ಸುದ್ದಿಮೂಲ ವಾರ್ತೆ ರಾಯಚೂರು, ಡಿ.22:
ಕಾಲೇಜು ಹಂತದ ಮಕ್ಕಳಲ್ಲಿಯೂ ಕನ್ನಡ ಕಲಿಕೆ ನೀರಸ ವಾಗಿರುವುದನ್ನು ಕಂಡು ಶಿಕ್ಷಣದ ವ್ಯವಸ್ಥೆೆ ಬಗ್ಗೆೆ ನಿವೃತ್ತ ಉಪನ್ಯಾಾಸಕ ಹಾಗೂ ಸಾಹಿತಿ ಬಿ.ಜಿ.ಹುಲಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸಂಯುಕ್ತಾಾಶ್ರಯದಲ್ಲಿ ಪರಿಷತ್ತಿಿನ ನಡೆ ಯುವಕರ ಕಡೆ ಎಂಬ ಶೀರ್ಷಿಕೆಯಲ್ಲಿ ಆರಂಭವಾದ ಪ್ರಚಾರ ಉಪನ್ಯಾಾಸ ಮಾಲೆಯ ಮೊದಲ ಕಾರ್ಯಕ್ರಮದಲ್ಲಿ ದ್ವಿಿತೀಯ ಪಿಯುಸಿ ಕನ್ನಡ ಪಠ್ಯದಲ್ಲಿರುವ ಮುದ್ದಣ ರಚಿಸಿದ ತಿರುಳುಗನ್ನಡದ ಬೆಳ್ನುಡಿ ಕುರಿತು ಮಾತನಾಡಿದರು. ಕನ್ನಡ ಭಾಷೆಗೆ ಕೇಶಿರಾಜನ ಶಬ್ದಮಣಿ ದರ್ಪಣವೇ ಜೀವಾಳ. ಕಂದ ಪದ್ಯದಲ್ಲಿ ಬರೆದ ವ್ಯಾಾಕರಣ ಗ್ರಂಥದ ಮೊದಲ ಅಧ್ಯಾಾಯದ ಎರಡನೇ ಪದ್ಯ ಅಕ್ಷರದ ಬಗ್ಗೆೆ ತಿಳಿಸುತ್ತದೆ. ಅಧ್ಯಾಾಪಕರು ನಿತ್ಯ ಬೆಳೆಯುವವರು. ತಾವು ಬೆಳೆಯುತ್ತ ತಮ್ಮ ಕೈಯಲ್ಲಿ ಇರುವ ಮಕ್ಕಳನ್ನು ಬೆಳೆಸಬೇಕು. ಅಂದಾಗ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದರು.
ಪ್ರಾಾಚಾರ್ಯರಾದ ಚನ್ನಬಸಪ್ಪ ಪಸಾರ ಮಾತನಾಡಿ, ಕಾಲೇಜು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಿನ ಬಗ್ಗೆೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿ. ಕಾಲೇಜಿನಲ್ಲಿ ಕಾರ್ಯಕ್ರಮ ಮಾಡಿರುವುದು ಮಕ್ಕಳಿಗೆ ಸಾಕಷ್ಟು ಉಪಯುಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಡಾ. ಬಿ ವಿಜಯರಾಜೇಂದ್ರ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಾಚಾರ್ಯ ಚನ್ನಬಸಪ್ಪ ಪಸಾರ, ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆೆ ಲಲಿತಾ ಬಸನಗೌಡ, ನಾಗಪ್ಪ ಹೊರಪ್ಯಾಾಟಿ, ವಿ.ಎನ್. ಅಕ್ಕಿಿ, ಪತ್ರಕರ್ತ ಆನಂದ ವಿ.ಕೆ, ಮಹಾಂತೇಶ ರಮೇಶ ಹೀರಾ, ಪ್ರತಿಭಾ ಗೋನಾಳ, ರಾವುತರಾವ್ ಬರೂರ, ಉಪನ್ಯಾಾಸಕ ಜಲೀಲ್ ಅಹ್ಮದ್ಡಾ.ರೇಖಾ ಪಾಟೀಲ ಸೇರಿದಂತೆ ಇತರರು ಭಾಗವಹಿಸಿದ್ದರು.
ಪರಿಷತ್ತಿನ ನಡೆ ಯುವಕರ ಕಡೆ ಪ್ರಚಾರೋಪನ್ಯಾಸ ಮಾಲಿಕೆ ಕೇಶಿರಾಜನ ಜೀವಧ್ವನಿಯಿಂದ ಮಾತೃ ಭಾಷಾ ಕಲಿಕೆಗೆ ಜೀವಕಳೆ – ಬಿ.ಜಿ. ಹುಲಿ

