ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.23:
ರಾಜ್ಯದಲ್ಲಿ ಕಾಂಗ್ರೆೆಸ್ ಸರ್ಕಾರ ಆಡಳಿತಕ್ಕೆೆ ಬಂದ ಮೇಲೆ ಎಲ್ಲಾ ಕ್ಷೇತ್ರದಲ್ಲಿಯೂ ವಿಲವಾಗಿದೆ. ಯಾವುದೇ ಅಭಿವೃದ್ಧಿಿ ಕಾರ್ಯ ನಡೆಯುತ್ತಿಿಲ್ಲ. ಹಳ್ಳಿಿಯಿಂದ ವಿಧಾನಸೌಧದವರೆಗೂ ಭ್ರಷ್ಟಾಾಚಾರ ನಡೆಯುತ್ತಿಿದೆ. ಆರ್ಥಿಕವಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿಿ,ಸಂಸದ ಬಸವರಾಜ ಬೊಮ್ಮಾಾಯಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆೆಸ್ ನಲ್ಲಿ ಕುರ್ಚಿಯ ಕಿತ್ತಾಾಟ ಜೋರಾಗಿ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಈ ಸಮಸ್ಯೆೆ ಹೈಕಮಾಂಡ್ ಬಗೆಹರಿಸಲಿದೆ ಎಂದು ಹೇಳಿ, ಇದೀಗ ಈ ಸಮಸ್ಯೆೆ ಹೈಕಮಾಂಡ್ ಸೃಷ್ಟಿಿ ಮಾಡಿಲ್ಲ, ಇಲ್ಲೆ ಸೃಷ್ಟಿಿಯಾಗಿದೆ ಎಂಬ ಮಾತು ಹೇಳಿದ್ದಾರೆ. ಕಾಂಗ್ರೆೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದಿಲ್ಲ, ಎರಡು ಭಾಗವಾಗಿವೆ. ಆಗಿರುವ ಗೊಂದಲಕ್ಕೆೆ ಹೈಕಮಾಂಡ್ ಪಾತ್ರ ಕೂಡ ಇದೆ ಎಂದರು.
ಕಾಂಗ್ರೆೆಸ್ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ತಂದಿರುವ ದ್ವೇಷ ಭಾಷಣದ ಕಾಯ್ದೆೆ, ಇದೊಂದು ದಮನಕಾರಿ (ಕಾಯ್ದೆೆ)ಕಾನೂನಾಗಿದೆ. ದ್ವೇಷ ಭಾಷಣ ಏನು ಎನ್ನುವುದು ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ವ್ಯಾಾಖ್ಯಾಾನಿಸಿದೆ. ಹೀಗಾಗಿ ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕುವಂತ ಕಾನೂನು ಇದಾಗಿದೆ. ವ್ಯಕ್ತಿಿಯ ಸ್ವಾಾತಂತ್ರ್ಯ, ಅಭಿವ್ಯಕ್ತಿಿ ಸ್ವಾಾತಂತ್ರ್ಯ ವನ್ನು ಹತ್ತಿಿಕ್ಕುವ ಕೆಲಸ ಸರ್ಕಾರ ಮಾಡಿದ್ದು, ಈಗಾಗಲೇ ಬಿಎನ್ಎಸ್ ಕಾಯ್ದೆೆಯಡಿ ಇದು ಇದೆ. ವಿಶೇಷ ಕಾನೂನು ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಿಸಿದ ಅವರು, ಸರಕಾರದ ನೀತಿ ಹಾಗೂ ನಿಯತ್ತಿಿನ ಮೇಲೆ ಸಂಶಯ ಮೂಡುತ್ತಿಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಾಧ್ಯಕ್ಷರ ಬದಲಾವಣೆ ಕುರಿತಾದ ಪ್ರಶ್ನೆೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಹಳೆ ಬೇರು ಹೊಸ ಚಿಗುರು ಎಲ್ಲವೂ ಜೊತೆಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿಿದ್ದೇವೆ. ಭಿನ್ನರ ಬಣ ಅವರು ಸಹ ರಾಜ್ಯ ಬಿಜೆಪಿಯಲ್ಲಿ ಎಲ್ಲರನ್ನೂ ಒಟ್ಟಿಿಗೆ ತೆಗೆದುಕೊಂಡು ಹೋಗುವ ಸಲುವಾಗಿ ಕೆಲಸ ಮಾಡುತ್ತಿಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಅಷ್ಟು ಅಧಿಕಾರವಿದೆ ಎಂದರು.

