ಸುದ್ದಿಮೂಲ ವಾರ್ತೆ ಅರಕೇರಾ, ಡಿ.21:
ತಾಲ್ಲೂಕಿನ ಹೆಚ್.ಸಿದ್ದಾಪುರ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯ ಹೊಸೂರು ಸಿದ್ದಾಪುರ, ಬೊಮ್ಮನಹಳ್ಳಿಿ, ಬಸ್ಸಾಾಪುರ, ಮದುವಾಯನಗಡ್ಡಿಿ, ತಿಮ್ಮಾಾಪುರ, ಹಾಗೂ ಹೊರಟ್ಟಿಿ (ಡಿ) ಆರು ಗ್ರಾಾಮಗಳನ್ನು ದೇವದುರ್ಗ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಲು ಸರ್ಕಾರ ಪ್ರಾಾಥಮಿಕ ಅಧಿಸೂಚನೆ ಹೊರಡಿಸಿದೆ ಎಂದು ತಹಶೀಲ್ದಾಾರ ಅಮರೇಶ ಬಿರಾದಾರ ಅವರು ತಿಳಿಸಿದ್ದಾಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ನೀಡಿದ್ದುಘಿ, ದಿನಾಂಕ 01-12-2025 ರಂದು ರಾಜ್ಯ ಸರ್ಕಾರ ಪ್ರಾಾಥಮಿಕ ಅಧಿಸೂಚನೆ ಹೊರಡಿಸಿದೆ. ದಿನಾಂಕ 02-12-2025 ರಂದು ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದೆ. 30 ದಿನಗಳ ಒಳಗಾಗಿ ಸ್ವೀಕೃತವಾಗುವ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

