ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.23:
ಪಟ್ಟಣದ ವಿನಿ ವಿಧಾನ ಸೌಧದ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರೊೊ. ಬಿ.ಕೃಷ್ಣಪ್ಪ ಸ್ಥಾಾಪಿತ ಕರ್ನಾಟಕ ದಲಿತ ಸಂಘರ್ಷಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರಗಲ್ ನೇತೃತ್ವ ವಹಿಸಿದರು.
ಮಹಿಳೆಯರು ಸೇರಿದಂತೆ ಸಾವಿರಾರು ಜನರ ಬೃಹತ್ ಪ್ರಮಾಣದಲ್ಲಿ ಪ್ರತಿಭಟನಾ ಹೋರಾಟದಲ್ಲಿ ಅವರು ಮಾತನಾಡಿ, ಭೂ ರಹಿತ ಬಡವರು ಸರಕಾರಿ ಭೂಮಿಯನ್ನು ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿಿದ್ದು ಈ ಭೂಮಿಗಳನ್ನು ಸಕ್ರಮಗೊಳಿಸಬೇಕು,ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಿಸಿಕೊಂಡು ವಾಸವಾಗಿರುವ ಬಡ ಕುಟುಂಬಗಳನ್ನು ಸಕ್ರಮಗೊಳಿಸಬೇಕು.
ಅರಕೇರಾ ಗ್ರಾಾಮದ ಹೊರ ವಲಯದಲ್ಲಿ ಸಾಕಷ್ಟು ಸರಕಾರಿ ಭೂಮಿ ಲಭ್ಯವಿದ್ದು, ವಸತಿ ರಹಿತ ಬಡವರಿಗಾಗಿ ನಿವೇಶನಕ್ಕಾಾಗಿ 20ಎಕರೆ ಭೂಮಿ ಮಂಜೂರಿ ಮಾಡಬೇಕು, ಸುವರ್ಣ ಗ್ರಾಾಮೋದಯ ಯೋಜನೆಯಡಿ ಆಯ್ಕೆೆಯಾದ ಕ್ಯಾಾದಿಗ್ಗೇರಾ, ಶಾವಂತಗೇರಾ, ಲಿಂಗದಹಳ್ಳಿಿ,ಮಸರಕಲ್, ಅರಷಿಣಿಗಿ, ನಾಗೋಲಿ, ಮತ್ತು ಚಿಂತಲಕುಂಟಾ ಗ್ರಾಾಮಗಳಲ್ಲಿ ವಸತಿಗಾಗಿ ಗುರುತಿಸಲಾದ ಭೂಮಿಯಲ್ಲಿ ವಸತಿ ಬಡಾವಣೆ ಮಾಡಿ ನಿವೇಶನ ಹಂಚಬೇಕು ಎಂದು ಒತ್ತಾಾಯಿಸಿದರು.
ಚುನಾಯಿತ ಜನಪ್ರತನಿಧಿಗಳ ಮಾಸಿಕ ವೇತನ ಹೆಚ್ಚಳ ಮಾಡಿದಂತೆ ದೇವದಾಸಿಯರ, ವಿಧವಾ, ಮತ್ತು ಮಂಗಳ ಮುಖಿಯರಿಗೆ ನೀಡುವ ಮಾಸಾಶನ ಹೆಚ್ಚಿಿಸಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಿ ಮಂಡಳಿಗೆ ನೀಡಲಾದ ಒಟ್ಟು ವಿಸ್ತೀರ್ಣ 29ಎಕರೆ 31ಗುಂಟೆ ಭೂಮಿ ಹದ್ದುಬಸ್ತ್ ಮಾಡಬೇಕು, ಈ ಆಸ್ತಿಿಯನ್ನು ರಾಜೀವಗಾಂಧಿ ವಸತಿ ನಿಗಮಕ್ಕೆೆ ವರ್ಗಾಯಿಸಿ ವಸತಿ ರಹಿತ ಬಡವರಿಗೆ ನಿವೇಶನ ಹಂಚಬೇಕು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಇತರೆ ವಸತಿ ನಿಲಯಗಳ ವಿದ್ಯಾಾರ್ಥಿಗಳು ದೇವದುರ್ಗ ಪಟ್ಟಣಕ್ಕೆೆ ಹೋಗಿಬರಲು ಬಸ್ಸ್ ಸೌಕರ್ಯ ಒದಗಿಸಬೇಕು. ಬಸ್ಸು ತಂಗುದಾಣ ನಿರ್ಮಿಸಬೇಕು ಎಂದು ಹನುಮಂತಪ್ಪ ಕಾಕರಗಲ್ ಒತ್ತಾಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶಿವಪ್ಪ ಪಲಕನಮರಡಿ, ತಾಲೂಕ ಸಂಚಾಲಕ ಶಿವರಾಜ ಕೋರಿ, ಯೇಸು ಮಸರಕಲ್, ಹೈದರ್ ಅಲಿ ಪಲಕನಮರಡಿ, ರಂಗಣ್ಣ ಬುಂಕಲದೊಡ್ಡಿಿ, ಭೀಮಣ್ಣ ವೀರಗೋಟ್,ರಾಘವೇಂದ್ರ ಅಂಜಳ, ನಾಗರಾಜ ಭೇರಿ, ಹುಲ್ಲೇಶ ಕಾಕರಗಲ್, ಮೊಹ್ಮದ ಯೂಸ್ೂ, ಮೊಹ್ಮದ ರಫಿ ಖುರೇಶಿ,ಪಿಡ್ಡಪ್ಪ ನಾಯಕ, ಚನ್ನಮ್ಮ ಆಲ್ಕೋೋಡ, ಪಾರ್ವತಿ ಬಾಗೂರು, ನಾಗಮ್ಮ ದುರ್ಗಾನಾಯ್ಕ ತಾಂಡ, ಶಿವಪ್ಪ ಕ್ಯಾಾದಿಗೇರಾ, ರಮೇಶ ಸೂಗುರಾಳ ರಾಮಪ್ಪ ಹೇರುಂಡಿ ಸೇರಿದಂತೆ ವಿವಿಧ ಸಂಘಟನೆಗಳ ಮತ್ತು ರಾಜ್ಯ ಮತ್ತು ಜಿಲ್ಲಾಾ ದಲಿತ ಮುಖಂಡರು ಭಾಗವಹಿಸಿದ್ದರು.
ಬಗರ್ಹುಕುಂ ಸಾಗುವಳಿ ಸಕ್ರಮಕ್ಕೆ ದಸಂಸ ಆಗ್ರಹ

