ದಯಾಶಂಕರ ಮೈಲಿ ಮೈಸೂರು, ಡಿ.22:
ರಾಜ್ಯದ ಮುಖ್ಯಮಂತ್ರಿಿ ಬದಲಾವಣೆ ಬಗ್ಗೆೆ ಹೈಕಮಾಂಡ್ನಲ್ಲಿ ಒಪ್ಪಂದ ಆಗಿದೆ ಎಂಬ ವಿಚಾರ ಈಗ ಮುಖ್ಯಮಂತ್ರಿಿ ಮತ್ತು ಉಪ ಮುಖ್ಯಮಂತ್ರಿಿ ನಡುವೆ ಗಿರಕಿ ಹೊಡೆಯುತ್ತಿಿದೆ.
ಇದಕ್ಕೆೆ ಕಾರಣ ರಾಜ್ಯದಲ್ಲಿನ ನಾಯಕತ್ವ ಗೊಂದಲವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಹೈಕಮಾಂಡ್ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು.
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಇದೇ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ಸಿಎಂ ಬದಲಾವಣೆ ಬಗ್ಗೆೆ ಹೈಕಮಾಂಡ್ನಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ನಾನೇ 5 ವರ್ಷಗಳು ಸಿಎಂ ಆಗಿರೋದು ಗ್ಯಾಾರಂಟಿ ಎಂದು ಘಂಟಾಘೋಷವಾಗಿ ಹೇಳಿದ್ದ ಸಿಎಂ ಮೈಸೂರಿನಲ್ಲಿ ಸೋಮವಾರ ಸಮಸ್ಯೆೆಗಳೇನಿದ್ದರೂ ಹೈಕಮಾಂಡ್ ಬಗೆಹರಿಸುತ್ತದೆ ಎಂದೇಳಿ ಹೈ ಕಮಾಂಡ್ ಅಂಗಳಕ್ಕೆೆ ಚೆಂಡು ಎಸೆದಿದ್ದಾರೆ.
ಇದೇ ವೇಳೆ ಅವರು, ಹೈಕಮಾಂಡ್ ಅರ್ಥಾತ್ ರಾಹುಲ್ ಗಾಂಧಿ ತೆಗೆದುಕೊಳ್ಳುವ ತೀರ್ಮಾನಕ್ಕೆೆ ನಾನು ಬದ್ಧ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಖರ್ಗೆ ಅವರು ಸ್ಥಳೀಯವಾಗಿ ಸಮಸ್ಯೆೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಬಗೆಯ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಸಿಎಂ ಬದಲಾವಣೆ ವಿಚಾರ ಸಿಎಂ ಮತ್ತು ಡಿಸಿಎಂ ನಡುವೆ ಸೀಮಿತಗೊಳಿಸಲಾಗಿದೆ. ಅಂದರೆ ಅವರಿಬ್ಬರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಸಂದೇಶವನ್ನು ಖರ್ಗೆ ರವಾನಿಸಿದ್ದಾರೆ.
ಡಿಕೆಶಿಗೆ ಇಕ್ಕಟ್ಟು, ಬಿಕ್ಕಟ್ಟು ಮುಂದೆ ಏನು :
ಹಿಂದಿನಿಂದಲೂ ಡಿ.ಕೆ.ಶಿವಕುಮಾರ್ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ನಲ್ಲಿ ಆಗಿದೆ. ಸೂಕ್ತ ಕಾಲದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಲೇ ಇರುವಾಗಲೇ ಅಧಿವೇಶನದಲ್ಲಿ ಅವಧಿ ಮುಗಿಯುತ್ತಿಿರುವವರೆಗೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿರುವುದು ಹಚ್ಚ ಹಸಿರಾಗಿರುವಾಗಲೇ ಖರ್ಗೆ ಅವರು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಇದು ಡಿಕೆಶಿ ಅವರಿಗೆ ಇತ್ತ ದರಿ ಅತ್ತ ಪುಲಿ ಎಂಬ ಇಕ್ಕಟ್ಟಿಿನ ಸ್ಥಿಿತಿ ಎದುರಾಗಿದೆ. ಜೊತೆಗೆ ಒಂದು ಬಗೆಯಲ್ಲಿ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.
ಬಾಕ್ಸ್
ಮೈಸೂರಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಏನು
ಒನ್ಸ್ ಾರ್ ಆಲ್ ಕ್ಲಿಿಯರ್ ಮಾಡುತ್ತಿಿದ್ದೇನೆ ಕೇಳಿ. ಹೈಕಮಾಂಡ್ ತೀರ್ಮಾನವೇ ಅಂತಿಮ.ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಹೈಕಮಾಂಡ್ ನಾವೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದೆ.ಅಲ್ಲಿಗೆ ಎಲ್ಲವೂ ಮುಗಿಯಿತು.ಹೈಕಮಾಂಡ್ ತನ್ನ ತೀರ್ಮಾನ. ಹೇಳುತ್ತದೆ. ಸಂಕ್ರಾಾಂತಿಯಲ್ಲೂ ಕಾಂತ್ರಿಿ ಇಲ್ಲ. ಯಾವಾಗಲೂ ಕ್ರಾಾಂತಿಯೂ ಇಲ್ಲ, ಏನು ಇಲ್ಲ.
ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ನುಡಿದ ಸಿಎಂ ಸಿದ್ದರಾಮಯ್ಯ ನಾನು ಅಧಿವೇಶನದಲ್ಲಿ ಮಾತನಾಡಿದ ಮೇಲೂ ಈ ವಿಚಾರದಲ್ಲಿ ಯಾಕೆ ಪ್ರಶ್ನೆೆ ಕೇಳುತ್ತಿಿದ್ದೀರಾ.ಕೆ ಎನ್ ರಾಜಣ್ಣ, ಡಿ ಕೆ ಶಿವಕುಮಾರ್ ಭೇಟಿ ಮಾಡಿದರೆ ತಪ್ಪೇನಿದೆ.
ಡಿ. ಕೆ. ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷ.ಅವರನ್ನು ಭೇಟಿ ಮಾಡಬಾರದು ಎಂದು ಏನಾದರು ಇದ್ಯಾಾ.ಖರ್ಗೆಯವರು ಹೇಳಿರುವುದು ಸರಿ ಇದೆ.ನಾವು ಮೊದಲಿನಿಂದಲೂ ವ್ಯಕ್ತಿಿಗಿಂತ ಪಕ್ಷ ದೊಡ್ಡದು ಎಂದು ಹೇಳುತ್ತಿಿದ್ದೇವೆ. ಅಂದರೆ ಹೈಕಮಾಂಡ್ ಎಂದು ಸ್ಥಳೀಯ ಮಟ್ಟದಲ್ಲಿ ಸಮಸ್ಯೆೆ ಬಗೆ ಹರಿಸಬೇಕೆಂಬ ಖರ್ಗೆ ಹೇಳಿಕೆಗೆ ಸಿಎಂ ಪರೋಕ್ಷ ವಿರೋಧ ವ್ಯಕ್ತಪಡಿಸಿದರು ಸಿಎಂ.
ಬಾಕ್ಸ್
ಡಿಕೆಶಿ ಹೇಳಿಕೆಗೂ ಟಾಂಗ್
ರಾಜಣ್ಣರನ್ನು ಅಪೆಕ್ಸ್ ಬ್ಯಾಾಂಕ್ ಅಧ್ಯಕ್ಷರನ್ನಾಾಗಿ ಮಾಡಿದ್ದು ಎಸ್ ಎಂ ಕೃಷ್ಣ ಹಾಗೂ ಅಂದಿನ ಸರ್ಕಾರ. ಎಂದು ಹೇಳುವ ಮೂಲಕ ಸಿಎಂ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಾಂಕ್ ಅಧ್ಯಕ್ಷರನ್ನಾಾಗಿ ಮಾಡಿದ್ದು ನಾನೇ ಎಂಬ ಡಿ. ಕೆ .ಶಿವಕುಮಾರ್ ಹೇಳಿಕೆಗೂ ಇದೇ ವೇಳೆ ಟಾಂಗ್ ನೀಡಿದರು.

