ಸುದ್ದಿಮೂಲ ವಾರ್ತೆ ಸಿರವಾರ, ಡಿ.23:
ರಾಷ್ಟ್ರೀಯ ಹೆದ್ದಾರಿ -764ಎ ಹಾಗೂ 748ಎ ರಸ್ತೆೆಯ ಕಾಮಗಾರಿಗೆ ಭೂಮಿ ಕಳೆದುಕೊಂಡ ತಾಲೂಕಿನ ಹಣಗಿ ಗ್ರಾಾಮದ ಸರ್ವೆ ನಂ.91,92 ಸೇರಿದಂತೆ 5ಜನಕ್ಕೂ ಹೆಚ್ಚು ರೈತರಿಗೆ ಭೂಮಿ ಪರಿಹಾರ ಸಂಪೂರ್ಣ ಹಣ ಬಂದಿಲ್ಲ, ಸ್ವಲ್ಪ ಮಟ್ಟಿಿಗೆ ಹಾಕಿದ್ದಾರೆ ಎಂದು ಕಾಮಗಾರಿ ಬಂದ್ ಮಾಡಿದ ಘಟನೆ ತಾಲೂಕಿನ ಹಣಗಿ ಗ್ರಾಾಮದಲ್ಲಿ ಮಂಗಳವಾರ ಜರುಗಿತು.
ಹೆದ್ದಾರಿ ರಸ್ತೆೆಯ ನಿರ್ಮಾಣಕ್ಕೆೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಿಲ್ಲ, ಭೂಮಿ ಕಳೆದುಕೊಳ್ಳದೆ ಇರುವ ಹಲವಾರು ರೈತರ ಖಾತೆಗೆ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿದೆ, ನಮಗೆ ಪರಿಹಾರದ ಮೊತ್ತ ಹಾಕುವಂತೆ ರೈತರು ಪಟ್ಟುಹಿಡಿದು, ಕಾಮಗಾರಿ ಯಂತ್ರಕ್ಕೆೆ ಅಡ್ಡಗಟ್ಟಿಿದರು. ಕಾಮಗಾರಿ ರದ್ದು ವಿಷಯ ತಿಳಿದು ತಹಶಿಲ್ದಾಾರ ಅಶೋಕ ಪವಾರ, ಸಿಪಿಐ ಶಶಿಕಾಂತ, ಭೂಸ್ವಾಾಧಿನ ಅಧಿಕಾರಿ ಭೀಮರಾವ್ ರೈತರೊಂದಿಗೆ ಮಾತನಾಡಿ 15ದಿನದಲ್ಲಿ ಸಂಪೂರ್ಣವಾಗಿ ಖಾತೆಗೆ ಜಮಾ ಮಾಡಲಾಗುವುದು, ಯಾವುದೇ ತೊಂದರೆ ಇಲ್ಲ, ತಾಂತ್ರಿಿಕ ಕಾರಣದಿಂದ ಹಣ ಜಮಾ ಸಮಸ್ಯೆೆ ಆಗಿದೆ, ಪರಿಹಾರವನ್ನು ಖಂಡಿತವಾಗಿ ನೀಡಲಾಗುತ್ತದೆ ಎಂದು ಭರವಸೆಯ ನಂತರ ಕಾಮಗಾರಿ ಮಾಡಲು ಅವಕಾಶ ನೀಡಿದರು.
ಭೂ ಪರಿಹಾರಕ್ಕೆೆ ಆಗ್ರಹ : ಕಾಮಗಾರಿ ಬಂದ್

