ಸುದ್ದಿಮೂಲ ವಾರ್ತೆ ಮಸ್ಕಿ, ಡಿ.22:
ಪಲ್ಸ್ ಪೋಲಿಯೋ ಎರಡು ದಿನದ ಅಂಗವಾಗಿ ಪಟ್ಟಣದ ಪ್ರಾಾಥಮಿಕ ಅರೋಗ್ಯ ಕೇಂದ್ರದಿಂದ ಮನೆ ಮನೆಗೆ ವೈದ್ಯಾಾಧಿಕಾರಿಗಳು ಭೇಟಿ ನೀಡಿ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು.
ಈ ವೇಳೆ ಮಸ್ಕಿಿ ಪ್ರಾಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಾಧಿಕಾರಿ ಹಣಮಂತ್ರಾಾಯ ತಳ್ಳಳ್ಳಿಿ, ಪಲ್ಸ್ ಪೋಲಿಯೋ 2ನೇ ದಿನ ಕಾರ್ಯಕ್ರಮ ಪರಿಶೀಲಿಸಿ ನಂತರ ಮಾತನಾಡಿದ ಅವರು, ಡಿಸೆಂಬರ್ 21 ಆರೋಗ್ಯವೇ ಭಾಗ್ಯ ಮನುಷ್ಯ ಅರೋಗ್ಯವಾಗಿ ಇರಬೇಕು ಎಂದರೆ ಸ್ವಚ್ಛತೆ ಮತ್ತು ಆರೋಗ್ಯಕರ ಆಹಾರ ಸೇವನೆ ಮುಖ್ಯ ಮತ್ತು ಸರಕಾರದಿಂದ ಬರುವ ಎಲ್ಲಾ ಸವಲತ್ತುಗಳು ಪಡೆದುಕೊಳ್ಳಬೇಕು ಅದರಲ್ಲಿ ಮುಖ್ಯವಾಗಿ ಎರಡು ಹನಿ ಪೋಲಿಯೋ ಮುಖ್ಯವಾಗಿರುತ್ತದೆ ಇದರಿಂದಾಗಿ ಪೋಲಿಯೋ ಕೊನೆಗೊಳಿಸುವ ಉದ್ದೇಶದಿಂದ್ದಾಗಿ ಈ ದಿನ ಪ್ರಾಾಮುಖ್ಯತೆ ಪಡೆದುಕೊಂಡಿದೆೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಮಹೇಶ್, ಮಸ್ಕಿಿ ಕ್ಷಯ ರೋಗ ಘಟಕದ ಮೇಲ್ವಿಿಚಾರಕ ದೇವರಾಜ್,ಾರ್ಮಸಿ ಅಧಿಕಾರಿ ಉಮೇಶ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಸಿಬ್ಬಂದಿಗಳು ಭಾಗಿಯಾಗಿದ್ದರು.
ಮಸ್ಕಿ : ಪಲ್ಸ್ ಪೋಲಿಯೋ 2ನೇ ದಿನ; ಮನೆ ಮನೆಗೆ ವೈದ್ಯಾಧಿಕಾರಿಗಳು ಭೇಟಿ

