ಸುದ್ದಿಮೂಲ ವಾರ್ತೆ ರಾಯಚೂರು , ಡಿ.21:
ಬನ್ನಂಜೆ ಗೋವಿಂದಾಚಾರ್ಯರು ವಿದ್ಯಾಾವಾಚಸ್ಪತಿಗಳಾಗಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆೆ ಅದ್ವಿಿತಿಯ ಕೊಡುಗೆ ನೀಡಿದ್ದಾಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ಶನಿವಾರ ಸಂಜೆ ನಗರದ ಶ್ರೀ ಜೋಡು ವೀರಾಂಜನೇಯ ದೇವಸ್ಥಾಾನದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾಾನ ಬೆಂಗಳೂರು, ಜನ ಸೇವಾ ಪ್ರತಿಷ್ಠಾಾನ ರಾಯಚೂರು, ಶ್ರುತಿ ಸಾಹಿತ್ಯ ಮೇಳ ರಾಯಚೂರು ಇವರ ಸಯುಕ್ತ ಆಶ್ರಯದಲ್ಲಿ ವಿದ್ಯಾಾ ವಾಚಸ್ಪತಿಗಳಾದ ಬನ್ನಂಜೆ ಗೋವಿಂದಾಚಾರ್ಯರ ಸ್ಮರಣೋತ್ಸವದ ಅಂಗವಾಗಿ ಜರುಗಿದ ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಮಹನೀಯರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಾಗಿದೆ. ಈ ನಿಟ್ಟಿಿನಲ್ಲಿ ಸಂಸ್ಥೆೆಗಳು ಸಂಘಟಿತವಾಗಿ ಆಯೋಜಿಸಿದ ಕಾರ್ಯ ಶ್ಲಾಾಘನೀಯವಾಗಿದೆ ಎಂದು ಹೇಳಿದರು.
ಸಂಸದ ಜಿ.ಕುಮಾರ ನಾಯಕ ನಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಸಾಮಾಜಿಕ ಮೌಲ್ಯಗಳು, ಆದರ್ಶಗಳು, ಒಳ್ಳೆೆಯ ವಿಚಾರಗಳನ್ನು ಬನ್ನಂಜೆ ಗೋವಿಂದಾಚಾರ್ಯರು ದೇಶ ವಿದೇಶಗಳಲ್ಲಿ ಅವರ ಪ್ರವಚನವು ಸಾಕಷ್ಟು ಜನಪ್ರಿಿಯತೆ ಪಡೆದು ವಿಚಾರಧಾರೆಗಳಿಂದ ಸಾಕಷ್ಟು ಜನ ತಮ್ಮ ಜೀವನ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಖ್ಯಾಾತ ಅಧ್ಯಾಾತ್ಮದ ಚಿಂತಕರಾದ ಡಾ. ವೀಣಾ ಬನ್ನಂಜೆ ಮಾತನಾಡಿ ಬನ್ನಂಜೆ ಗೋವಿಂದಾಚಾರ್ಯರು ನಮ್ಮ ತಂದೆಯವರಾಗಿರಬಹುದು, ಆದರೆ ಅವರನ್ನು ಪ್ರೀೀತಿಸಿ ಅವರ ಮಾರ್ಗದರ್ಶದಲ್ಲಿ ನಡೆಯುವ ಸಾವಿರಾರು ಅವರ ಅಭಿಮಾನಿಗಳು ಇಂದು ಜಗತ್ತಿಿನಾದ್ಯಂತ ಕಾಣುತ್ತೇವೆ. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾಾನ ಬೆಂಗಳೂರು ವತಿಯಿಂದ ಈಗಾಗಲೇ ನಾಡಿನಾದ್ಯಂತ ಬನ್ನಂಜೆ 90 ವಿಶ್ವ ನಮನ ಹಮ್ಮಿಿಕೊಳ್ಳುತ್ತಿಿದ್ದೇವೆ. ಹುಬ್ಬಳ್ಳಿಿ ಧಾರವಾಡ ,ಋಷಿಕೇಶ, ಮುಂತಾದ ಕಡೆಗಳಲ್ಲಿ ಹಮ್ಮಿಿಕೊಂಡಿದ್ದೇವೆ. ಆಗಸ್ಟ್ 1, 2, 3, ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಆಯೋಜಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜನ ಸೇವಾದ ಪ್ರತಿಷ್ಠಾಾನದ ಅಧ್ಯಕ್ಷ ತ್ರಿಿವಿಕ್ರಮ ಜೋಶಿ, ವಿದ್ವಾಾಂಸ ರಮೇಶ್ ವಾಸುದೇವ ಮಾತನಾಡಿದರು. ಕಾರ್ಯಕ್ರಮದಲ್ಲಿ ಬನ್ನಂಜೆ ಅವರ ಒಡನಾಡಿಗಳಾಗಿರುವ ನರಸಿಂಗರಾವ್ ದೇಶಪಾಂಡೆ ಉಡುಪಿ ಹೋಟೆಲ್ ನಾರಾಯಣರಾವ್ ಕೇಕೂಡ, ಬ್ಯಾಾಂಕ್ ನರಸಿಂಗ ರಾವ್, ಬಂಡುರಾವ್ ಚಾಗಿ ಇವರಿಗೆ ಸನ್ಮಾಾನಿಸಲಾಯಿತು.
ಕಾರ್ಯಕ್ರಮವು ಮೊದಲಿಗೆ ಸುಮಾ ಶಾಸಿ ಹಾಗೂ ಕವಿತಾ ಉಡುಪ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಶ್ರುತಿ ಸಾಹಿತ್ಯ ಮೇಳ ಅಧ್ಯಕ್ಷ ಮುರಳಿಧರ ಕುಲಕರ್ಣಿ, ವಸುದೇಂದ್ರ ಸಿರವಾರ,ರಮೇಶ್ ಕುಲಕರ್ಣಿ, ವೇಣುಗೋಪಾಲ ಇನಾಮ್ದಾಾರ್, ದಾನಪ್ಪ ಯಾದವ, ವೀರ ಹನುಮಾನ, ವಿಷ್ಣು ತೀರ್ಥ ಸಿರವಾರ, ಅರವಿಂದ ಕುಲಕರ್ಣಿ ಮುಂತಾದವರು ಉಪಸ್ಥಿಿತರಿದ್ದರು.
ಬನ್ನಂಜೆ 90 ವಿಶ್ವ ನಮನ ಕಾರ್ಯಕ್ರಮ ಸಂಸ್ಕೃತ, ಕನ್ನಡ ಸಾಹಿತ್ಯಕ್ಕೆ ಬನ್ನಂಜೆಯವರ ಕೊಡುಗೆ ಅಪಾರ – ಬೋಸರಾಜ್

