ಸುದ್ದಿಮೂಲ ವಾರ್ತೆ ಬೀದರ್, ಡಿ.22:
ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಾಪಿಸುವ ಗುರಿ ಹೊಂದಿದ್ದು, ಇದರ ಮುಖ್ಯ ಉದ್ದೇಶ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಆಸಕ್ತಿಿಯನ್ನು ಮೂಡಿಸುವುದು ಮತ್ತು ಮನೆಗಳನ್ನು ಜ್ಞಾನ ಮಂದಿರಗಳನ್ನಾಾಗಿ ಪರಿವರ್ತಿಸುವುದು. ಈ ಯೋಜನೆಯಡಿ ಮನೆಗಳಿಗೆ ಕನ್ನಡ ಪುಸ್ತಕಗಳನ್ನು ತಲುಪಿಸಿ, ಪುಸ್ತಕಗಳನ್ನು ಕೊಳ್ಳುವವರ ಸಂಖ್ಯೆೆ ಕಡಿಮೆಯಾಗುತ್ತಿಿರುವ ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಾಪಿಸುವುದೇ ಇದರ ಗುರಿಯಾಗಿದೆ ಎಂದು ಕನ್ನಡ ಪುಸ್ತಕ ಪ್ರಾಾಧಿಕಾರ ಅಧ್ಯಕ್ಷ ಡಾ.ಮಾನಸ ಹೇಳಿದರು.
ಸೋಮವಾರ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಾಧಿಕಾರ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಬೀದರ ವತಿಯಿಂದ ಕನ್ನಡ ಪುಸ್ತಕ ಪ್ರಾಾಧಿಕಾರದ ಯೋಜನೆ ’ಮನೆಗೊಂದು ಗ್ರಂಥಾಲಯ’ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪುಸ್ತಕಗಳನ್ನು ಪ್ರೀತಿಸೋಣ ಪುಸ್ತಕ ಸಂಸ್ಕೃತಿಯನ್ನು ಹಂಚೋಣ ಪುಸ್ತಕ ಸರಿಯಾದ ರೀತಿಯಿಂದ ಬಳಸಿಕೊಳ್ಳಬೇಕು, ಮನೆಗೊಂದು ಪುಸ್ತಕ ಭಾಷಣಕ್ಕೆೆ ಮಾತ್ರ ಸೀಮಿತವಲ್ಲ ಕನ್ನಡ ಭವನ ಬಿಟ್ಟು ನಾವು ಹೊರಗೆ ಬರಬೇಕು. ಪುಸ್ತಕ ಪ್ರತಿ ಬಹಳ ದಿನಗಳಿಂದ ಜಿಲ್ಲೆಯಲ್ಲಿ ಇದೆ, ಪುಸ್ತಕ ಮಾದ್ಯಮ ಬಹಳಷ್ಟು ಬೆಳೆದಿದೆ, ರಾಶಿ ರಾಶಿಯಾಗಿ ಪುಸ್ತಕಗಳು ಬರ್ತಾಯಿದೆ, ಈಗಾಗಲೇ ಪ್ರಾಾಧಿಕಾರದಿಂದ ’’ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮ ನಡೆಯುತಿದೆ. ಪ್ರತಿ ತಿಂಗಳಿಗೆ ಕನಿಷ್ಠ ನೂರು ಮನೆಯಲ್ಲಿ ನೂರು ಪುಸ್ತಕ ಪರಿಚಯ ಸಂವಾದ ನಡೆಸುವ ಮುಖ್ಯ ಉದ್ದೇಶವಾಗಿದೆ, ಇನ್ನೊೊಂದು ಮನೆಗೊಂದು ಗ್ರಂಥಾಲಯ ಕನ್ನಡ ಪುಸ್ತಕ ಪ್ರಾಾಧಿಕಾರದಿಂದ ಈ ಎರಡು ಯೋಜನೆಯನ್ನು ಹಾಕಿಕೊಂಡಿದ್ದೇವೆ. ಶಾಲೆಯಲ್ಲಿ ಮಕ್ಕಳನು ಪುಸ್ತಕ ಓದಲು ಅಭ್ಯಾಾಸ ಮಾಡಿಕೊಳ್ಳಬೇಕು, ನಮ್ಮ ಜ್ಞಾನದ ಮೂಲ ಪುಸ್ತಕವಾಗಿದೆ, ಮನೆಗೊಂದು ಗ್ರಂಥಾಲಯ ಭಾವನೆ ಹೊಂದಿರಬೇಕು 10 ಜನ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ರಚನೆಯಾಗಿದ್ದು, ಮನೆಯಲ್ಲಿ ಗ್ರಂಥಾಲಯ ಬೀಜವನ್ನು ಬಿತ್ತಬೇಕು ಎಂದು ಹೇಳಿದರು.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಗ್ರಂಥ ಹೊಸ ಕ್ರಾಾಂತಿ ಮಾಡಬೇಕಾಗಿದೆ, ದೇವಾಲಯದಿಂದ ಗ್ರಂಥ ಅತಿ ಮುಖ್ಯವಾಗಿದೆ. ಪುಸ್ತಕ ಸಂಸ್ಕೃತಿ ಅಕ್ಷರ ಸಂಸ್ಕೃತಿ ಉಳಿಯಬೇಕಾಗಿದೆ. 45 ಕ್ಕೂ ಹೆಚ್ಚು ಕೃತಿ ಹೊರಗೆ ತಂದಿದ್ದೇವೆ ಎಂದರು.
ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾಗಿ ಬಾಲಾಜಿ ಕುಂಬಾರ, ವೀರಪ್ಪಾಾ, ಕುಪೇಂದ್ರ ಹೊಸಮನಿ, ಜೈದೇವಿ ಆರ್, ಎದಲಾಪುರೆ, ವಿರಶೆಟ್ಟಿಿ ಎಂ ಪಾಟೀಲ್, ಚೇತನಾ ಚನ್ನಶೆಟ್ಟಿಿ, ಅಬ್ದುಲ್ ರಹೀಮ್, ಲಕ್ಷ್ಮಣ ಮೇತ್ರೆೆ, ಪಾರ್ವತಿ ಸೋನಾರೆ ಅವರಿಗೆ ನೇಮಕ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಾಮ ಶಿಂಧೆ, ಸಂಜೀವಕುಮಾರ ಅತಿವಾಳೆ, ವಿಜಯಕುಮಾರ ಸೋನಾರ್, ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಒಂದು ಲಕ್ಷ ಗ್ರಂಥಾಲಯ ನಿರ್ಮಿಸುವ ಗುರಿ – ಡಾ.ಮಾನಸ

