗ್ರಾಾಮದಿಂದ ಮದರಕಲ್ ಹೋಗುವ ರಸ್ತೆೆಯ ಡಾಂಬರೀಕರಣ ಪ್ರಾಾರಂಭಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ಒತ್ತಾಾಯಿಸಿದ್ದಾಾರೆ.
ಅವರು ಭಾನುವಾರದಂದು ಪತ್ರಿಿಕಾ ಹೇಳಿಕೆ ನೀಡಿ, ಹೊನ್ನಟಗಿ ಗ್ರಾಾಮದಿಂದ ಮದರಕಲ್ ಗ್ರಾಾಮದ ರಸ್ತೆೆ ಸಂಪೂರ್ಣ ಹದಗೆಟ್ಟಿಿದ್ದು, ಪ್ರತಿ ನಿತ್ಯಾಾ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾಾರ್ಥಿಗಳಿಗೆ ಮತ್ತು ದ್ವಿಿ ಚಕ್ರವಾಹನಗಳು ಸೇರಿದಂತೆ ಜನ ಸಾಮಾನ್ಯರಿಗೆ ಮತ್ತು ವಾಹನಗಳಿಗೆ ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆೆ, ಅಕ್ಕಪಕ್ಕದಲ್ಲಿ ಜಾಲಿ ಬೆಳೆದಿರುವರಿಂದ ಸಂಚಾರಕ್ಕೆೆ ತುಂಬಾ ತೊಂದರೆ ಯಾಗಿರುವದನ್ನು ಅರಿತ ಸ್ಥಳೀಯ ಶಾಸಕಿ ಕರೆಮ್ಮ ಜಿ.ನಾಯಕ ಇವರು ಈ ರಸ್ತೆೆಗಾಗಿ ಸುಮಾರು ರೂ5.00ಕೋಟಿ ಅನುದಾನ ನೀಡಿ ಟೆಂಡರ್ ಕೂಡ ಆಗಿದ್ದು, ಕಾಮಗಾರಿ ಪ್ರಾಾರಂಭಿಸಲು ಶಾಸಕರು ಶಂಕುಸ್ಥಾಾಪನೆ ಮಾಡಿದ್ದು ಆದರೆ ಟೆಂಡರ್ ಪಡೆದ ಗುತ್ತೇದಾರನು ಮಾತ್ರ ಇನ್ನೂ ಕಾಮಗಾರಿ ಪ್ರಾಾರಂಭ ಮಾಡದೇ ಇರುವದರಿಂದ ದೇವರು ವರ ಕೊಟ್ಟರು ಪೂಜಾರಿ ವರ ನೀಡುತ್ತಿಿಲ್ಲಾಾ ಎನ್ನುವಂತೆ ಆಗಿದೆ.
ಮದರಕಲ್ ಮತ್ತು ಹೊನ್ನಟಗಿ ಗ್ರಾಾಮದ ಜನರು ದೇವದುರ್ಗ ತಾಲೂಕ ಕೇಂದ್ರ ಮತ್ತು ವಿದ್ಯಾಾರ್ಥಿಗಳು ಗಬ್ಬೂರು ಶಾಲಾ,ಕಾಲೇಜಿಗೆ ಹೋಗಬೇಕಾದರೆ ಇದೇ ರಸ್ತೆೆಯಲ್ಲಿ ಓಡಾಡಬೇಕಾಗಿದ್ದು, ರಸ್ತೆೆ ಹಾಳಾಗಿರುವದರಿಂದ ಸಂಚಾರಕ್ಕೆೆ ತುಂಬಾ ತೊಂದರೆಯಾಗಿದ್ದು, ಈ ರಸ್ತೆೆ ಕಾಮಗಾರಿ ಪ್ರಾಾರಂಭಿಸಲು ಇಲಾಖೆ ಅಧಿಕಾರಿಗಳ ಗಮನಕ್ಕೆೆ ತಂದು ಮನವಿ ಕೂಡ ಮಾಡಲಾಗಿದೆ. ಆದರೆ ಅಧಿಕಾರಿಗಳು ಮೌನ ವಹಿಸಿದ್ದು ಇದೇ ರೀತಿ ಮುಂದುವರೆದರೆ ಜಿಲ್ಲಾಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಹಮ್ಮಿಿಕೊಳ್ಳಲಾಗುವದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ತಿಳಿಸಿದ್ದಾಾರೆ.
ಮದರಕಲ್ – ಹೊನ್ನಟಗಿ ರಸ್ತೆ ಡಾಂಬಾರೀಕರಣಕ್ಕೆ ಆಗ್ರಹ

