ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.21:
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಸೀತಾರಾಮ ತಾಂ ಡಾ ಗ್ರಾಾಪಂ ವ್ಯಾಾಪ್ತಿಿಯ 8 ಸ್ಥಾಾನಗಳಿಗೆ ಸಾರ್ವತ್ರಿಿಕ ಚುನಾವಣೆ ನಡೆದಿದ್ದು, ಭಾ ನುವಾರ ಶಾಂತಿಯುತ ಮತದಾನ ನಡೆದಿದ್ದು, ಶೇ. 87.20 ಮತದಾನ ದಾಖಲಾಗಿದೆ.
ಬೆಳಗ್ಗೆೆ 7 ಗಂಟೆಯಿಂದ ಪ್ರಾಾರಂಭವಾದ ಮತದಾನ ಪ್ರಕ್ರಿಿಯೆ ಬಿರುಸಿನಿಂದ ಸಾಗಿ ಒಟ್ಟು ಮತದಾರರು 2,842 ಮತದಾರ ಪೈಕಿ 2504 ಮತದಾರರು ತ ಮ್ಮ ಹಕ್ಕು ಚಲಾಯಿಸಿದರು. 1307 ಪುರುಷ ಮತದಾರರು, 1197 ಮಹಿಳಾ ಮತದಾರರು ಮತ ಚಲಾಯಿಸಿದರು.ಶೇ. 8 7.20 ಮತದಾನ ದಾಖಲಾಗಿದೆ.
ಎಂಟು 8 ಸ್ಥಾಾನಗಳಿಗೆ ಬರೋಬ್ಬರಿ 23 ಜನ ಅಭ್ಯರ್ಥಿಗಳು ಕಣದಲ್ಲಿದ್ದಾ ರೆ. ಸೀತಾರಾಮ ತಾಂಡಾದಲ್ಲಿ 4 ಸ್ಥಾಾನಗಳಿವೆ. ನಲ್ಲಾಪುರದಲ್ಲಿ 3 ಮತ್ತು ಚಿನ್ನಾಾ ಪುರ ಗ್ರಾಾಮದಲ್ಲಿ ಒಂದು ಸ್ಥಾಾನವಿದೆ. 23 ಅ ಭ್ಯರ್ಥಿಗಳು ಕಣದಲ್ಲಿದ್ದು, ಮತ ದಾರರು ಇವರ ಭವಿಷ್ಯ ಬರೆದಿದ್ದಾರೆ.
ಸೀತಾರಾಂತಾಂಡಾದಲ್ಲಿ ನಾಲ್ಕು ಸ್ಥಾಾನಗಳಿಗೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ನಾಲ್ಕು ಸ್ಥಾಾನಗಳಿಗೆ 1089 ಮತದಾರರು ಹಕ್ಕು ಚಲಾಯಿಸಿದ್ದು, ಶೇ.89. 23ರಷ್ಟು ಮತದಾನ ದಾಖಲಾಗಿದೆ. ನಲ್ಲಾಪುರದಲ್ಲಿ ಮೂರು ಸ್ಥಾಾನಗಳಿಗೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.1025 ಮತದಾರರು ಹಕ್ಕುಚಲಾಯಿಸಿದ್ದು, ಶೇ. 88ರಷ್ಟು ಮತದಾನ ದಾಖಲಾಗಿದೆ. ಇನ್ನೂ ಹೊಸ ಚಿನ್ನಾಾಪುರ ಗ್ರಾಾಮದಲ್ಲಿ ಒಂ ದು ಸ್ಥಾಾನಕ್ಕೆೆ ಮೂವರು ಕಣದಲ್ಲಿದ್ದು, 390 ಮತದಾರರು ಹಕ್ಕು ಚಲಾಯಿಸಿ ದ್ದಾರೆ. ಶೇ.83ರಷ್ಟು ಮತದಾನ ದಾಖಲಾಗಿದೆ.
ನಗರದ ತಹಸೀಲ್ದಾಾರ ಕಚೇರಿಯಲ್ಲಿ ಡಿ.24ರಂದು ಬೆಳಗ್ಗೆೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಿಕೇರಿ, ಎಸ್ಪಿಿ ಎಸ್. ಜಾಹ್ನವಿ ಮತಗಟ್ಟೆೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಎಸ್ಪಿಿ ಮಂಜುನಾಥ್, ಡಿವೈಎಸ್ಪಿಿ ಡಾ. ಮಂಜುನಾಥ್ ತಳವಾರ, ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ, ಕಮಲಾಪುರ ಪಿ ಎಸ್ ಐ ಸಂತೋಷ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

