ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.24:
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ರಾಜ್ ಖಾನ್ ಅವರಿಗೆ ಸೇರಿದ ಮನೆ, ಕಾಫಿ ಎಸ್ಟೇಟ್ ಹಾಗೂ ರೆಸಾರ್ಟ್ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮನೆ ಸೇರಿದಂತೆ ರಾಜ್ಯದ 10 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿಿದ್ದಾರೆ.
ಬೆಂಗಳೂರಿನಲ್ಲಿ ಏಳು, ವಸತಿ ಇಲಾಖೆಯ ಸಿಬ್ಬಂದಿ ಒಬ್ಬರ ಮನೆ ಮತ್ತು ಕೊಡಗಿನಲ್ಲಿ ಕಾಫಿ ಎಸ್ಟೇಟ್ನ ಮೂರು ಸ್ಥಳ ಸೇರಿ ಒಟ್ಟು 10 ಕಡೆಗಳಲ್ಲಿ ದಾಳಿ ನಡೆದಿದೆ. ಬೆಂಗಳೂರು ಲೋಕಾಯುಕ್ತ ಪೊಲೀಸ್-1ರ ವ್ಯಾಾಪ್ತಿಿಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೀಡಿದ್ದ ದೂರಿನ ಮೇಲೆ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದ್ದರು. ಆಗ ಪತ್ತೆೆಯಾದ ಲೆಕ್ಕಪತ್ರಗಳನ್ನು ಲೋಕಾಯುಕ್ತ ಪೊಲೀಸರಿಗೆ ಹಸ್ತಾಾಂತರಿಸಿ ತನಿಖೆ ನಡೆಸುವಂತೆ ಕೋರಿದ್ದರು.
ಅದರಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿಿದ್ದಾರೆ. ಇಡಿ ಅಧಿಕಾರಿಗಳು ತನಿಖೆ ನಡೆಸುವಂತೆ ಸೂಚಿಸಿದ್ದ ಪ್ರಕರಣದ ಹಿನ್ನೆೆಲೆಯಲ್ಲಿ ಸರ್ರಾಜ್ ಮನೆ ಮೇಲೆ ದಾಳಿ ನಡೆದಿದೆಯೇ ಎಂಬುದರ ಬಗ್ಗೆೆ ಮಾಹಿತಿ ಇಲ್ಲ.
ವಣಚಲು ತೋಟದಲ್ಲಿ ಲೋಕಾಯುಕ್ತ ಪೊಲೀಸರ ಶೋಧ
ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ರಾಜ್ ಖಾನ್ ಅವರಿಗೆ ಸೇರಿದೆ ಎನ್ನಲಾದ ಕೊಡಗು ಜಿಲ್ಲೆಯ ಕಾಡಂಚಿನ ಗ್ರಾಾಮ ವಣಚಲು ಸಮೀಪ ಇರುವ ತೋಟ ಹಾಗೂ ನಿರ್ಮಾಣ ಹಂತದ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿಿದ್ದಾರೆ.
ಸರ್ದಾರ್ ಸರ್ರಾಜ್ ಖಾನ್ ಯಾರು?
ಇವರುಸಹಕಾರ ನಿರ್ದೇಶನಾಲಯ ಇಲಾಖೆಯ ಅಧಿಕಾರಿ. ವಸತಿ ಇಲಾಖೆಗೆ ನಿಯೋಜನೆಗೊಂಡು ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿಿದ್ದಾರೆ.
ಇವರ ವಿರುದ್ಧ ಅಕ್ರಮ ಆಸ್ತಿಿ ಗಳಿಕೆ ಆರೋಪಗಳು ಅಧಿಕವಾಗಿ ಕೇಳಿ ಬಂದಿವೆ. ಇವರಿಗೆ ಸೇರಿದ ಬೆಂಗಳೂರಿನ ಹಲಸೂರು ಮತ್ತಿಿತರ ಕಡೆಗಳಲ್ಲಿರುವ ಮನೆಗಳು, ಕೊಡಗಿನಲ್ಲಿರುವ ಕಾಫಿ ಎಸ್ಟೇಟ್, ಹೆಚ್.ಡಿ. ಕೋಟೆಯಲ್ಲಿರುವ ರೆಸಾರ್ಟ್ ಸೇರಿದಂತೆ 10ಕ್ಕೂ ಅಧಿಕ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧಕಾರ್ಯ ಕೂಡ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.
ಕೋಟ್
ನನ್ನ ಆಪ್ತ ಸಹಾಯಕ ಸರ್ರಾಜ್ ಖಾನ್ ಅವರ ಮನೆ, ಕಾಫಿ ತೋಟ ಹಾಗೂ ರೆಸಾರ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆೆ ಮಾಹಿತಿ ಇಲ್ಲ. ಸರ್ರಾಜ್ ಖಾನ್ ಅವರು ಈಗ ಶ್ರೀಮಂತರಾಗಿದ್ದಲ್ಲ. ಅವರ ತಂದೆಯ ಕಾಲದಿಂದಲೂ ಶ್ರೀಮಂತರು.
– ಜಮೀರ್ ಅಹಮದ್ ಖಾನ್, ವಸತಿ ಸಚಿವ

