ಸುದ್ದಿಮೂಲ ವಾರ್ತೆ ರಾಯಚೂರು , ಡಿ.23:
ತಾಲೂಕಿನ ಯರಗೇರಾದ ಹಜರತ್ ಬಡೇಸಾಹೇಬ್ ಅವರ 127 ನೇ ವರ್ಷದ ಉರುಸ್ ಡಿ.27 ರಿಂದ ಮೂರು ದಿನ ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾ ಅಭಿವೃದ್ಧಿಿ ಮತ್ತು ಮೇಲುಸ್ತುವಾರಿ ಸಮಿತಿ ತಿಳಿಸಿದೆ.
ಡಿ.27ರ ಶನಿವಾರದಂದು ರಾತ್ರಿಿ 10:30 ಕ್ಕೆೆ ದರ್ಗಾದ ಸಜ್ಜಾಾದೆ ಸೈಯದ್ ಹಫೀಜುಲ್ಲಾ ಖಾದ್ರಿಿ ಮನೆಯಿಂದ ಗಂಧದ ಮೆರವಣಿಗೆ ನಡೆಯಲಿದ್ದು , ಡಿ.28 ರಂದು ಉರುಸ್ ಆರಂಭವಾದರೆ , ಡಿ.29 ಕ್ಕೆೆ ಜಿಯಾರತ್ ಕಾರ್ಯಕ್ರಮ ಜರುಗಲಿದೆ .
ಈ ಕಾರ್ಯಕ್ರಮಕ್ಕೆೆ ವಿವಿಧ ರಾಜ್ಯಗಳಿಂದ ಸುಮಾರು 1.50 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಉರುಸಿನ ಅಂಗವಾಗಿ ವಿಶೇಷ ಬಸ್ ಸೌಲಭ್ಯ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ದರ್ಗಾ ಆವರಣದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರ ವ್ಯವಸ್ಥೆೆ ಸೇರಿ ವಿವಿಧ ಇಲಾಖೆಗಳಿಂದ ಸೌಲಭ್ಯ ಒದಗಿಸಲು ಕೋರಿದ್ದಾಾಗಿ ತಿಳಿಸಲಾಗಿದೆ.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ್, ಸಂಸದ ಜಿ.ಕುಮಾರ ನಾಯಕ, ಶಾಸಕ ಬಸನಗೌಡ ದದ್ದಲ್ ಸೇರಿ ಹಾಲಿ, ಮಾಜಿ ಶಾಸಕರನ್ನು ಸಮಿತಿಯಿಂದ ಗೌರವಿಸಲಾಗುವುದು ಎಂದು ದರ್ಗಾ ಸಮಿತಿಯ ಅಧ್ಯಕ್ಷರಾದ ಮಹೆಬೂಬ್ ಪಟೇಲ್ , ಹಾಜಿ ಮಲಂಗ್ , ಕ್ರುದ್ದೀನ್ ಮತ್ತಿಿತರರು ತಿಳಿಸಿದ್ದಾಾರೆ.

