ಸುದ್ದಿಮೂಲ ವಾರ್ತೆ ಮಸ್ಕಿ, ಡಿ.24
ರಾಜ್ಯವೈಜ್ಞಾನಿಕ ಪರಿಷತ್ತಿಿನ ಮಸ್ಕಿಿ ಪಟ್ಟಣದ ಸಾಹಿತಿ,ಉಪನ್ಯಾಾಸಕ ಮಹಾಂತೇಶ ಮಸ್ಕಿ ಅವರಿಗೆ ಎಚ್.ಎನ್.ರಾಜ್ಯಮಟ್ಟದ ಪ್ರಶಸ್ತಿಿಗೆ ಆಯ್ಕೆ ಮಾಡಲಾಗಿದೆ.
ಡಿ.28 ರಿಂದ 30ರ ವರೆಗೆ ಡಾ.ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿಿನ ಜಿಲ್ಲಾಧ್ಯಕ್ಷ ನಬಿಸಾಬ್ ಆನೆಹೊಸೂರು ತಿಳಿಸಿದ್ದಾರೆ.
ಮಹಾಂತೇಶ ಮಸ್ಕಿಿ ಅವರು ಕನ್ನಡ ಸಾಹಿತ್ಯ ಪರಿಷತ್ತಿಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಿಯಾಗಿ ನಡೆಸಿದ್ದರು. ಅನೇಕ ಬರಹ ಹಾಗೂ ಕಾವ್ಯ ರಚನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಗಮನ ಸೆಳೆದ ಮಹಾಂತೇಶ ಮಸ್ಕಿಿ ಪ್ರಸ್ತುತ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಾಸಕರಾಗಿ ಸೇವೆ ಸಲ್ಲಿಸುತ್ತಿಿದ್ದಾರೆ.

