ಸುದ್ದಿಮೂಲ ವಾರ್ತೆ ರಾಯಚೂರು , ಡಿ.21:
ಶರಣ ಸಂಸ್ಕೃತಿ ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ಬಸವ ಕೇಂದ್ರದಲ್ಲಿರುವ ಮರುಳ ಶಂಕರ ದೇವರ ಪ್ರಸಾದ ನಿಲಯ ಉದ್ಘಾಾಟಿಸಿ ಮಾತನಾಡಿದರು. ಬಸವ ಕೇಂದ್ರವು ಸಮಾನತೆಯ ತತ್ವದ ಡಿಯಲ್ಲಿ ಅನೇಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿ, ಬಸವ ಕೇಂದ್ರಕ್ಕೆೆ ಸದಾ ತಮ್ಮ ಸಹಾಯ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
ಸಂಸದ ಜಿ. ಕುಮಾರನಾಯಕ ಮಾತನಾಡಿ, ಗುರು ಬಸವಣ್ಣನವರು ಕೊಟ್ಟ ವಿಶೇಷ ಸಂಸ್ಕೃತಿಯೊಂದಿಗೆ ಭಾರತ ಮುಂದೆ ಸಾಗಬೇಕು. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ನಾವು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರು.
ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು. ಬಸವ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಾಘಿಸಿದರು. ಕೇಂದ್ರದಲ್ಲಿ ಯಾವತ್ತು ಇಂಥ ಕಾರ್ಯಕ್ರಮಗಳು ಅತ್ಯಂತ ಅಚ್ಚುಕಟ್ಟಾಾಗಿ ನೆರವೇರುತ್ತವೆ. ಬಸವಣ್ಣನವರ ಹಾಗೂ ಶರಣರ ವಚನಗಳಲ್ಲಿ ಮಗ್ನರಾಗಿ ಜೀವ ತುಂಬುವ ಕಾರ್ಯಕ್ರಮಗಳನ್ನು ಅಕ್ಕನ ಬಳಗದವರು ನಡೆಸಿಕೊಂಡು ಹೋಗುತ್ತಿಿರುವುದು ಸಂತೋಷ. ಇದೇ ಸಂದರ್ಭದಲ್ಲಿ ಬಸವೇಶ್ವರ ಕಾಲೋನಿಯಲ್ಲಿರುವ ಬಸವ ಉದ್ಯಾಾನವನನ್ನು ಅಭಿವೃದ್ಧಿಿ ಮಾಡಿ ಕೊಡುವ ಭರವಸೆ ನೀಡಿದರು.
ಅಧ್ಯಕ್ಷ ಸ್ಥಾಾನ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಗೌರವಾಧ್ಯಕ್ಷ ನಾಗನಗೌಡರು, ಚಂದ್ರಕಲಾ, ಡಾ. ವಿರೂಪಾಕ್ಷಪ್ಪ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚನ್ನಬಸವ, ಗಿರಿಜಾ ಶಂಕರ, ಚುಕ್ಕಿಿ ಸೂಗಪ್ಪ ಸಾಹುಕಾರ, ಜಯಂತರವ್ ಪತಂಗೆ ಉಪಸ್ಥಿಿತರಿದ್ದರು.
ಮರುಳ ಶಂಕರ ದೇವರ ಪ್ರಸಾದ ನಿಲಯ ಉದ್ಘಾಾಟನೆ ಶರಣ ಸಂಸ್ಕೃತಿ ಸರ್ವ ಕಾಲಕ್ಕೂ ಪ್ರಸ್ತುತ – ಬೋಸರಾಜ್

