ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.23:
ಪ್ರಕೃತಿಯ ಮೇಲೆ ಪ್ರಹಾರ ಮಾಡುತ್ತಾಾ ವಿಕಾಸದ ಭ್ರಮೆಯಲ್ಲಿ ಮಾನವ ವಿನಾಶದತ್ತ ಪಯಣ ಮಾಡುತ್ತಿಿದ್ದಾಾನೆ ಎಂದು ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಬೇಸರ ವ್ಯಕ್ತಪಡಿಸಿದರು.
ನಗರದ ಟೌನ್ಹಾಲ್ನಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ, ಪರ್ಯಾವರಣ ಟ್ರಸ್ಟ್ ಸಂಯುಕ್ತಾಾಶ್ರಯದಲ್ಲಿ ನಿರ್ಮಲ ತುಂಗಭದ್ರಾಾ ಅಭಿಯಾನ 3ನೇ ಹಂತದ ಜಾನಜಾಗೃತಿ ಪಾದಯಾತ್ರೆೆಯ ಹಿನ್ನೆೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಿಸರ್ಗವನ್ನು ಪೂಜಿಸುವ ನಾವು, ಪ್ರಸ್ತುತ ಭಯಾನಕ ಹಂತಕ್ಕೆೆ ತಂದು ನಿಲ್ಲಿಸಿರುಚುವುದು ವಿಷಾದದ ಸಂಗತಿ. ಪ್ರಕೃತಿಯಲ್ಲಿ ವಿಚಿತ್ರ ಘಟನೆಗಳು ಸಂಭವಿಸಿ ಅನಾಹುತಗಳು ಉಂಟಾಗುತ್ತಿಿವೆ. ಮಾನವ ಪ್ರಕೃತಿಯ ಅವಿಭಾಜ್ಯ ಅಂಗವೇ ಹೊರತು ಪ್ರಕೃತಿ ವಿಜೇತರಲ್ಲ. ಪ್ರಸ್ತುತ ವ್ಯಕ್ತಿಿ ಕೇಂದ್ರಿಿಕೃತ ವಿಕಾಸದತ್ತ ಸಾಗುತ್ತಾಾ, ನಿಸರ್ಗದ ಸಂವೇದನೆ ಕಳೆದುಕೊಳ್ಳುತ್ತಿಿದ್ದೇವೆ. ಮುಂದಿನ ಪೀಳಿಗೆ ಆರೋಗ್ಯವಾಗಿರಲು ರಾಸಾಯನಿಕ ಮುಕ್ತ ಪರಿಸರ ಕೊಡಬೇಕಿದೆ ಎಂದರು.
ತುಂಗಭದ್ರಾಾ ನದಿ ಅಪಾಯದ ಅಂಚಿನಲ್ಲಿದೆ. ತುಂಗಭದ್ರಾಾ ಸೇರಿ ದೇಶದ 80 ನದಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವರದಿಗಳಿವೆ. ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನವು 27 ರಾಜ್ಯಗಳ 80 ನದಿಗಳ ನಿರ್ಮಲ ಆಂದೋಲನ ಮಾಡಲಾಗಿದೆ. ಈಗ ನಿರ್ಮಲ ತುಂಗಭದ್ರಾಾ ಅಭಿಯಾನದ 3ನೇ ಹಂತದ ಜನಜಾಗೃತಿ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗುತ್ತಿಿದೆ. 560 ಕಿಮೀ ಪಾದಯಾತ್ರೆೆ ಮಾಡಲು ಉದ್ದೇಶಿಸಿ, ಈಗಾಗಲೇ ಶೃಂಗೇರಿಯಿಂದ ಕಿಷ್ಕಿಿಂದಾ ವರೆಗೆ ಎರಡು ಹಂತಗಳಲ್ಲಿ ಪಾದಯಾತ್ರೆೆ ಮಾಡಲಾಗಿದೆ. ಈಗ ಕಿಷ್ಕಿಿಂದಾದಿಂದ ಮಂತ್ರಾಾಲಯದವರೆಗೆ ಮೂರನೇ ಹಂತದ ಪಾದಯಾತ್ರೆೆ ಡಿ.12 ರಿಂದ ಆರಂಭಗೊಳ್ಳಲಿದೆ. ಎಲ್ಲಾಾ ಕಡೆಯೂ ಉತ್ತಮ ಸ್ಪಂದನೆ ಸಿಕ್ಕಿಿದೆ. ಇದೊಂದು ಜನಾಂದೋಲನವಾಗಿ ರೂಪಯಗೊಳ್ಳಬೇಕಿದೆ. ನಿರ್ಮಲ ತುಂಗಭದ್ರಾಾ ಸಂಬಂಧಿಸಿದಂತೆ ವೈಜ್ಞಾಾನಿಕ ವರದಿ ಸಿದ್ದಪಡಿಸಿ, ರಾಜ್ಯ ಸರಕಾರಕ್ಕೆೆ ಸಲ್ಲಿಸಲಾಗುವುದು ಎಂದರು.
ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಮೊಮ್ಮಗಳು ರಾಜಶ್ರೀ ಚೌದ್ರಿಿ ಪಾದಯಾತ್ರೆೆಗೆ ಚಾಲನೆ ನೀಡಲಿದ್ದಾಾರೆ. ಜಲಪುರುಷ ರಾಜೇಂದ್ರ ಸಿಂಗ್ ಜಾಥಾದಲ್ಲಿ ಭಾಗಿಯಾಗಲಿದ್ದಾಾರೆ. 29 ರಂದು ಸಿಂಧನೂರಿನಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯ ಸಿದ್ದಗಂಗಾ ಶ್ರೀಗಳು ವಹಿಸಲಿದ್ದಾಾರೆ. ಜಾಥಾ ಮತ್ತು ಸಾರ್ವಜನಿಕ ಕಾರ್ಯ್ಚಕ್ರಮದಲ್ಲಿ ರೈತರು, ರಾಜಕಾರಣಿಗಳು, ವಿವಿಧ ಮಠಾಧೀಶರು, ಸಂಘ ಸಂಸ್ಥೆೆಗಳ ಮುಖಂಡರು, ವಿದ್ಯಾಾರ್ಥಿಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿ ಯಶಸ್ವಿಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ದೇಶದ ಜನಸಂಖ್ಯೆೆಗೆ ಅನುಗುಣವಾಗಿ ಸಮಸ್ಯೆೆಗಳು ಸೃಷ್ಠಿಿಯಾಗುತ್ತಿಿವೆ. ಈ ಅಭಿಯಾನ ಬಹಳ ವರ್ಷಗಳ ಹಿಂದೆಯೇ ಆರಂಭವಾಗಬೇಕಿತ್ತು. ಬಸವರಾಜ ಪಾಟೀಲ್ ಅವರು ಕೇಂದ್ರ ಹಾಗೂ ರಾಜ್ಯದ ಸಚಿವರೊಂದಿಗೆ ಚರ್ಚಿಸಿ, ಚಿಂತನೆ ಮಾಡಿ ಆಂದೋಲನ ಹಮ್ಮಿಿಕೊಂಡಿರುವುದು ಸ್ವಾಾಗತಾರ್ಹ. ರೈತರಿಗೆ, ವಿದ್ಯಾಾರ್ಥಿಗಳಿಗೆ, ಮಹಿಳೆಯರಿಗೆ ಜಾಗೃತಿ ಮೂಡಿಸುವ ನಿಟ್ಟಿಿನಲ್ಲಿ ಎಲ್ಲರೂ ಒಳಗೊಳ್ಳಬೇಕಿದೆ. ಪರಿಸರ, ನೀರಿನ ಶುದ್ದೀಕರಣ, ನದಿಗಳ, ಅರಣ್ಯ ರಕ್ಷಣೆ ಮಾಡುವ ನಿಟ್ಟಿಿನಲ್ಲಿ ಅತ್ಯಂತ ಮಹತ್ವದ್ದಾಾಗಿದೆ ಎಂದರು.
ಯದ್ದಲದೊಡ್ಡಿಿಯ ಮಹಾಲಿಂಗ ಮಹಾಸ್ವಾಾಮಿಗಳು, ರಂಭಾಪುರಿ ಕಾಸಾಶಾಖಾಮಠದ ಸೋಮನಾಥ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಾಗೃತಿ ಆಂದೋಲನದ ಬಾಲಕೃಷ್ಣ ನಾಯ್ಡು, ಸಿ.ಟಿ.ಮಾಧವ, ಮುಖಂಡರಾದ ತಿಮ್ಮಯ್ಯ ನಾಯಕ, ಲಿಂಗರಾಜ ಪಾಟೀಲ್, ಅಮೀನಪಾಷಾ ದಿದ್ದಿಗಿ, ಟಿ.ಹುಸೇನ ಸಾಬ್, ಅಶೋಕ ಉಮಲೂಟಿ, ಹೆಚ್.ಎ್.ಮಸ್ಕಿಿ ಸೇರಿದಂತೆ ಅನೇಕರು ಇದ್ದರು.
ನಿರ್ಮಲ ತುಂಗಭದ್ರಾ ಅಭಿಯಾನ: 3ನೇ ಹಂತದ ಜನಜಾಗೃತಿ ಪಾದಯಾತ್ರೆ ವಿಕಾಸದ ಭ್ರಮೆಯಲ್ಲಿ ವಿನಾಶದತ್ತ ಪಯಣ – ಬಸವರಾಜ ಪಾಟೀಲ್

