ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.23:
ಮತಗಳವು ವಿರುದ್ಧ ತಾವು ನಡೆಸಿದ ಹೋರಾಟವನ್ನು ನಾನು ಮನಸಾರೆ ಬೆಂಬಲಿಸಿದ್ದೇನೆ. ಕೆಪಿಸಿಸಿ ನಿಯೋಜಿಸಿದ್ದ ಬಿಎಲ್ಒಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದರೆ ರಾಜ್ಯದಲ್ಲಿ ಇನ್ನಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆೆಸ್ ಗೆಲ್ಲಬಹುದಿತ್ತು ಎಂಬುದನ್ನು ಹೇಳಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿದೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ನವೆಂಬರ್ 17ರಂದು ರಾಹುಲ್ಗೆೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ಮತಗಳವು ಕುರಿತು ತಾವು ಹೇಳಿದ್ದನನ್ನುವಿಡಿಯೋ ಮಾಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಾದ ಅರ್ಥದಲ್ಲಿ ನಿಮಗೆ ವರದಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನು ಇದೆ?
ಪತ್ರದಲ್ಲಿ ಅಂದು ಮತಗಳ್ಳತನ ಬಗ್ಗೆೆ ತಾವು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ವಿವರವನ್ನು ಲಗತ್ತಿಿಸಿದ್ದಾರೆ. ಕನ್ನಡದ ಹೇಳಿಕೆ ಮತ್ತು ಅದರ ಇಂಗ್ಲಿಿಷ್ ತರ್ಜುಮೆಯನ್ನು ಲಗತ್ತಿಿಸಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ನಾನು ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದೆ. ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಸಂಬಂಧ ನಾನು ಕೆಲ ಸತ್ಯಾಾಂಶಗಳನ್ನು ನಿಮ್ಮ ಗಮನಕ್ಕೆೆ ತರಲು ಬಯಸುತ್ತೇನೆ. ಮತಗಳ್ಳತನ ಅಭಿಯಾನಕ್ಕೆೆ ನಾನು ಮನಸಾರೆ ಬೆಂಬಲ ವ್ಯಕ್ತಪಡಿಸಿದ್ದೆ. ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ನಡೆಸಿದ ಪ್ರತಿಭಟನಾ ರ್ಯಾಾಲಿಯಲ್ಲಿ ನಾನೂ ಪಾಲ್ಗೊೊಂಡು ನನ್ನ ಸಂಪೂರ್ಣ ಬೆಂಬಲ ಸೂಚಿಸಿದ್ದೆ. ಈ ವಿಚಾರವಾಗಿ ನಿಮ್ಮ ಹೋರಾಟವನ್ನು ಹಾಗೂ ನಿಮ್ಮ ನಾಯಕತ್ವವನ್ನು ನಾನು ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಮತಗಳ್ಳತನದ ಬಗ್ಗೆೆ ನೀಡಿದ ಹೇಳಿಕೆಯಲ್ಲಿ ಕೆಪಿಸಿಸಿ ನಿಯೋಜಿಸಿದ್ದ ಬಿಎಲ್ಎಗಳು ತಮ್ಮ ಜವಾಬ್ದಾಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಬಗ್ಗೆೆ ಒತ್ತಿಿ ಹೇಳುವುದಾಗಿತ್ತು. ಒಂದು ವೇಳೆ ನಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಈ ಮತಪಟ್ಟಿಿ ಲೋಪದೋಷಗಳ ಬಗ್ಗೆೆ ಸರಿಯಾಗಿ ಗಮನ ಹರಿಸಿದ್ದರೆ, ಈ ಮತಗಳ್ಳತನವನ್ನು ತಪ್ಪಿಿಸಬಹುದಿತ್ತು. ಆ ಮೂಲಕ ಕಾಂಗ್ರೆೆಸ್ ರಾಜ್ಯದಲ್ಲಿ 8-10 ಕ್ಷೇತ್ರಗಳನ್ನು ಹೆಚ್ಚಿಿಗೆ ಗೆಲ್ಲಬಹುದಿತ್ತು ಎಂದು ವಿವರಿಸಿದ್ದಾರೆ.
ಮತಗಳ್ಳತನ ಸಂಬಂಧ ನನ್ನ ಹೇಳಿಕೆಯ ಸತ್ಯಾಾಂಶ ಹಾಗೂ ವಾಸ್ತವಾಂಶವನ್ನು ತಮ್ಮ ಮುಂದಿಡಲು ನಾನು ಈ ಪತ್ರವನ್ನು ಬರೆದಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಿ, ಅದನ್ನು ತಪ್ಪಾಾಗಿ ನಿಮ್ಮ ಗಮನಕ್ಕೆೆ ತಂದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ತಮ್ಮಲ್ಲಿ ಮನವಿ ಮಾಡುತ್ತೇನೆ. ಈ ಬಗ್ಗೆೆ ಸವಿವರವಾಗಿ ಚರ್ಚಿಸುವ ಸಂಬಂಧ ತಮ್ಮ ಭೇಟಿಗೆ ನನಗೆ ಅವಕಾಶ ನೀಡುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜಣ್ಣ ಪತ್ರವನ್ನು ಹೈಕಮಾಂಡ್ ಗಮನಿಸುತ್ತದೆ
ಮಗು ಅತ್ತರೆ ಯಾರು ಸಮಾಧಾನ ಮಾಡಬೇಕು. ತಂದೆ – ತಾಯಿ, ಪೋಷಕರು ಸಮಾಧಾನ ಮಾಡಬೇಕು. ಕಾಂಗ್ರೆೆಸ್ನಲ್ಲಿ ಏನೇ ಸಮಸ್ಯೆೆ ಇದ್ದರೂ ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪತ್ರದ ಬಗ್ಗೆೆ ಪ್ರತಿಕ್ರಿಿಯಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಪತ್ರ ಬರೆದಿರುವ ವಿಚಾರವಾಗಿ ಪತ್ರದ ಬಗ್ಗೆೆ ಅವರನ್ನೇ ಕೇಳಬೇಕು. ಪಕ್ಷದ ವರಿಷ್ಠರನ್ನು ಭೇಟಿ ಮಾಡೋದು ಅವರವರ ಹಕ್ಕು. ಅವರ ಪ್ರತಿಪಾದನೆ, ಅವರ ವಿಚಾರ. ಅದರ ಬಗ್ಗೆೆ ನಾನು ಹೇಳಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆೆಗಳಿದ್ದರೂ ಹೈಕಮಾಂಡ್ ಗಮನಿಸುತ್ತಿಿರುತ್ತದೆ. ನಮ್ಮ ಪಕ್ಷದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾಾತಂತ್ರ್ಯ ಇದೆ. ಹಾಗಾಗಿಯೇ ಅವರು ಆ ಮಾತನ್ನು ಹೇಳಿದ್ದಾರೆ ಎಂದರು.
ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಸಾಮಾನ್ಯವಾಗಿ ದೆಹಲಿಗೆ ಹೋಗುತ್ತಾಾರೆ. ಕೇಂದ್ರ ಜಲಶಕ್ತಿಿ ಸಚಿವರನ್ನು ಭೇಟಿಯಾಗ್ತಾಾರೆ. ಸಚಿವ ಪ್ರಿಿಯಾಂಕ್ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾಗ್ತಾಾರೆ ಎಂದು ತಿಳಿಸಿದರು.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆೆ ನನಗೆ ಮಾಹಿತಿ ಇಲ್ಲ. ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ ಹೇಳಿದಂತೆ ನಾವು ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

