ಸುದ್ದಿಮೂಲ ವಾರ್ತೆ ಮಸ್ಕಿ, ಡಿ.21:
ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಾಮದಲ್ಲಿ ಕೃಷಿ ಋಷಿ’ ಘನಮಠ ನಾಗಭೂಷಣ ಶಿವಯೋಗಿಗಳ 146ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಡಿ. 24 ರಂದು ಮಹಾರಥೋತ್ಸವ, ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘನಮಠೇಶ್ವರ ಮಠದ ಪೀಠಾಧ್ಯಕ್ಷ ಗುರುಬಸವ ಸ್ವಾಾಮೀಜಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಡಿ. 24ರಂದು ಬೆಳಿಗ್ಗೆೆ 5 ಗಂಟೆಯ ಸುಮಾರಿಗೆ ಘನಮಠ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿಶೇಷ ಧಾರ್ಮಿಕ ಪೂಜೆಗಳು ನೆರವೇರಲಿವೆ. ನಂತರ ವಚನಕಟ್ಟಿಿನ ಹಾಗೂ ಘನಮಠ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ಪೂರ್ಣಕುಂಭ ಕಳಸಗಳೊಂದಿಗೆ ಮಹಿಳೆಯರು ಭಾಗವಹಿಸಲಿದ್ದಾರೆ. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಶೋಭೆ ನೀಡಲಿವೆ’ ಎಂದು ಹೇಳಿದರು.
ಈ ವೇಳೆ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಅನೇಕ ಮಠಾಧೀಶರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಘನಮಠ ಶಿವಯೋಗಿಗಳ ಮಹಾರಥೋತ್ಸವ ಜರುಗಲಿದೆ. ರಾತ್ರಿಿ ಧರ್ಮಜಾಗೃತಿ ಸಭೆ ಆಯೋಜಿಸಲಾಗಿದೆ. ಜಾತ್ರೆೆಯ ಅಂಗವಾಗಿ ಕೃಷಿ ವಿಚಾರ ಸಂಕಿರಣ, ಕೃಷಿ ವಸ್ತು ಪ್ರದರ್ಶನ ಸೇರಿದಂತೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗಿದೆ ಸಾವಿರಾರು ಸಂಖ್ಯೆೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದು ಸ್ವಾಾಮೀಜಿ ತಿಳಿಸಿದರು.
ಡಿ.24ರಂದು ಶಿವಯೋಗಿಗಳ ರಥೋತ್ಸವ

