ಸುದ್ದಿಮೂಲ ವಾರ್ತೆ ಮಾನ್ವಿ, ಡಿ.21
ಮಾನ್ವಿಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆೆ ಸಭಾಂಗಣದಲ್ಲಿ ಹಮ್ಮಿಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ಹಾಕುವ ಅಭಿಯಾನಕ್ಕೆೆ ಶಾಸಕ ಹಂಪಯ್ಯ ನಾಯಕ ರವಿವಾರ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ತಾಲೂಕಿನಾದ್ಯಾಾಂತ ಆರೋಗ್ಯ ಇಲಾಖೆಯಿಂದ ಪಲ್ಸ್ ಪೋಲಿಯೋ ಲಸಿಕೆ ನೀಡುವುದಕ್ಕೆೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿಿದೆ. ನಮ್ಮ ದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿವರ್ಷ 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ದೇಶವನ್ನು ಪೋಲಿಯೋ ಮುಕ್ತವಾಗಿಸಿವೆ. ಆದರೂ ಪೋಲಿಯೋದಿಂದ ಮಕ್ಕಳಿಗೆ ಅಂಗವೈಕಲ್ಯ ಉಂಟಾಗದಂತೆ ಮುಂಜಾಗ್ರತೆಯಾಗಿ ಪೋಲಿಯೋ ಲಸಿಕೆ ಹಾಕಲಾಗುತ್ತಿಿದೆ. ಮನೆಗೆ ಮನೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಪೋಲಿಯೋ ಲಸಿಕೆ ಹಾಕುತ್ತಿಿದ್ದಾರೆ. ಪಾಲಕರು ಅಗತ್ಯ ಸಹಕಾರ ನೀಡುವ ಮೂಲಕ ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ, ಪೋಲಿಯೋ ಕಾಯಿಲೆ ಬಾರದಂತೆ ತಡೆಯಬೇಕು ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಾಧಿಕಾರಿ ಡಾ.ಶರಣಬಸವರಾಜ ಮಾತನಾಡಿ ತಾಲೂಕಿನಲ್ಲಿ 0-5 ವರ್ಷದ 47,920 ಮಕ್ಕಳನ್ನು ಆರೋಗ್ಯ ಇಲಾಖೆಯಿಂದ ಗುರುತಿಸಲಾಗಿದೆ. ಪೋಲಿಯೋ ಲಸಿಕೆ ಹಾಕುವುದಕ್ಕೆೆ 221 ಟೀಮುಗಳನ್ನು ರಚಿಸಲಾಗಿದೆ. ಹಾಗೂ 33 ಸಂಚಾರಿ ಟೀಮುಗಳ ಮೂಲಕ ವ್ಯಾಾಕ್ಸಿಿನ್ ಸಾಮಾಗ್ರಿಿಗಳನ್ನು ತಲುಪಿಸುವುದಕ್ಕೆೆ ಕ್ರಮ ಕೈಗೊಳ್ಳಲಾಗಿದೆ . 442 ಆಶಾ, ಅಂಗನವಾಡಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರನ್ನು ಪೋಲಿಯೊ ವ್ಯಾಾಕ್ಸಿಿನ್ ಹಾಕಲು ನೇಮಿಸಲಾಗಿದೆ. 47 ಸೂಪರ್ ವೈಸರ್ ಗಳನ್ನು ನೇಮಿಸಲಾಗಿದೆ ಮೊದಲ ಹಂತದಲ್ಲಿ ಬೂತ್ ಮಟ್ಟದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ ತಾಲೂಕಿನ ಯಾವೊಂದು ಮಗು ಪೋಲಿಯೋ ಲಸಿಕೆಯಿಂದ ವಂಚಿವಾಗದಂತೆ ಆರೋಗ್ಯ ಇಲಾಖೆ ಅಗತ್ಯ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಾಮಿ, ಪುರಸಭೆ ಮುಖ್ಯಾಾಧಿಕಾರಿ ಪರಶುರಾಮ ದೇವಮಾನೆ, ನಯೋಪ್ರಾಾ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಗ್ಯಾಾರಂಟಿ ಯೋಜನಾ ಅನುಷ್ಠಾಾನ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪುರಸಭೆಯ ನಾಮ ನಿರ್ದೇಶನ ಸದಸ್ಯರಾದ ಕಾಮೇಶ ಮಂದಕಲ್, ಸತ್ತಾಾರ್ ಬಂಗ್ಲೆೆವಾಲೆ, ಪ್ರಭಾರಿ ಸಿಡಿಪಿಓ ಗೋಕುಲ್ ಸಾಬ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪಾಲಕರು ಭಾಗವಹಿಸಿದ್ದರು.
ಮಾನ್ವಿ : ಪಲ್ಸ್ ಪೋಲಿಯೊ ಅಭಿಯಾನಕ್ಕೆ ಶಾಸಕ ಹಂಪಯ್ಯ ನಾಯಕ ಚಾಲನೆ

