ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.22:
ಇಂದು ಪಟ್ಟಣದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಿಲ್ ಾರ್ ಟ್ರೇೇಡಿಂಗ್ ಯೂನಿಯನ್ ತಾಲೂಕು ಘಟಕ ಒಕ್ಕೂಟದ ವತಿಯಿಂದ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ರಾಜ ಸೋಮಶೇಖರ ನಾಯಕ( ಹರಿಹರ ಸರ್ಕಲ್ ) ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮುಖಾಂತರ ಘೋಷಣೆ. ಧಿಕ್ಕಾಾರ ಕೂಗುತ್ತಾಾ ಪ್ರಗತಿಪರ ಕಟ್ಟಡ ಕಾರ್ಮಿಕರ ಹೋರಾಟಗಾರರ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆ ಹೋರಾಟಗಾರರು ತಹಶೀಲ್ದಾಾರ್ ಗಿರೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಹೋರಾಟಗಾರರು ತಾಲೂಕನಲ್ಲಿ ನೊಂದಾಯಿತ ಕಾರ್ಮಿಕರ ಸಂಖ್ಯೆೆ ಹೆಚ್ಚಿಿದ್ದು ಅವರಿಗೆ ಸರ್ಕಾರದ ವತಿಯಿಂದ ನಿವೇಶನ. ಖಾಸಗಿ ಆಸ್ಪತ್ರೆೆಗಳನ್ನು ಕಾರ್ಮಿಕ ಇಲಾಖೆಗೆ ನೊಂದಣಿ ಮಾಡುವುದು. ವಿಜಯನಗರ ಜಿಲ್ಲೆಯ ಕೊಟ್ಟೂರು ಕೂಡ್ಲಿಿಗಿ ಹರಪನಹಳ್ಳಿಿ ಹಾಗೂ ಹಡಗಲಿ ಒಳಗೊಂಡಂತೆ ಮಧ್ಯಭಾಗದಲ್ಲಿನ ಹರಪನಹಳ್ಳಿಿಯಲ್ಲಿ ಮುಖ್ಯವಾಗಿ ಇಎಸ್ಐ ಆಸ್ಪತ್ರೆೆಯನ್ನು ತೆರೆಯುವುದು. ಹೀಗೆ ಹಲವಾರು ಬೇಡಿಕೆಗಳನ್ನು ಕೂಡಲೇ ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಾಯಿಸಿದರು.
ಈ ಪ್ರತಿಭಟನೆಯಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕ ಪ್ರಕಾಶ್ ಗೌಡ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಸಂದೇರ್ ಪರಶುರಾಮ್ ಕಾರ್ಯದರ್ಶಿ ಸಂತೋಷ ಗುಳೇದಟ್ಟಿಿ ಟೌನ್ ಅಧ್ಯಕ್ಷ ಮಹಮ್ಮದ್ ರಫಿ, ಹುಲಿಕಟ್ಟಿಿ ಮೈಲಪ್ಪ, ಬಾಲಗಂಗಾಧರ, ಇಬ್ರಾಾಹಿಂ ಸಬ್, ಬಾಗಲಿ ರೇಣುಕಮ್ಮ, ಕಲೀಮ್, ರಾಮಣ್ಣ, ಮಂಜು, ಜೋಗಿನ ನಾಗರಾಜ್,ಮೋಹನ್ ಕುಮಾರ್. ಎಐಎಸ್ಎ ತಾಲೂಕ ಅಧ್ಯಕ್ಷರು, ವಿನಯ್, ಪ್ರಕಾಶ್, ಕೃಷ್ಣಕುಮಾರ್ ಹಾಗೂ ಕಾಲೇಜು ವಿದ್ಯಾಾರ್ಥಿಗಳು ಭಾಗಿಯಾಗಿದ್ದರು.
ಹರಪನಹಳ್ಳಿಯಲ್ಲಿ ಇಎಸ್ಐ ಆಸ್ಪತ್ರೆ ತೆರೆಯಲು ಎಐಸಿಸಿಟಿಯು ವತಿಯಿಂದ ಬೃಹತ್ ಪ್ರತಿಭಟನೆ

