ಸುದ್ದಿಮೂಲ ವಾರ್ತೆ ರಾಯಚೂರು, ಡಿ.21:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಡಿ.22ರಂದು ಪರಿಷತ್ತಿಿನ ನಡೆ, ಯುವಕರ ಕಡೆ ಪ್ರಚಾರ ಉಪನ್ಯಾಾಸ ಮಾಲೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ.
ಉಪನ್ಯಾಾಸ ಮಾಲೆಯಲ್ಲಿ ತಿರುಳಗನ್ನಡದ ಬೆಳ್ನುಡಿ ವಿಷಯದ ಮೇಲೆ ನಿವೃತ್ತ ಉಪನ್ಯಾಾಸಕ ಹಾಗೂ ಸಾಹಿತಿಗಳಾದ ಬಿ.ಜಿ. ಹುಲಿ ಚಾಲನೆ ನೀಡಿ ಮಾತನಾಡಲಿದ್ದಾಾರೆ. ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ವಹಿಸಿಕೊಳ್ಳಲಿದ್ದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಾಂಶುಪಾಲ ಚನ್ನಬಸಪ್ಪ ಪಸಾರ, ಪತ್ರಕರ್ತ ಆನಂದ ವಿ.ಕೆ.ಸೇರಿ ಹಲವರು ಭಾಗವಹಿಸಲಿದ್ದಾಾರೆ ಎಂದು ಕಾರ್ಯದರ್ಶಿಗಳಾದ ರಾವುತರಾವ್ ಬರೂರು, ಪ್ರತಿಭಾ ಗೋನಾಳ ತಿಳಿಸಿದ್ದಾಾರೆ.

