ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.23:
ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಅಪ್ಪಟ ಬಸವಣ್ಣನವರ ಅನುಯಾಯಿ ಆಗಿದ್ದರು. ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ ಪ್ರಸಾರಕ್ಕೆೆ ಮುಡಿಪಾಗಿಟ್ಟಿಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾಾನದ ವತಿಯಿಂದ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ ಸಮಾರಂಭ ಉದ್ಘಾಾಟಿಸಿ ಅವರು ಮಾತನಾಡಿದರು.
ಪೂಜ್ಯರು ಅಪಾರ ದೂರದೃಷ್ಟಿಿ ಉಳ್ಳುವರಾಗಿದ್ದರು. ಗಡಿಭಾಗದ ಸಮಗ್ರ ಅಭಿವೃದ್ಧಿಿಗೆ ಶಿಕ್ಷಣ ಪ್ರಮುಖ ಅಸ್ತವೆಂದ ಅರಿತು 1936ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಆರಂಭಿಸಿ ಈ ಭಾಗದ ಅಭಿವೃದ್ಧಿಿಗೆ ನಾಂದಿ ಹಾಡಿದ್ದರು. ಪೂಜ್ಯರ ಸೇವೆ ಕೇವಲ ಬಸವತತ್ವ ಪ್ರಚಾರ ಪ್ರಸಾರಕ್ಕೆೆ ಸೀಮಿತ ಆಗಿರದೇ ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಸಲು ಹೋರಾಟ ನಡೆಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆೆ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಬದುಕು ನಮ್ಮೆೆಲ್ಲರಿಗೂ ಆದರ್ಶಪ್ರಾಾಯವಾಗಿದೆ. ಪೂಜ್ಯರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ ಎಂದು ತಿಳಿಸಿದರು.
ಭಾರತೀಯ ಬಸವ ಬಳಗದ ರಾಜ್ಯಾಾಧ್ಯಕ್ಷ ಬಾಬು ವಾಲಿ ಬಸವ ಗುರುವಿನ ಪೂಜೆ ನೆರವೇರಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಬಸವಲಿಂಗ ಸ್ವಾಾಮೀಜಿ, ಶಿವಯೋಗೀಶ್ವರ ಸ್ವಾಾಮೀಜಿ, ಚನ್ನವೀರ ಸ್ವಾಾಮೀಜಿ, ಶಿವಪ್ರಸಾದ ಸ್ವಾಾಮೀಜಿ ನೇತೃತ್ವ ವಹಿಸಿದ್ದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಿಧ್ಯ ವಹಿಸಿದ್ದರು.
ಶರಣಬಸವ ಸ್ವಾಾಮೀಜಿ ಅನುಭಾವ ನೀಡಿದರು.
ಈ ಸಂದರ್ಭದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಾಮ, ಹಿರಿಯ ನ್ಯಾಾಯವಾದಿ ರಾಜಶೇಖರ ಅಷ್ಟೂರೆ, ಬೀದರ್ ಲೋಕೋಪಯೋಗಿ ಇಲಾಖೆಯ ಇಇ ಶಿವಶಂಕರ ಕಾಮಶೆಟ್ಟಿಿ, ಕರ್ನಾಟಕ ರಾಜ್ಯ ಮಹಿಳಾ ಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಾಳೆ, ನೀಲಮ್ಮ ವಿಕೆ ಪಾಟೀಲ್, ಯುವ ಮುಖಂಡರಾದ ರವಿ ಮೀಸೆ, ಪ್ರಕಾಶ ಟೊಣ್ಣೆೆ, ಬಂಡೆಪ್ಪ ಕಂಟೆ, ಪ್ರಕಾಶ ಘೂಳೆ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜುಕುಮಾರ ಜುಮ್ಮಾಾ ಸೇರಿದಂತೆ ಹಲವರು ಇದ್ದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿ, ವಂದಿಸಿದರು.
ಪಟ್ಟದ್ದೇವರ 136ನೇ ಜಯಂತ್ಯುತ್ಸವ ಪಟ್ಟದ್ದೇವರ ಬದುಕು ಬಸವತತ್ವ ಪ್ರಚಾರಕ್ಕೆ ಮುಡಿಪು : ಖಂಡ್ರೆ

