ಸುದ್ದಿಮೂಲ ವಾರ್ತೆ (ಸಂತೆಕೆಲ್ಲೂರು) ಲಿಂಗಸೂಗೂರು, ಡಿ.22:
ಮತದಾರರು ಚುನಾವಣೆ ವೇಳೆ ನೀಡುವ ಪೊಳ್ಳು ಭರವಸೆ ಹಾಗೂ ಹಣ ಆಮಿಷೆಗಳಿಗೆ ಬಲಿಯಾಗದೆ ಉತ್ತಮರನ್ನು ಆಯ್ಕೆೆ ಮಾಡುವ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ರಾಜ್ಯ ಅಭಿವೃದ್ದಿ ಪಥದತ್ತ ಸಾಗಲಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಹೇಳಿದರು.
ಗ್ರಾಾಮದಲ್ಲಿ ಲಿಂ. ಘನಮಠ ಶಿವಯೋಗಿಗಳ 146 ನೇ ಜಾತ್ರಾಾ ಮಹೋತ್ಸವ ನಿಮಿತ್ತ ರವಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಸಮಾಜದ ಸರ್ವತೋಮುಖ ಅಭಿವೃದ್ಧಿಿಗೆ ಮತದಾರರು ಅದರಲ್ಲೂ ಮಹಿಳೆಯರು ರಾಜಕೀಯದಲ್ಲಿ ಮೌಲ್ಯಾಾಧಾರಿತ ನಾಯಕತ್ವ ಅಗತ್ಯವಿದೆ ಅದಕ್ಕಾಾಗಿ ಸರಕಾರ ನೀಡುವ ಯಾವುದೇ ಉಚಿತ ಯೋಜನೆಗಳಿಗೆ ಮಾರು ಹೋಗದೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಸರಕಾರ ಇತ್ತೀಚಿಗೆ ಗ್ಯಾಾರಂಟಿ ಯೋಜನೆ ಮೂಲಕ ಉಚಿತ ಬಸ್ ಮತ್ತು ವಿದ್ಯುತ್ ಮಾಸಿಕ ಹಣ ಸೇರಿ ಹಲವು ಯೋಜನೆ ನೀಡಿದೆ ನೀವೇನಾದರು ಉಚಿತ ಕೋಡಿ ಎಂದು ಕೇಳಿದ್ದೀರಾ ಎಂದು ಪ್ರಶ್ನಿಿಸಿದ ಅವರು ಉಚಿತ ಬಿಟ್ಟಿಿ ಭಾಗ್ಯಗಳಿಗೆ ಮಾರು ಹೋಗದೆ ನಿಮಗೆ ಅಗತ್ಯವಿರುವ ಶಿಕ್ಷಣದ ಬಗ್ಗೆೆ ಗ್ರಾಾಮಕ್ಕೆೆ ಬರುವ ರಾಜಕಾರಣಿಗಳನ್ನು ಪ್ರಶ್ನಿಿಸಿ ಪ್ರಾಾಥಮಿಕ ಶಾಲೆ ಇದ್ದರೆ ಹೈಸ್ಕೂಲ್ ಕೇಳಿ ಹೈಸ್ಕೂ ಇದ್ದರೆ ಕಾಲೇಜು ಕೇಳಿ ಶೈಕ್ಷಣಿಕ ಅಭ್ಯುದಯಕ್ಕೆೆ ಒತ್ತು ನೀಡಿ ಸಾಮಾಜಿಕ ಚಿಂತನೆಗೆ ಮುಂದಾಗಿ ಎಂದರು.
ಲಿಂಗಸಗೂರು ತಾಲೂಕಿನ ಹಟ್ಟಿಿ ಬಳಿಯ ಯಲಗಟ್ಟಾಾ ಗ್ರಾಾಮದ ಪ್ರೌೌಢಶಾಲೆಗೆ ಇತ್ತಿಿಚೆಗೆ ಭೇಟಿ ನೀಡಿದಾಗ 300 ಮಕ್ಕಳು ಓದುವ ಶಾಲೆಯಲ್ಲಿ ಒಬ್ಬರೇ ಖಾಯಂ ಶಿಕ್ಷಕರಿದ್ದು ಉಳಿದವರು ಅತಿಥಿ ಶಿಕ್ಷಕರಿದ್ದು ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಸಿಗಲು ಸಾಧ್ಯವೇ ಎಂದ ಅವರು ಇತ್ತಿಿಚೆಗೆ ಶಿಕ್ಷಣಕ್ಕಾಾಗಿ ಹಣ ನೀಡುತ್ತಿಿದ್ದರೂ. ಗ್ರಾಾಮೀಣ ಪ್ರದೇಶದಲ್ಲಿ ಮೌಲ್ಯಯುತ ಶಿಕ್ಷಣ ಸಿಗುತ್ತಿಿಲ್ಲ. ನಿಮ್ಮ ಗ್ರಾಾಮದ ಚರಂಡಿ ರಸ್ತೆೆ ಸಣ್ಣಪುಟ್ಟ ಕೆಲಸ ಕೇಳದೆ ಮಕ್ಕಳ ಭವಿಷ್ಯಕ್ಕೆೆ ಶಿಕ್ಷಣಕ್ಕಾಾಗಿ ಶಾಲೆ ಕೊಡಿ ಎಂದು ಕೇಳಿರಿ ಅಂದಾಗ ಮಾತ್ರ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಮಠ ಮಾನ್ಯಗಳು ಸದುದ್ದೇಶ ಬೆಳೆಸುತ್ತಿಿದ್ದು ಮಾತೆಯರು ಮಕ್ಕಳಿಗೆ ಉತ್ತಮ ಸಂಸ್ಕೃತಿ ಬೆಳೆಸಿದಾಗ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಸ್ಕಿಿ ಗಚ್ಚಿಿನಮಠದ ವರರುದ್ರಮುನಿ ಸ್ವಾಾಮೀಜಿ ವಹಿಸಿದ್ದರು. ಸಂತೆಕೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಾಮೀಜಿ, ಪ್ರವಚನಕಾರರಾದ ಯಡ್ರಾಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಾಮೀಜಿ ಪ್ರಶಾಂತ, ದೇವರು, ರೈತ ಮುಖಂಡ ಹನಮನಗೌಡ ಬೆಳಗುರ್ಕಿ, ಓಪೆಕ್ ಆಸ್ಪತ್ರೆೆ ವೈದ್ಯ ಸುರೇಶ ಸಗರದ ವೇದಿಕೆಯಲ್ಲಿದ್ದರು.
ಘನಮಠದಯ್ಯ ಮಹಾಂತಿನಮಠ ನಿರ್ವಹಿಸಿದರು. ಕೆ.ಅಮರೇಗೌಡ ಪಾಟೀಲ್, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಮಲ್ಲೇಶಗೌಡ ಮಟ್ಟೂರ, ಸಾಹಿತಿ ಗಿರಿರಾಜ ಹೊಸಮನಿ, ಮರಿಗೌಡ ಪಾಟೀಲ್, ಡಾ,ಎನ್ಎಲ್ ನಡುವಿನಮನಿ, ವಿಸಿಬಿ ನಿವೃತ್ತ ಪ್ರಾಾಚಾರ್ಯ ಸಿ.ಶರಣಪ್ಪ, ಗುರುನಾಥರೆಡ್ಡಿಿ ದೇಸಾಯಿ, ಸಿದ್ದನಗೌಡ ಹಳ್ಳಿಿ, ಸೇರಿದಂತೆ ಇತರರು ಭಾಗಿಯಾಯಾಗಿದ್ದರು.
ಮತದಾರರು ಆಮಿಷೆಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಒತ್ತು ನೀಡಿ ರಾಜಕೀಯ ಪ್ರಜ್ಞೆ ಮೆರೆಯಬೇಕು: ಬಯ್ಯಾಪೂರ

