ಸುದ್ದಿಮೂಲ ವಾರ್ತೆ ಭಾಲ್ಕಿಿ, ಡಿ.22:
ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಜೀವಪರ, ಸಮಾಜಪರ ಕಾರ್ಯಗಳಿಗೆ ಮಠಾಧೀಶರಿಗೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆೆ ತಾಂತ್ರಿಿಕ ಮಹಾವಿದ್ಯಾಾಲಯ(ಬಿಕೆಐಟಿ) ಆವರಣದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟದ್ದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಲ್ಲಿ ಸಲ್ಲಿಸಿದ ಸೇವೆ ಅನುಪಮ.
ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆೆ ಸೇರಿ ಕಲ್ಲು ಮಣ್ಣು ಹೊತ್ತು ಮರೆಯಾಗಿದ್ದ ಅನುಭವ ಮಂಟಪವನ್ನು ಪೂರ್ನನಿರ್ಮಾಣ ಮಾಡಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆೆಯಡಿ ಮಹಿಳಾ ಶಾಲಾ-ಕಾಲೇಜು ತೆರೆದು ಎಲ್ಲಾಾ ಮಹಿಳೆಯರಿಗೂ ಶಿಕ್ಷಣ ಸಿಗುವಂತೆ ಮಾಡಿದ್ದರು. ನಂತರ ಶಿಕ್ಷಣ ಸಂಸ್ಥೆೆ ಜವಾಬ್ದಾಾರಿ ವಹಿಸಿದ ಡಾ.ಭೀಮಣ್ಣ ಖಂಡ್ರೆೆ ಅವರು 1982ರಲ್ಲಿ ಗ್ರಾಾಮೀಣ ಭಾಗದಲ್ಲಿ ಎಂಜನೀಯರಿಂಗ್ ಕಾಲೇಜು ತೆರೆದು ಈ ಭಾಗದ ವಿದ್ಯಾಾರ್ಥಿಗಳ ತಾಂತ್ರಿಿಕ ಶಿಕ್ಷಣದ ಕನಸು ನನಸು ಮಾಡಿದ್ದರು. ಈ ಸಂಸ್ಥೆೆಯಡಿ ಅಧ್ಯಯನ ಮಾಡಿದ ಸಾವಿರಾರೂ ವಿದ್ಯಾಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತ ನಾಡುನ್ನು ಕಟ್ಟುವ ಕೆಲಸ ಮಾಡುತ್ತಿಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮೇಹಕರ್-ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯ, ಹಿರೇಮಠ ಸಂಸ್ಥಾಾನ ಗುರುಬಸವ ಪಟ್ಟದ್ದೇವರು, ಬೆಲ್ದಾಾಳ ಸಿದ್ಧರಾಮ ಶರಣರು, ಡಾ.ರಾಜಶೇಖರ ಶಿವಾಚಾರ್ಯ, ಡಾಕುಳಗಿ ಪೂಜ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ಸಾಗರ ಖಂಡ್ರೆೆ, ಸಂಸ್ಥೆೆಯ ಆಡಳಿತಾಧಿಕಾರಿ ಅಂಕುಶ ಢೋಲೆ, ಬಿಕೆಐಟಿ ಪ್ರಾಾಚಾರ್ಯ ಡಾ.ಉದಯಕುಮಾರ ಕಲ್ಯಾಾಣೆ ಸೇರಿದಂತೆ ಹಲವರು ಇದ್ದರು.
ಮೇಘನಾ ವಚನ ಗಾಯನ ನಡೆಸಿ ಕೊಟ್ಟರು. ಬಸವರಾಜ ಕಾವಡಿ ನಿರೂಪಿಸಿದರು.
ದಿವ್ಯ ಸಾನ್ನಿಿಧ್ಯ ವಹಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ಎಲ್ಲ ಕಾರ್ಯಗಳಿಗೆ ಡಾ.ಭೀಮಣ್ಣ ಖಂಡ್ರೆೆ ಅವರು ಬಲಗೈಯಾಗಿ ಕೆಲಸ ಮಾಡಿದ್ದರು. ಅನುಭವ ಮಂಟಪ ಪುನರ್ ನಿರ್ಮಾಣ, ಶಿಕ್ಷಣ, ಕನ್ನಡ ಸೇವೆ ಸೇರಿ ಮುಂತಾದ ವಿಧಾಯಕ ಕಾರ್ಯಗಳಲ್ಲಿ ಈ ಇಬ್ಬರ ಕೊಡುಗೆ ದೊಡ್ಡದಿದೆ. ಬಸವಣ್ಣನವರ ಎಲ್ಲ ಕಾರ್ಯಗಳು ಡಾ.ಚನ್ನಬಸವ ಪಟ್ಟದ್ದೇವರು ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆೆಯಡಿ ತೆರೆದ ಎಲ್ಲ ಶಾಲಾ-ಕಾಲೇಜುಗಳಿಗೆ ಬಸವಾದಿ ಶರಣರ ಹೆಸರಿಟ್ಟು ಮಹಾತ್ಮರ ಕೊಡುಗೆ ಸಾರಿದ್ದರು ಎಂದು ತಿಳಿಸಿದರು.
ಹುಲಸೂರು ಗುರುಬಸವೇಶ್ವರ ಸಂಸ್ಥಾಾನ ಮಠದ ಶಿವಾನಂದ ಸ್ವಾಾಮೀಜಿ, ಸಂಸದ ಸಾಗರ್ ಖಂಡ್ರೆೆ ಮಾತನಾಡಿದರು.
ಪಟ್ಟದ್ದೇವರ ವಿಚಾರಧಾರೆ ಮಠಾಧೀಶರಿಗೆ ಮಾದರಿ : ಖಂಡ್ರೆೆ

