ಸುದ್ದಿಮೂಲ ವಾರ್ತೆ ಕವಿತಾಳ, ಡಿ.23:
ರಾಯಚೂರು ನಗರದಲ್ಲಿ ಆರಂಭವಾದ ಸೇಂಟ್ ಮೇರೀಸ್ ಶಾಲೆಯಲ್ಲಿ ನಮ್ಮ ಮಕ್ಕಳು ಓದಿದ್ದು ಉತ್ತಮ ಶಿಕ್ಷಣ ಪಡೆದಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್ ಎಂ ಬೋಸರಾಜು ಹೇಳಿದರು.
ಪಟ್ಟಣದ ನವಚೇತನ ಶಾಲೆ ವಾರ್ಷಿಕೋತ್ಸವ ಹಾಗೂ ಕ್ರಿಿಸ್ಮಸ್ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಿಕೊಂಡಿದ್ದ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ನವಚೇತನ ಶಾಲೆಯ ಅಭಿವೃದ್ಧಿಿಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಬಹಳಷ್ಟು ಅನದಾನ ನೀಡಲಾಗಿದೆ. ಸಂಸ್ಥೆೆ ಬಡ ಮಕ್ಕಳಿಗೆ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತ ಬಂದಿದೆ ಎಂದರು.
ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ ಮನುಷ್ಯನಿಗೆ ಶಿಕ್ಷಣ ಅತಿ ಮುಖ್ಯ ಪಾಲಕರು ಮಕ್ಕಳನ್ನು ನಿತ್ಯ ಶಾಲೆಗೆ ಕಳುಹಿಸಿ ಎಷ್ಟೇ ಆಸ್ತಿಿ ಮಾಡಿದರೂ ಕಳೆದು ಹೋಗುತ್ತದೆ ಶಿಕ್ಷಣ ಕೊಡಿಸಿದರೆ ಅವರು ಇರುವವರೆಗೂ ಶಿಕ್ಷಣ ಜೀವಂತವಾಗಿರುತ್ತದೆ ಎಂದರು.
ಸಾನಿಧ್ಯವಹಿಸಿದ್ದ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಾಮೀಜಿ ಮಾತನಾಡಿ ಮಕ್ಕಳನ್ನು ಟಿವಿ, ಮೊಬೈಲ್ಗಳಿಂದ ದೂರವಿಡಬೇಕು ಶಿಕ್ಷಣದ ಜೊತೆಗೆ ಸಂಸ್ಕಾಾರ ಅತಿ ಮುಖ್ಯ ಶಿಕ್ಷಕರ ಏಟು ತಿಂದಾಗ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಕುರಿತು ಮುಖ್ಯ ಗುರು ಆನಂದ ಪ್ರಸಾದ ಮಾತನಾಡಿದರು. ಸಿಸ್ಟರ್ ಸುಶೀಲಾ ಅವರು ಶಾಲೆಯ ವಾರ್ಷಿಕ ವರದಿ ಮಂಡನೆ ಮಾಡಿದರು. ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಾರ್ಥಿಗಳಿಗೆ, ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾಾನ ಮಾಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಜೇಶ್ವರಿ ತಿಪ್ಪಯ್ಯ ಸ್ವಾಾಮಿ, ಸಿಸ್ಟೆೆರ್ ಲೂಸಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಲಿಂಗಪ್ಪ, ಮಾಳಪ್ಪ ತೋಳ, ಶೇಖರಪ್ಪ ಹಟ್ಟಿಿ, ಅಜಮ್ ಉಮ್ರಿಿ, ಅರೋಗ್ಯದಾನಿ, ಸಿ ಪಿ ಐ ಶಶಿಕಾಂತ ಎಂ,ಸೇರಿದಂತೆ ಇತರರು ಇದ್ದರು.
ಕವಿತಾಳ ಸೇಂಟ್ ಮೇರಿಸ್ ಶಾಲೆಯಲ್ಲಿ ಬಡವರಿಗೂ ಉತ್ತಮ ಶಿಕ್ಷಣ – ಸಚಿವ

