ಸುದ್ದಿಮೂಲ ವಾರ್ತೆ ಸಿರವಾರ, ಡಿ.22:
ಗ್ರಾಾಮೀಣ ಕ್ರೀೆಡೆಗಳಾದ ಕಬಡ್ಡಿಿ, ಖೋಖೊಗಳಂತಹ ಸ್ಥಳೀಯ ಆಟಗಳ ಕ್ರೀೆಡಾಕೂಟಗಳನ್ನು ಆಯೋಜಿಸುವ ಮೂಲಕ ಆಟಗಾರರಿಗೆ ಹೆಚ್ಚಿಿನ ಪ್ರೋೋತ್ಸಾಾಹ ನೀಡಬೇಕು’ಎಂದು ಜೆಡಿಎಸ್ ಮುಖಂಡ ಜಿ.ಲೋಕರೆಡ್ಡಿಿ ಹೇಳಿದರು.
ಅವರು ತಾಲ್ಲೂಕಿನ ಮರಾಠ ಗ್ರಾಾಮದ ಶ್ರೀ ಆಂಜನೇಯ ಜಾತ್ರಾಾ ಮಹೋತ್ಸವದ ಅಂಗವಾಗಿ ಗ್ರಾಾಮಸ್ಥರು ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾಾವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಂದ್ಯಾಾವಳಿಯ ಕಾರ್ಯಕ್ರಮವನ್ನು ನವಲಕಲ್ಲು ಬೃಹನ್ಮಠದ ಗಂಗಾಧರಪ್ಪ ತಾತನವರು ಉದ್ಘಾಾಟಿಸಿದರು.
ಗ್ರಾಾಮಸ್ಥರು ಜಾತ್ರಾಾ ಮಹೋತ್ಸವದ ಅಂಗವಾಗಿ ಖೋಖೋ ಪಂದ್ಯಾಾವಳಿಯನ್ನು ಆಯೋಜಿಸಿರುವುದು ಶ್ಲಾಾಘನೀಯವಾಗಿದ್ದು, ಇಂತಹ ಪಂದ್ಯಾಾವಳಿಗಳಲ್ಲಿ ಹೆಚ್ಚು ತಂಡಗಳು ಭಾಗವಹಿಸುವ ಜೊತೆಗೆ ಹೊಸ ಆಟಗಾರರನ್ನು ಬೆಳಕಿಗೆ ತರುವಂತಾಗಬೇಕು ಎಂದರು.
ಪಂದ್ಯಾಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಸಂತೆಕಲ್ಲೂರು ತಂಡ ಪ್ರಥಮ, ಮರಾಠ ತಂಡ ದ್ವಿಿತೀಯ, ಹರವಿ ತಂಡ ತೃತೀಯ ಸ್ಥಾಾನ ಪಡೆದವು.
ಪ್ರಥಮ ಬಹುಮಾನ 20 ಸಾವಿರ ನಗದು ಬ್ರಿಿಜೇಶ ಪಾಟೀಲ , ದ್ವಿಿತೀಯ ಬಹುಮಾನ 10 ಸಾವಿರ ಅರಕೇರಿ ಶಿವಶರಣ, ತೃತೀಯ 7 ಸಾವಿರ ತಾಯಣ್ಣ ನೀಲಗಲ್ ವಕೀಲ ನೀಡಿದರು.
ಈ ಸಂದರ್ಭದಲ್ಲಿ ಬಿ.ಆರ್. ನಾಗರಾಜಗೌಡ, ರೂಪಾ ಶ್ರೀನಿವಾಸ ನಾಯಕ, ವೀರೇಶ ನೀಲಗಲ್, ತಾಯಣ್ಣ ನೀಲಗಲ್, ಗಡ್ಲ ಬಸವರಾಜ, ಚಂದ್ರಶೇಖರ ಎಲೇರಿ, ಪರಮೇಶ ನಾಯ್ಕ್ ಮುರ್ಕಿಗುಡ್ಡ, ಡಿ.ಯಮನೂರು, ಹನುಮಂತರಾಯ, ಬಾಲಗೌಡ, ಅಡಿಯಪ್ಪ, ದೇವರಾಜ ಮರಾಠ, ಶರ್ೀ ಮರಾಠ, ಪುರುಷೋತ್ತಮ ಸೇರಿದಂತೆ ಗ್ರಾಾಮ ಪಂಚಾಯಿತಿ ಸದಸ್ಯರು, ಮುಖಂಡರು, ಯುವಕರು ಪಾಲ್ಗೊೊಂಡಿದ್ದರು.
ಗ್ರಾಮೀಣ ಕ್ರೀಡೆಗಳ ಆಟಗಾರರಿಗೆ ಪ್ರೋತ್ಸಾಹಿಸಿ – ಲೋಕರೆಡ್ಡಿ

