ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.22:
ಆಟವಾಡುತ್ತಿಿರುವ ಮಗುವಿನ ಮೇಲೆ ಪಾಲಕರು ನಿಗಾ ವಹಿಸಬೇಕು. ಮಗು ಆಟವಾಡುವಾಗ ಸಹಜವಾಗಿ ಏನಾದರೂ ಹಿಡಿಯಲು ಹೋಗುತ್ತದೆ. ಈ ರೀತಿಯಾಗಿ ಪಾರಿವಾಳ ಹಿಡಿಯಲು ಹೋದ ಮಗುವೊಂದು ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದೆ.
ಇತ್ತೀಚಿಗೆ ಮಹಡಿ ಮನೆ, ಆಪಾರ್ಟಮೆಂಟ್ಗಳು ತಲೆ ಎತ್ತಿಿವೆ. ಮಹಡಿ ಮನೆಯ ಮೇಲೆ ಇರುವವರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಗು ಆಟವಾಡುತ್ತದೆ ಎಂದು ಸ್ವಲ್ಪ ನಿರ್ಲಕ್ಷ್ಯವಹಿಸಿದರೆ ಹೆಚ್ಚು ಕಡಿಮೆಯಾಗುತ್ತಿಿದೆ. ಅಂಥದೆ ಘಟನೆಯೊಂದು ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಕೊಪ್ಪಳ ನಗರದ ಮಹ್ಮದ್ ಹ್ಯಾಾರಿಸ್ ಎಂಬ 6 ವರ್ಷದ ಬಾಲಕ ತನ್ನ ಮನೆಯ ಮುಂದೆ ಆಟವಾಡುತ್ತಿಿದ್ದ. ಈ ಸಂದರ್ಭದಲ್ಲಿ ಮನೆಯ ಮುಂದೆ ಬಂದಿರುವ ಪಾರಿವಾಳ ಹಿಡಿಯಲು ಹ್ಯಾಾರಿಸ್ ಹೋಗಿದ್ದಾಾನೆ. ಈ ಸಂದರ್ಭದಲ್ಲಿ ಮೊದಲನೆ ಮಹಡಿಯಿಂದ ಜಾರಿ ಕೆಳಗಡೆ ಬಿದ್ದಿದ್ದಾಾನೆ. ಮೊದಲ ಮಹಡಿಯಿಂದ ಬಿದ್ದು ಗಾಯವಾಗಿ ಈಗ ಆಸ್ಪತ್ರೆೆಗೆ ದಾಖಲಾಗಿಡಿದ್ದಾಾನೆ. ಮಗು ಮೇಲಿಂದ ಬೀಳುವ ದೃಶ್ಯ ಸಿಸಿ ಕ್ಯಾಾಮರಾದಲ್ಲಿ ಸೆರೆಯಾಗಿದೆ.
ಮೇಲಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಾಗಿದೆ. ಆದರೆ ಬಾಲಕ ಪ್ರಾಾಣಾಪಾಯದಿಂದ ಪಾರಾಗಿದ್ದಾಾನೆ. ನಗರದ ಖಾಸಗಿ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ನೀಡಲಾಗುತ್ತಿಿದೆ. ವೈದ್ಯರು ಹೇಳುವ ಪ್ರಕಾರ ಮಗುವಿಗೆ ಪ್ರಾಾಣಾಪಾಯವಿಲ್ಲ ಎನ್ನಲಾಗಿದೆ. ಕೊಪ್ಪಳದ ನಗರ ಠಾಣೆ ವ್ಯಾಾಪ್ತಿಿಯಲ್ಲಿ ಘಟನೆ ನಡೆದಿದೆ. ಪಾಲಕರು ಚಿಕ್ಕ ಮಕ್ಕಳ ಮೇಲೆ ನಿಗಾವಹಿಸುವುದು ತೀರಾ ಅವಶ್ಯವಾಗಿದೆ.

