ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.22:
ಅರ್ಹತೆ ಆಧಾರದ ಮೇಲೆ ಹೊರಗುಳಿದ 6 ಸಾವಿರ ಅತಿಥಿ ಉಪನ್ಯಾಾಸಕರನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು. ಎಲ್ಲಾಾ ಅತಿಥಿ ಉಪನ್ಯಾಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಜನೇವರಿ-5 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಧರಣಿ ಹಮ್ಮಿಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಾಸಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಸಿದ್ದಪ್ಪ ಹೆಚ್.ಬಾವಿಮನಿ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸರಕಾರಿ ಮಹಾವಿದ್ಯಾಾಲಯಗಳಲ್ಲಿ ಸುಮಾರು 20-25 ವರ್ಷಗಳಿಂದ ಅತಿಥಿ ಉಪನ್ಯಾಾಸಕರಾಗಿ ಸುಮಾರು 10500 ಜನ ಸೇವೆ ಸಲ್ಲಿಸುತ್ತಿಿದ್ದಾಾರೆ. ಸೇವಾ ಭದ್ರತೆ, ಖಾಯಂಗೊಳಿಸುವದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನಿಿಟ್ಟುಕೊಂಡು ಬೆಂಗಳೂರಿನ ಫ್ರೀೀಡಂ ಪಾರ್ಕ್ನಲ್ಲಿ ಹೋರಾಟ ಮಾಡಲಾಗಿದೆ. ನೇಮಕಾತಿ ಸಂಬಂಧಿಸಿದಂತೆ ಪ್ರಕರಣ ನ್ಯಾಾಯಾಲಯದಲ್ಲಿದೆ. ಯುಜಿಸಿ ಹಾಗೂ ಯುಜಿಸಿಯೇತರ ಎಂದು ತಾರತಮ್ಯ ಮಾಡಲಾಗುತ್ತಿಿದೆ. ಇಲ್ಲಿಯವರೆಗೆ ವಿದ್ಯಾಾರ್ಥಿ ವೃಂದಕ್ಕೆೆ ಪ್ರಾಾಮಾಣಿಕ ಸೇವೆ ಮಾಡುತ್ತಾಾ ಬಂದಿದ್ದೇವೆ. ಅರ್ಹತೆ ಆಧಾರದಲ್ಲಿ ಸುಮಾರು 6 ಸಾವಿರ ಉಪನ್ಯಾಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಇದನ್ನು ವಿರೋಧಿಸಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಹೋರಾಟ ಮಾಡಿ, ಮುಖ್ಯಮಂತ್ರಿಿಗಳ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದಿದ್ದೇವೆ ಎಂದರು.
ಅರ್ಹತೆಗಿಂತ ಅನುಭವ ದೊಡ್ಡದು ಎನ್ನುವದನ್ನು ಸುಪ್ರೀೀಮ್ ಕೋರ್ಟ್ ಹಲವಾರು ಬಾರಿ ಪ್ರತಿಪಾದಿಸಿದೆ. ಅರ್ಹತೆ ಅಧಾರವಾಗಿಟ್ಟುಕೊಂಡು ಉಪನ್ಯಾಾಸಕರನ್ನು ಹೊರ ಹಾಕಿರುವದರಿಂದ ಅವರ ಕುಟುಂಬಗಳು ಬೀದಿ ಪಾಲಾಗಿವೆ. ಅರ್ಹತೆ ಆಧಾರದ ಮೇಲೆ ಯಾವ ಇಲಾಖೆಯಿಂದಲೂ ನೌಕರರನ್ನು ಹೊರ ಹಾಕಿಲ್ಲ. ಉಪನ್ಯಾಾಸಕರನ್ನು ಹೊರ ಹಾಕುವ ಮೂಲಕ ಸರಕಾರ ಬಹುದೊಡ್ಡ ಅನ್ಯಾಾಯ ಮಾಡಿದೆ. ಮಾನವೀಯತೆ ದೃಷ್ಠಿಿಯಿಂದ ಕೂಡಲೇ ಎಲ್ಲಾಾ ಉಪನ್ಯಾಾಸಕರನ್ನು ಸೇವೆಗೆ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಿಗಳು ಶೀಘ್ರವೇ ಸಿಹಿ ಸುದ್ದಿ ನೀಡುವದಾಗಿ ಹೇಳಿದ್ದರು. ಅದು ಏನು ಎನ್ನುವದನ್ನು ಕೂಡಲೇ ತಿಳಿಸಲಿ ಎಂದು ಆಗ್ರಹಿಸಿದರು.
ಉಪನ್ಯಾಾಸಕ ಶಂಕರ ಗುರಿಕಾರ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಾಸಕರನ್ನು ಖಾಯಂಗೊಳಿಸುವ ಭರವಸೆ ನೀಡಿತ್ತು.ನುಡಿದಂತೆ ನಡೆಯುವದಾಗಿ ಹೇಳಿಕೊಳ್ಳುತ್ತಿಿರುವ ಕಾಂಗ್ರೆೆಸ್ ಸರಕಾರ ಕೂಡಲೇ ಎಲ್ಲಾಾ ಉಪನ್ಯಾಾಸಕರನ್ನು ಸೇವೆಗೆ ಅವಕಾಶ ಕಲ್ಪಿಿಸಬೇಕು ಎಂದು ಆಗ್ರಹಿಸಿದರು.
ಉಪನ್ಯಾಾಸಕರ ಸಂಘದ ಹನುಮಂತ ನಾಯಕ,ಯರಿಯಪ್ಪ ಬೆಳಗುರ್ಕಿ, ಅಮೀರ ಅಮ್ಜಾಾ, ವೀರೇಶ ಕನ್ನಾಾರಿ ಹಾಗೂ ಇತರರು ಇದ್ದರು.
ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ – 5 ರಂದು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ-ಡಾ.ಸಿದ್ದಪ್ಪ

