ಸುದ್ದಿಮೂಲ ವಾರ್ತೆ ರಾಯಚೂರು , ಡಿ.23:
ನಗರದ ಹೊರವಲಯದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದಲ್ಲಿ ಮಹರ್ಷಿ ವಾಲ್ಮೀಕಿಯವರ ಮೂರ್ತಿ ಪ್ರತಿಷ್ಠಾಾಪನೆ ಮಾಡಿ ಮ್ಯೂಸಿಯಂ ಸ್ಥಾಾಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಬೇಕೆಂದು ಅಖಿಲಾಂಡ ಮಹರ್ಷಿ ವಾಲ್ಮೀಕಿ ನಾಯಕ ಸಮಿತಿಯ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಿಹಾಳ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸುಮಾರು 250 ಎಕರೆ ಭೂಮಿ ಹೊಂದಿರುವ ವಿಶ್ವವಿದ್ಯಾಾಲಯದಲ್ಲಿ ಮಹರ್ಷಿ ವಾಲ್ಮೀಕಿರವರ ಮೂರ್ತಿ ಪ್ರತಿಷ್ಠಾಾಪನೆ ಹಾಗೂ ವಾಲ್ಮೀಕಿರವರ ಜೀವನ ಚರಿತ್ರೆೆ ಒಳಗೊಂಡಂತೆ ಒಂದು ಜ್ಞಾನ ಮಂದಿ (ಮ್ಯೂಸಿಯಂ) ನಿರ್ಮಾಣ ಮಾಡಿದರೆ ಮಹರ್ಷಿ ವಾಲ್ಮೀಕಿರವರ ಜೀವನ ಕುರಿತು ಅಧ್ಯಯನ ಮಾಡಲು ವಿದ್ಯಾಾರ್ಥಿಗಳಿಗೆ ಪುಸ್ತಕಗಳ ಅನುಕೂಲವಾಗುತ್ತದೆ ಹಾಗೂ ಅಲ್ಲದೇ ಅವರು ರಚಿಸಿದ ಬಾಲ ಕಾಂಡ, ಆಯೋದ್ಯ ಕಾಂಡ, ಅರಣ್ಯ ಕಾಂಡ, ಕಿಷ್ಕಿಿಂದಾ ಕಾಂಡ, ಸುಂದರ ಕಾಂಡ ಹಾಗೂ ಉತ್ತರ ಕಾಂಡಗಳನ್ನು ಒಳಗೊಂಡಂತಹ ಪುಸ್ತಕಗಳ ಅನೂಕೂಲ ಮಾಡಿಕೊಡಬೇಕು ಹಾಗೂ ಕಲ್ಯಾಾಣ ಕರ್ನಾಟಕದಲ್ಲಿ ವಾಲ್ಮೀಕಿ ಸಮಾಜವು ಬಹುಸಂಖ್ಯಾಾತರಾಗಿರುವುದ್ದರಿಂದ ಉಚಿತ ಶಿಕ್ಷಣ ವ್ಯವಸ್ಥೆೆ ಕಲ್ಪಿಿಸಿಕೊಡಬೇಕೆಂದರು.
ಉನ್ನತ ವ್ಯಾಾಸಂಗ ಮಾಡಿರುವಂತಹ ವ್ಯಕ್ತಿಿಗಳನ್ನು ಶೇ.7ರ ಮೀಸಲಾತಿ ಪ್ರಕಾರ ನೇಮಕಾತಿ ಮಾಡಬೇಕು ದಿನಗೂಲಿ ನೌಕರರ ಖಾಯಂ ಗೊಳಿಸಿ ನೇಮಕ ಮಾಡಬೇಕು ಎಂದು ಒತ್ತಾಾಯಿಸಿದರು.
ಸುದ್ದಿಗೋಷ್ಠಿಿಯಲ್ಲಿ ರಾಘವೇಂದ್ರ ನಾಯಕ, ಸಿದ್ದಲಿಂಗಪ್ಪ, ನರಸಿಂಹಲು, ನಾಗೇಂದ್ರ, ವೀರೇಂದ್ರ ನಾಯಕ, ಕಾಶಿ ಇತರರಿದ್ದರು.
ರಾಯಚೂರು ವಿವಿಯಲ್ಲಿ ವಾಲ್ಮೀಕಿ ಮೂರ್ತಿ, ಮ್ಯೂಸಿಯಂ ಸ್ಥಾಾಪಿಸಿ- ವೆಂಕಟೇಶ ನಾಯಕ

