ಸುದ್ದಿಮೂಲ ವಾರ್ತೆ ಮಾನ್ವಿ, ಡಿ.23:
ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ದಂಡ ವಸೂಲಿ ಮಾಡುವಲ್ಲಿ ವಿಲವಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಗುರುರಾಜ ಎನ್.ನಾಗಲಾಪುರ ಒತ್ತಾಾಯಿಸಿದ್ದಾರೆ.
ಮಂಗಳವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಯಚೂರಿನಿಂದ ಸಿಂಧನೂರುವರೆಗೆ ನಡೆಯುತ್ತಿಿರುವ ಚತುಷ್ಪಥ ರಸ್ತೆೆ ಕಾಮಗಾರಿಗೆ ಬೇಕಾದ ಜಲ್ಲಿ ಕಲ್ಲುಗಳನ್ನು ತಾಲೂಕಿನ ನೀರಮಾನ್ವಿಿ ಗ್ರಾಾಮದ ವ್ಯಾಾಪ್ತಿಿಯಲ್ಲಿ ಕೃಷಿ ಜಮೀನಿನಲ್ಲಿ ನಿಯಮಗಳಿಗೆ ವಿರುದ್ದವಾಗಿ ಸುಚಿತಾ ಮಿಲೇನಿಯಂ ಪ್ರಾಾಜೆಕ್ಟ್ ಕ್ರಷರ್ ಘಟಕವು ನಿಯಮಗಳ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆೆ ಹಿರಿಯ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ 1 ಕೋಟಿ 88 ಲಕ್ಷ ರೂ. ದಂಡ ವಿಧಿಸಿ ನಿಯಮ ಉಲ್ಲಂಘಿಸಿದ ಕಲ್ಲು ಗಣಿಗಾರಿಕೆ ಘಟಕದಿಂದ ದಂಡ ವಸೂಲಿ ಮಾಡುವಂತೆ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಅಧಿಕಾರಿ ಮುತ್ತಪ್ಪ ಸೇರಿದಂತೆ ಇತರ ಅಧಿಕಾರಿಗಳಿಗೆ ಕಟ್ಟುನಿಟ್ಟಿಿನ ಸೂಚನೆ ನೀಡಲಾಗಿತ್ತು. ಆದರೆ ಈ ಅಧಿಕಾರಿಗಳು ಕೇವಲ 32 ಲಕ್ಷ ರೂ. ಮಾತ್ರ ದಂಡ ವಸೂಲಿ ಮಾಡಿದ್ದು ಉಳಿದ ದಂಡವನ್ನು ವಸೂಲಿ ಮಾಡುವಲ್ಲಿ ವಿಲರಾಗಿದ್ದಾರೆ. ಇದರಿಂದ ಸರ್ಕಾರಕ್ಕೆೆ ಕೋಟ್ಯಾಾಂತರ ರೂ. ದಂಡದ ಆದಾಯ ನಷ್ಟ ಉಂಟಾಗಿದೆ. ದಂಡ ಆದಾಯ ನಷ್ಟ ಉಂಟು ಮಾಡಲು ಕಾರಣೀಕರ್ತರಾದ ಗಣಿ ಅಧಿಕಾರಿಗಳಾದ ಮುತ್ತಪ್ಪ, ಗೋಪಿಕೃಷ್ಣ ಇವರ ವಿರುದ್ದ ಕಾನೂನು ಕ್ರಮಕೈಗೊಂಡು ರಾಯಚೂರಿನಿಂದ ವರ್ಗಾವಣೆ ಮಾಡಬೇಕು ಎಂದು ಗುರುರಾಜ ಒತ್ತಾಾಯಿಸಿದರು.
ದಂಡ ಪಾವತಿ ಆಗುವವರೆಗೂ ಕಲ್ಲುಗಣಿಗಾರಿಕೆ ಕ್ರರ್ಷ ಘಟಕ ನಿಲ್ಲಿಸಬೇಕು, ಪರಿಸರ ಇಲಾಖೆಯ ನಿಯಮಗಳನ್ನು ಹಾಗೂ ಅದೇಶಗಳ ಉಲ್ಲಂಘಿಸಿ ನಡೆಸುತ್ತಿಿರುವ ಗಣಿಗಾರಿಕೆ ನಿಲ್ಲಿಸಿ, ಮೊಕದ್ದಮೆ ದಾಖಲಿಸಬೇಕು, ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆಯ ರಾಯಲ್ಟಿಿ ಪಾವತಿ ಮಾಡದೆ ವಿವಿಧ ಕಾಮಗಾರಿಗಳಿಗೆ ಜಲ್ಲಿಕಲ್ಲು ಬಳಸುವ ಮತ್ತು ಪುಡಿ ಮಾಡುವ ಘಟಕಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ದಲಿತ ಮುಖಂಡರಾದ ಹನುಮಂತ ಸೀಕಲ್, ಸಂಗನಬಸವ ಹಿರೇದಿನ್ನಿಿ, ರೇಣುಕಾರಾಜ, ಈರಣ್ಣ ನಾಯಕ, ಬಾಷಾ ಚೀಕಲಪರ್ವಿ ಮುಂತಾದವರು ಉಪಸ್ಥಿಿತರಿದ್ದರು.
ಅಕ್ರಮ ಕಲ್ಲು ಗಣಿಗಾರಿಕೆ : ದಂಡ ವಸೂಲಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗುರುರಾಜ ನಾಗಲಾಪುರ ಒತ್ತಾಯ

