ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.22:
ಕ್ರಿಿಪ್ಟೊೊ ಕರೆನ್ಸಿಿಯಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಸಂಘಟಿತ ಜಾಲ ನಿರ್ಮಿಸಿಕೊಂಡು ವಂಚಿಸುತ್ತಿಿದ್ದ ಬೆಂಗಳೂರಿನ ಕನ್ಸಲ್ಟೆೆನ್ಸಿಿ ಕಂಪನಿ ಕಚೇರಿ ಮೇಲೆ ಸೋಮವಾರ ಜಾರಿ ನಿರ್ದೇಶ ನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜಯನಗರದ 4ನೇ ಬ್ಲಾಾಕ್ನಲ್ಲಿರುವ ಕಂಪನಿ ಹಾಗೂ ಅದಕ್ಕೆೆ ಸಂಬಂಧಿಸಿದ ದೆಹಲಿ ಮತ್ತು ಮಹಾರಾಷಷ್ಟ್ರದ 22 ಕಡೆಗಳಲ್ಲಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂಪನಿಗಳ ಸಿಬ್ಬಂದಿ ವಾಸಿಸುತ್ತಿಿದ್ದ ಮನೆ ಹಾಗೂ ಕಚೇರಿಗಳಿಗೆ ತೆರಳಿದ ಇಡಿ ಅಧಿಕಾರಿಗಳು ಶೋಧನೆ ನಡೆಸಿದರು. ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ವಿದೇಶಿ ಪ್ರಜೆಗಳು, ಭಾರತೀಯ ನಾಗರಿಕರನ್ನು ಕಂಪನಿಗಳು ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿಿದ್ದವ ಆರೋಪಿಗಳು ತಾವೇ ವಿನ್ಯಾಾಸಗೊಳಿಸಿದ ವೆಬ್ಸೈಟ್ಗಳ ಮೂಲಕ ಕ್ರಿಿಪ್ಟೊೊ ಕರೆನ್ಸಿಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸುತ್ತಿಿದ್ದರು. ಇದಕ್ಕಾಾಗಿ ಅನುಮತಿ ಪಡೆಯದಿದ್ದರೂ ಹೆಸರಾಂತ ಕ್ರಿಿಪ್ಟೊೊ ತಜ್ಞರು, ಪ್ರಸಿದ್ಧ ವ್ಯಕ್ತಿಿಗಳ ೆಟೋಗಳನ್ನ ಬಳಸಿಕೊಂಡು ೇಸ್ಬುಕ್, ಇನ್ಸ್ಟಾಾಗ್ರಾಾಮ್, ವಾಟ್ಸ್ಆ್ಯಪ್, ಟೆಲಿಗ್ರಾಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿ ಜನರನ್ನು ನಂಬಿಸುತ್ತಿಿದ್ದರು. ನಂಬಿ ಹಣ ಹೂಡಿಕೆ ಮಾಡುವವರಿಗೆ ತ್ವರಿತ ಆದಾಯದ ಭರವಸೆ ನೀಡುತ್ತಿಿದ್ದ ಆರೋಪಿಗಳು, ಆರಂಭಿಕ ಹಂತದಲ್ಲಿ ಅವರ ನಂಬಿಕೆ ಹೆಚ್ಚಿಿಸಲು ಕೆಲವು ಲಾಭಾಂಶಗಳನ್ನ ನೀಡುತ್ತಿಿದ್ದರು ಎಂದು ಇ.ಡಿ ತಿಳಿಸಿದೆ.
ಕ್ರಿಿಪ್ಟೊೊ ಕರೆನ್ಸಿಿ ರೂಪದಲ್ಲಿ ಹಣ ಸಂಗ್ರಹಿಸುತ್ತಿಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಕರ್ನಾಟಕ ಪೊಲೀಸರು ಹಂಚಿಕೊಂಡಿದ್ದ ಮಾಹಿತಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಿಕೊಂಡಿತ್ತು.

