ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.24
ಸ್ಥಳೀಯ ಸಂಸ್ಥೆೆಗಳ ಒಟ್ಟು 78 ವಾರ್ಡ್ಗಳಲ್ಲಿ ಚುನಾವಣೆ ನಡೆದು 50 ವಾರ್ಡ್ಗಳಲ್ಲಿ ಬಿಜೆಪಿ ಗೆದ್ದಿದೆ. ಇದು ಮುಂದಿನ ಸಾರ್ವತ್ರಿಿಕ ಚುನಾವಣೆಯ ದಿಕ್ಸೂಚಿ ಎಂಬುದಾಗಿ ಭಾವಿಸುತ್ತೇನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ತಿಳಿಸಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಈ ಕೂಡಲೇ ಗ್ರಾಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಿಸಬೇಕು. ಸಣ್ಣಪುಟ್ಟ ಹೊಂದಾಣಿಕೆ ಮಾಡುವ ವಿಷಯದಲ್ಲಿ ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ತಕ್ಷಣವೇ ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರಕ್ಕೆೆ ಚುನಾವಣೆ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಮೊನ್ನೆೆ ನಡೆದ ಸ್ಥಳೀಯ ಸಂಸ್ಥೆೆಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸನ್ನು, ಗೆಲುವನ್ನು ಸಾಧಿಸಿದೆ. ಗೆದ್ದ ಅಭ್ಯರ್ಥಿಗಳು, ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ, ನೇತೃತ್ವ ವಹಿಸಿದ ರಾಜ್ಯಾಾಧ್ಯಕ್ಷ ವಿಜಯೇಂದ್ರ ಅವರಿಗೆ, ರಾಜ್ಯ ಘಟಕಕ್ಕೆೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆೆಸ್ ನೇತೃತ್ವದ ಸರಕಾರ, ಅತಿಯಾದ ತುಷ್ಟೀಕರಣ, ತೀವ್ರ ಬೆಲೆ ಏರಿಕೆ, ಅಭಿವೃದ್ಧಿಿ ಶೂನ್ಯವಾಗಿರುವುದು, ಎಲ್ಲ ಸರಕಾರಿ ಕಚೇರಿಗಳಲ್ಲಿ ಲಂಚಗುಳಿತನ ಪರಾಕಾಷ್ಠೆೆ ಮುಟ್ಟಿಿರುವುದು, ರೈತರ ನಿರ್ಲಕ್ಷ್ಯ, ದಲಿತರ ಹಣವನ್ನು ದುರುಪಯೋಗ ಮಾಡಿರುವುದು, ಎಸ್ಇಪಿ, ಟಿಎಸ್ಪಿಿ ಹಣ ಸಂಪೂರ್ಣವಾಗಿ ದುರ್ಬಳಕೆ ಮಾಡಿದ್ದು- ಇವೆಲ್ಲವನ್ನೂ ಕರ್ನಾಟಕದ ಜನರು ಆಕ್ರೋೋಶವಾಗಿ ಪರಿಗಣಿಸಿದ್ದರು. ಇದು ಈ ಸ್ಥಳೀಯ ಸಂಸ್ಥೆೆಗಳ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಿದರು.

