ಸುದ್ದಿಮೂಲ ವಾರ್ತೆ ರಾಯಚೂರು , ಡಿ.23:
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಪಿಂಜಾರ ಸಮಾಜದ ನಿಗಮಕ್ಕಾಾಗಿ ಧ್ವನಿ ಎತ್ತಿಿ ಸರಕಾರದ ಗಮನಕ್ಕೆೆ ತಂದಿರುವುದು ಸ್ವಾಾಗತಾರ್ಹ ಎಂದು ಜಿಲ್ಲಾಾ ಪಿಂಜಾರ ಸಮಾಜದ ಮುಖಂಡ ಖಾಸಿಂಸಾಬ್ ಎಳ್ಳೆೆಮನಿ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಇಸ್ಲಾಾಂ ಧರ್ಮದಲ್ಲಿ ಒಂದಾದ ಪಿಂಜಾರ, ನದ್ಾ ಮನ್ಸೂರಿ, ಜನಾಂಗ ಅತ್ಯಂತ ಹಿಂದುಳಿದ ಸಮುದಾಯಗಳಾಗಿದ್ದು, ರಾಜ್ಯದಲ್ಲಿ 35ರಿಂದ 40 ಲಕ್ಷ ಜನಸಂಖ್ಯೆೆ ಇದೆ ಎಂದರು.
ಸಮುದಾಯಕ್ಕೆೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಮುದಾಯಕ್ಕೆೆ ಪಿಂಜಾರ ಅಭಿವೃದ್ಧಿಿ ನಿಗಮ ರಚನೆ ಮಾಡಬೇಕು. ಸಮುದಾಯ ಅತ್ತ ಹಿಂದೂಗಳೂ ಅಲ್ಲಘಿ, ಇತ್ತ ಮುಸ್ಲಿಿಂರೂ ಅಲ್ಲ ಎಂಬ ದೋರಣೆ ಸರ್ಕಾರ ಅನುಸರಿಸುತ್ತಿಿದೆ ಎಂದು ಆಪಾದಿಸಿದರು.ಶಾಸಕ ಲಕ್ಷ್ಮಣ ಸವದಿ ಅವರು, ಸಮುದಾಯದ ಪರವಾಗಿ ಧ್ವನಿ ಎತ್ತಿಿರುವುದಕ್ಕೆೆ ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಿಯಲ್ಲಿ ಭೀಮಾಶಂಕರ ಯರಮಸಾಳ, ಹಸನ್ ಅಂಜಳ, ಅಲಿಸಾಬ್ ಇದ್ದರು.

