ಕೃಷಿಕರಿಗೆ ಅತ್ಯುಪಯುಕ್ತ ಕೃಷಿಯ ಜ್ಞಾಾನ ಕೈಪಿಡಿ ಕೃಷಿಜ್ಞಾಾನ ಪ್ರದೀಪಿಕೆ ಎಂಬ ಮಹತ್ತರ ಗ್ರಂಥ ರಚಿಸಿ ರೈತರ ಬಾಳಿಗೆ ಬೆಳಕಾದ ಕೃಷಿ-ಋಷಿ, ವೈರಾಗ್ಯ ಚಕ್ರವರ್ತಿ ಎಂದೆನಿಸಿದ ಘನಮಠ ನಾಗಭೂಷಣ ಶಿವಯೋಗಿಗಳ ಸಂತೆಕೆಲ್ಲೂರು ಗ್ರಾಾಮ ತಪೋಭೂಮಿ ಎನಿಸಿದೆ. 200 ವರ್ಷಗಳಾಚೆ ಘನಮಠರು ಭಾರತ ಒಕ್ಕಲುತನದ ಒಕ್ಕಲಿಗರ ನಾಡು ಎಂದರಿತು ಆಧ್ಯಾಾತ್ಮಿಿಕ ತತ್ವಪದ ಭಜನೆ ಮೂಲಕ ಕೃಷಿ ಮಹತ್ವ ಸಾರುತ್ತ ಭಕ್ತರ ಅಂಧಃಕಾರ ಹಾಗೂ ಮೌಢ್ಯ ತೊಡೆದು ಹಾಕಲು 18ನೇ ಶತಮಾನದಲ್ಲಿಯೇ ಬಸವಾದಿ ಶರಣರ ವಚನಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಚನ ಸಾಹಿತ್ಯವನ್ನು ಪ್ರಪ್ರಥಮವಾಗಿ ತಮ್ಮ ತಲೆ ಮೇಲೆ ಹೊತ್ತು ಹಳ್ಳಿಿಗೆ ಏಕರಾತ್ರಿಿ ಪಟ್ಟಣಕ್ಕೆೆ ಪಂಚರಾತ್ರಿಿ ಎನ್ನುತ್ತ ಆಧ್ಯಾಾತ್ಮಿಿಕ ಹಾಗೂ ಕೃಷಿ ಜ್ಞಾಾನದ ಮೂಲಕ ಬಸವ ವಚನ ಸಾಹಿತ್ಯ ಬೋಧಿಸಿದ ಮಹಾನ್ ಶರಣಸುತರೆನಿಸಿ ಇಂದಿಗೂ ಭಕ್ತರ ಇಷ್ಟಾಾರ್ಥ ಈಡೇರಿಸುವ ಕೃಷಿ ಜ್ಞಾಾನಯೋಗಿಯಾಗಿದ್ದಾಾರೆ.
ಆಧ್ಯಾಾತ್ಮಿಿಕ ಜೀವನ : ಸಂತೆಕೆಲ್ಲೂರು ಘನವೈರಾಗ್ಯ ಚಕ್ರವರ್ತಿ ನಾಗಭೂಷಣ ಶಿವಯೋಗಿಗಳು ಅಂದಿನ ಆಂಧ್ರ ಪ್ರದೇಶದ ಅತ್ತಿಿಪಲ್ಲಿ ಜಿಲ್ಲೆೆಯ ಪಟ್ಲೂರು ತಾಲೂಕಿನ ದೋರವಾಡದ ಈಗಿನ ದರೂರ ಗ್ರಾಾಮದ ವೀರಯ್ಯ, ವೀರಮ್ಮ ಶರಣ ಜಂಗಮ ದಂಪತಿಗಳ ಮಗನಾಗಿ ಜನಿಸಿದ ನಾಗಭೂಷಣ ಶಿವಯೋಗಿಗಳು ಘನಮಠದಪ್ಪರಿಂದ ವಿದ್ಯಾಾಭ್ಯಾಾಸ ಆಧ್ಯಾಾತ್ಮಿಿಕ ಜ್ಞಾಾನಾರ್ಜನೆ ಪಡೆದ ತಮ್ಮ ಗುರು ಘನಮಠದಪ್ಪನವರ ಹೆಸರು ಹೇಳುತ್ತ ಸಾಗಿದ ನಾಗಭೂಷಣರು ಕೌಟುಂಬಿಕ ಜೀವನದಲ್ಲಿ ವೈರಾಗ್ಯ ಹೊಂದಿ ಮನೆ-ಮಠ, ಹೆಂಡತಿ-ಮಕ್ಕಳನ್ನು ತೊರೆದು ಆಧ್ಯಾಾತ್ಮಿಿಕ ಬದುಕಿನತ್ತ ವಾಲಿದರು. ಮಹಾರಾಷ್ಟ್ರದ ಸೊಲ್ಲಾಾಪುರದ ಸಿದ್ಧರಾಮೇಶ್ವರ ದರ್ಶನ ನಂತರ ಬೀದರ, ಕಲಬುರಗಿ, ಚಿಂಚೋಳಿ, ಗೂಗಲ್, ನೀರಡಗುಂಬ, ವಿಜಯಪುರ-ಬಾಗಲಕೋಟೆ ಜಿಲ್ಲೆೆಗಳ ಕವಡಿಮಟ್ಟಿಿ, ಬೆಕ್ಕಿಿನಹಾಳ, ಹುಲಿಗಿನಹಾಳ, ಲಿಂಗದಳ್ಳಿಿ, ಮುದ್ದೇಬಿಹಾಳ, ತಾಳಿಕೋಟೆ, ಹುನಗುಂದ, ಕೂಡಲ ಸಂಗಮದ ಮೂಲಕ ಇಲಕಲ್ ಮಹಾಂತ ಶಿವಯೋಗಿಗಳ ಸಮಕಾಲೀನರಾಗಿ ಪ್ರಪ್ರಥಮ ಬಸವ ವಚನ ಪ್ರವಚನಕಾರರಾಗಿ ಪಾರಮಾರ್ಥಿಕ ತತ್ವಾಾದರ್ಶಗಳ ಅಂತರಂಗ ಬಹಿರಂಗ ಆಧ್ಯಾಾತ್ಮಿಿಕ ಕೃಷಿ ತಿರುಳನ್ನು ತತ್ವಪದಗಳು ಸ್ವರ ವಚನಗಳ ಸಾರುತ್ತ ಸಾಗಿದರು.
ಜೀಣೋದ್ದಾಾರ : ಘನಮಠರ ಲಿಂಗೈಕ್ಯರಾದ ನಂತರ 100 ವರ್ಷಗಳವರೆಗೆ ಪ್ರಚಾರಕ್ಕೆೆ ಬಂದಿರಲಿಲ್ಲ. 100 ವರ್ಷ ನಂತರ 1979ರಲ್ಲಿ ಶ್ರೀ ಸಿದ್ಧಲಿಂಗ ಮಹಾಸ್ವಾಾಮಿಗಳು ಪೀಠಾಧಿಕಾರಿಗಳಾಗಿ ಭಕ್ತ ಜನ ಪ್ರೇೇಮಿಗಳಾಗಿ ಘನಮಠ ಶಿವಯೋಗಿಗಳ
ಶ್ರೀಮಠದ ಗೋಪುರ, ಅನುಭವ ಮಂಟಪ, ಅವರು ನಡೆದಾಡಿದ ಕವಡಿಮಟ್ಟಿಿ, ಕುಂಟೋಜಿ ಇನ್ನಿಿತರ ಕ್ಷೇತ್ರಗಳ ಜೀರ್ಣೋದ್ಧಾಾರ ಕಾರ್ಯ ಕೈಗೊಂಡರು. ಸಿದ್ಧಲಿಂಗ ಶ್ರೀಗಳ ಲಿಂಗೈಕ್ಯರಾದ ನಂತರ ಗುರುಬಸವ ಮಹಾಸ್ವಾಾಮಿಗಳು ಘನಮಠೇಶ್ವರ ಮಠದ ಪೀಠಾಧಿಪತಿಗಳಾಗಿ ಹಿಂದಿನ ಶ್ರೀಗಳಂತೆ ಪ್ರತಿವರ್ಷ ನಾಡಿನ ಹೆಸರಾಂತ ಪ್ರವಚನಕಾರರಿಂದ ಪುರಾಣ-ಪ್ರವಚನ, ಆಧ್ಯಾಾತ್ಮಿಿಕ ಚಿಂತನೆಗಳ ಮೂಲಕ ಗ್ರಾಾಮೀಣ ಶಿಕ್ಷಣ ಸಂಸ್ಥೆೆ ಮೂಲಕ ಶೈಕ್ಷಣಿಕ ಪ್ರಗತಿಗೆ ಪ್ರಾಾಥಮಿಕ ಶಾಲೆ, ಪ್ರೌೌಢಶಾಲೆ, ಬಡ ಮಕ್ಕಳ ವಿದ್ಯಾಾರ್ಜನೆಗೆ ವಸತಿ ನಿಲಯ, ಪ್ರಸಾದ ನಿಲಯ ತೆರೆದು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿಿದ್ದು ನೂತನ ಶ್ರೀಮಠದ ಆಧುನೀ ಕರಣ, ಶಾಲಾಕಟ್ಟಡ, ಯಾತ್ರಾಾ ನಿವಾಸ, ಅಗಾಧ ಪ್ರವಚನ ಮಂ ಟಪ ನಿರ್ಮಿಸಲಾಗಿದೆ.
ಕೃಷಿಜ್ಞಾಾನಯೋಗಿ : ಘನಮಠ ಶಿವಯೋಗಿಗಳು ಆಧ್ಯಾಾತ್ಮಿಿಕ ತತ್ವ ಪದಕಾರರಾಗಿ ಅಂದೇ ಕೃಷಿ ವಿಜ್ಞಾಾನಿಯಾಗಿ ಒಣಭೂಮಿ, ನೀರಾವರಿ, ಮಣ್ಣು ಸಂಗ್ರಹಣೆ, ಮಿತನೀರು ಬಳಕೆ, ಒಡ್ಡು ನಿರ್ವಹಣೆ, ಬೀಜ, ಬೆಳೆ ಮಾಹಿತಿ ಸಂಗ್ರಹದ ಸಾವಯವ ಕೃಷಿ ಸೇರಿದಂತೆ ‘‘ಕೃಷಿಜ್ಞಾಾನ ಪ್ರದೀಪಿಕೆ’’ ಎಂಬ ಕೃಷಿ ಮಹಾನ್ ಗ್ರಂಥ ರಚಿಸಿ ಕೃಷಿ ಕ್ಷೇತ್ರಕ್ಕೆೆ ಅದ್ಭುತ ಕೊಡುಗೆ ನೀಡುವ ಮೂಲಕ ಕೃಷಿವಿಜ್ಞಾಾನ ಅರುಹಿದ ಅಮೂಲ್ಯ ಕೃಷಿ ಪದ್ಧತಿಯ ಕೃಷಿಜ್ಞಾಾನ ಪ್ರದೀಪಿಕೆ ರಚಿಸಿದರು. ಈ ಗ್ರಂಥ ಕೃಷಿ ವಿದ್ಯಾಾರ್ಥಿಗಳಿಗೆ ಹಾಗೂ ಕೃಷಿ ವಿಜ್ಞಾಾನಿಗಳಿಗೆ ಮಾರ್ಗದರ್ಶಕ ಗ್ರಂಥವಾಗಿದೆ. ಕೃಷಿಜ್ಞಾಾನ ಪ್ರದೀಪಿಕೆ ರಾಯಚೂರು ಕೃಷಿ ವಿಶ್ವವಿದ್ಯಾಾಲಯದ ಲಾಂಛನವಾಗಿದೆ. ಅವರ ಹೆಸರನ್ನು ರಾಯಚೂರು ಕೃಷಿ ವಿ.ವಿ,ಗೆ ನಾಮಕರಣ ಮಾಡಬೇಕೆಂಬ ಬಲವಾದ ಒತ್ತಡ ಪ್ರಸ್ತಾಾವನೆಗಳು ಸರಕಾರದ ಮುಂದಿದ್ದರೂ ಇಂದಿಗೂ ಕೃಷಿಕರ ಒತ್ತಾಾಸೆ ಈಡೇರಿಲ್ಲ.
ಇಂದು ರಥೋತ್ಸವ : ಪ್ರತಿವರ್ಷ ಜಾತ್ರಾಾ ಮಹೋತ್ಸವ ನಿಮಿತ್ಯ, ಶರಣರ ಪ್ರವಚನ ಜರುಗುತ್ತವೆ. ಎಳ್ಳ ಅಮವಾಸ್ಯಯ ನಂತರದ ಚತುರ್ಥಿಯ ಡಿಸೆಂಬರ 10 ರಿಂದ ನಿರಂತರ ಪ್ರವಚನ ದಾಸೋಹ ಜರುಗಿದವು. ಬಸವಾದಿ ಶಿವಶರಣರ ವಚನ ಕಟ್ಟಿಿನ ಪಲ್ಲಕ್ಕಿಿ ಮೆರವಣಿಗೆ ಅಯ್ಯಾಾಚಾರ, ಸಾಮೂಹಿಕ ವಿವಾಹ, ಮಹಾರಥೋತ್ಸವ ನಡೆಯುತ್ತದೆ ಈ ವೇಳೆ ಕೃಷಿ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ರೈತರನ್ನು ವಿಜ್ಞಾಾನಿಗಳನ್ನು ಗುರುತಿಸಿ ಕೃಷಿಋಷಿ ಪ್ರಶಸ್ತಿಿ ಪುರಸ್ಕಾಾರ ನೀಡಿ ಗೌರವಿಸಲಾಗುತ್ತದೆ. ಮಹಾ ರಥೋತ್ಸವ ಹಾಗೂ ಧಾರ್ಮಿಕ ಸಭೆಗೆ ಚುನಾಯಿತ ಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾಾಲಯದ ವಿಜ್ಞಾಾನಿಗಳು, ಸಾಧನೆಗೈದ ರೈತರು, ಭಾಗವಹಿಸುವ ಮೂಲಕ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು 15ದಿನಗಳ ಕಾಲ ಜರುಗುತ್ತವೆ. ಮಂಗಳವಾರ ಸಂಜೆ ಶ್ರೀಮಠದಿಂದ ನೀಡಲಾಗುವ ಕೃಷಿಋಷಿ ಪ್ರಶಸ್ತಿಿ ಪುರಸ್ಕಾಾರವನ್ನು ಕೊಪ್ಪಳ ಜಿಲ್ಲೆೆ ಕರಮುಡಿಯ ಆನಂದ ಮಲ್ಲಿಗೆವಾಡ ಅವರಿಗೆ ನೀಡಿ ಗೌರವಿಸಲಾಯಿತು. ಕಳೆದ ಮೂರು ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು ರಾಜಕೀಯ ಮುಖಂಡರು ಗಣ್ಯರು ಪಾಲ್ಗೊೊಂಡಿದ್ದು ಇಂದು ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೆ ನಿಮಿತ್ಯ ಬುಧವಾರ ಬೆಳಗ್ಗೆೆ ಕರ್ತೃ ಗದ್ದುಗೆಗೆ ರುದ್ರಾಾಭೀಷೇಕ ಸಹಸ್ರ ಬಿಲ್ವಾಾರ್ಚನೆ, ಕಳಸಾರೋಹಣ, ನೂತನ ಬೆಳ್ಳಿಿಯ ಛತ್ರಿಿ ಅರ್ಪಣೆ ಬಸವಾದಿ ಶರಣರ ವಚನ ಕಟ್ಟಿಿನ ಪಲ್ಲಕ್ಕಿಿ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಜರುಗಲಿವೆ. ಸಂಜೆ ಮಹಾರಥೋತ್ಸವ ಗುರುವಾರ ಘನಮಠೇಶ್ವರ ಶಾಲಾ ಶಿಕ್ಷಣ ಸಂಸ್ಥೆೆಯ ಉತ್ಸವ ಶುಕ್ರವಾರ ಮಹಿಳೆಯರ ರಥೋತ್ಸವ ಜರುಗಲಿವೆ.
– ಘನಮಠದಯ್ಯ ಮಹಾಂತಿನಮಠ ಸಂತೆಕೆಲ್ಲೂರ
ಅಂತರಂಗ ಬಹಿರಂಗ ಆಧ್ಯಾತ್ಮಿಕ ಕೃಷಿ ಅರುಹಿದ ಸಂತೆಕೆಲ್ಲೂರ ಘನಮಠ ಶಿವಯೋಗಿ

