ಸುದ್ದಿಮೂಲ ವಾರ್ತೆ ರಾಯಚೂರು, ಡಿ.22:
ಜನವರಿ 29ರಿಂದ ಮೂರು ದಿನಗಳ ಕಾಲ ಹಮ್ಮಿಿಕೊಳ್ಳಲಾಗುವ ರಾಯಚೂರು ಜಿಲ್ಲಾಾ ಉತ್ಸವಕ್ಕೆೆ ಎಲ್ಲಾಾ ಸಮಿತಿಗಳು ಸಮನ್ವಯತೆಯೊಂದಿಗೆ ಸಿದ್ದತೆ ಆರಂಭಿಸಬೇಕು ಎಂದು ರಾಯಚೂರು ಉತ್ಸವದ ಸ್ವಾಾಗತ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ನಿತೀಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ರಾಯಚೂರು ಉತ್ಸವ-26ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುವರ್ಷಗಳ ನಂತರ ಜಿಲ್ಲೆಯಲ್ಲಿ ರಾಯಚೂರು ಉತ್ಸವ ನಿಗದಿಯಾಗಿದ್ದು ಈ ಉತ್ಸವ ರಾಯಚೂರು ನಗರಕ್ಕಷ್ಟೇ ಸೀಮಿತವಲ್ಲ ಇಡೀ ಜಿಲ್ಲೆಯ ಉತ್ಸವವಾಗಿದೆ. ಜಿಲ್ಲೆಯಲ್ಲಿನ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗೂಡಿ ಯಶಸ್ವಿಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾಡಬೇಕು ಎಂದರು.
ಉತ್ಸವದ ಎಲ್ಲಾಾ ಕೆಲಸ-ಕಾರ್ಯಗಳ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಉತ್ಸವದ ಮೊದಲನೇ ಸಭೆಯ ಪೂರ್ವದಲ್ಲಿಯೇ ನಾವು ಸಮಿತಿಗಳನ್ನು ರಚಿಸಿದ್ದು ಆಯಾ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಪಟ್ಟಿಿ ಮಾಡಿ ಕೊಡಲಾಗುತ್ತಿಿದೆ. ಅದರಂತೆ ಎಲ್ಲಾಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಉತ್ಸವ ಮೂರು ದಿನಗಳ ಕಾಲ ರಾಯಚೂರು ನಗರದ ಜೊತೆಗೆ ಎಲ್ಲಾಾ ತಾಲೂಕುಗಳ ಜನ ಉತ್ಸವದಲ್ಲಿ ಭಾಗಿಯಾಗಬೇಕು. ಇದಕ್ಕಾಾಗಿ ಈಗಿನಿಂದಲೇ ಬಸ್ಗಳ ವ್ಯವಸ್ಥೆೆಗೆ ಯೋಜನೆ ರೂಪಿಸಬೇಕು. ಮುಖ್ಯವಾಗಿ ಪೊಲೀಸ್ ಇಲಾಖೆ ಈಗಿನಿಂದಲೇ ಜಾಗೃತಿ ವಹಿಸಿ ಯಾವುದೇ ರೀತಿಯ ಅವಘಡಗಳಾಗಿ ಜಿಲ್ಲೆಯ ಹೆಸರು ಕೆಡದಂತೆ ಜಣಸಂದಣಿ ನಿರ್ವಹಣೆಗೆ ಶಿಸ್ತು ಬದ್ಧ ಯೋಜನೆ ರೂಪಿಸಬೇಕು. ವಾಹನಗಳ ನಿಲುಗಡೆಗೆ ಮಾರ್ಗಸೂಚಿ ರೂಪಿಸಿ ವಾಹನ ಮತ್ತು ಜನ ಸಂಚಾರಕ್ಕೆೆ ಸುಗಮ ವ್ಯವಸ್ಥೆೆ ಮಾಡಬೇಕು ಎಂದು ಸಭೆಯಲ್ಲಿದ್ದ ಹೆಚ್ಚುವರಿ ಎಎಸ್ಪಿ ಕುಮಾರಸ್ವಾಾಮಿ ಮತ್ತಿಿತರ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಸಿಇಓ ಈಶ್ವರ ಕಾಂದೂ ಮಾತನಾಡಿ, ಜಿಲ್ಲಾ ಉತ್ಸವವು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿಿತವಾಗಿ ನಡೆಯಲು ಈಗಾಗಲೇ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಾಗಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತೆಯಿಂದ ಕೆಲಸ ಮಾಡಬೇಕು. ಗೊಂದಲಗಳಿದ್ದರೆ ಕೇಳಿ ಈಗಿನಿಂದಲೇ ಕೆಲಸ ಆರಂಭಿಸಿ ಯಾರೂ ಸಹ ನಿರ್ಲಕ್ಷ್ಯಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಸ್ವಾಾಗತ ಮತ್ತು ಶಿಷ್ಟಾಾಚಾರ ಸಮಿತಿಯ ಸದಸ್ಯ ಕಾರ್ಯದರ್ಶಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಮಾತನಾಡಿ, ಆಯಾ ಸಮಿತಿಗಳ ವಿವರ, ನೇಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರ ಹಾಗೂ ಕೆಲಸದ ಹಂಚಿಕೆಯ ವಿವರದ ಬಗ್ಗೆೆ ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಬಸವಣ್ಣೆೆಪ್ಪ ಕಲಶೆಟ್ಟಿಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ನಗರಾಭಿವೃದ್ಧಿಿ ಕೋಶದ ಯೋಜನಾ ನಿರ್ದೇಶಕ ಈರಣ್ಣ, ಮಹಾನಗರ ಪಾಲಿಕೆಯ ಉಪ ಆಯುಕ್ತೆೆ ಸಂತೋಷರಾಣಿ, ಆಯಾ ತಾಲೂಕಿನ ತಹಶೀಲ್ದಾಾರರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
* ವಿವಿಧ ಸಮಿತಿ ರಚಿಸಿದ ಜಿಲ್ಲಾಡಳಿತ * ಎಲ್ಲಾಾ ಸಮಿತಿಗಳ ಅಧಿಕಾರಿಗಳೊಂದಿಗೆ ಮೊದಲ ಸಭೆ ರಾಯಚೂರು ಉತ್ಸವಕ್ಕೆೆ ಎಲ್ಲ ಸಮಿತಿಗಳು ಸಮನ್ವಯತೆಯ ಸೂತ್ರ ಅನ್ವಯಿಸಿಕೊಳ್ಳಿಿ-ಜಿಲ್ಲಾಧಿಕಾರಿ

