ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.23:
ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋತುಚಕ್ರ ರಜೆಯನ್ನು ಘೋಷಿಸಿದ್ದು ಜನೆವರಿಯಿಂದ ಸಾರಿಗೆ ಸಂಸ್ಥೆೆ ನಿಗಮಗಳಲ್ಲಿ ಜಾರಿಗೆ ತರುವಂತೆ ರಾಜ್ಯ ರಸ್ತೆೆ ಸಾರಿಗೆ ನಿಗಮದ ವ್ಯವಸ್ಥಾಾಪಕ ನಿರ್ದೇಶಕರು ಸುತ್ತೋೋಲೆ ಹೊರಡಿಸಿದ್ದಾರೆ.
ಎಲ್ಲಾಾ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿಿರುವ ಮಹಿಳಾ ನೌಕರರಿಗೆ ಜನವರಿ 1 2026 ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ನೀಡುವಂತೆ ಸೂಚಿಸಲಾಗಿದೆ.
ರಜೆ ಪಡೆಯಲು ಷರತ್ತುಗಳನ್ನು ಹಾಕಿದೆ. 18ರಿಂದ 52 ವರ್ಷ ವಯಸ್ಸಿಿನ ನಿಗಮದ ಮಹಿಳಾ ನೌಕರರು ಈ ರಜೆ ಪಡೆಯಲು ಅರ್ಹರಾಗಿರುತ್ತಾಾರೆ. ಸಾಂದರ್ಭಿಕ ರಜೆ ಮಂಜೂರು ಮಾಡಲು ಸಕ್ಷಮ ಪ್ರಾಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು. ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವ ಅಗತ್ಯ ಇಲ್ಲ. ಈ ರಜೆಯನ್ನು ರಜೆ ಹಾಗೂ ರಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು. ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜನೆ ಮಾಡುವಂತಿಲ್ಲ. ಸದರಿ ರಜೆಯನ್ನು ಆಯಾ ತಿಂಗಳಿನಲ್ಲೇ ಪಡೆಯಬೇಕು. ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶ ಇರುವುದಿಲ್ಲ ಎಂಬ ಷರತ್ತುನ್ನು ವಿಧಿಸಲಾಗಿದೆ.

