ಸುದ್ದಿಮೂಲ ವಾರ್ತೆ ಮೈಸೂರು, ಡಿ.24:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾಾನದಿಂದ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಲು. ಮೈಸೂರು ನಗರದ ದಸರಾ ವಸ್ತು ಪ್ರದರ್ಶನ ಪ್ರಾಾಧಿಕಾರದ ಆವರಣದಲ್ಲಿ ಬರುವ ಜ.25 ರಂದು ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಗಾದಿಗಾಗಿ ಹಗ್ಗಜಗ್ಗಾಾಟ ಮುಂದುವರಿದಿರುವ ಸಂದರ್ಭದಲ್ಲಿ ಸಿಎಂ ಸಿದ್ದು ತವರಿನಲ್ಲಿ ಸಿದ್ದರಾಮಯ್ಯ ಬೆಂಬಲಿಸಿ ಅಹಿಂದ ಸಮಾವೇಶ ನಡೆಸಲು ನಿರ್ಧಾರಿಸಿರುವುದು ರಾಜ್ಯದಲ್ಲಿ ಸಿಎಂ ಬದಲಾವಣೆ ಬದಲಾವಣೆ ವಿಚಾರಕ್ಕೆೆ ಹೊಸ ತಿರುವು ಪಡೆದುಕೊಳ್ಳುತ್ತಿಿದೆ.
ಸಮಾವೇಶದ ತಯಾರಿಗಾಗಿ ಖಾಸಗಿ ಹೋಟೆಲ್ನಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗು ಅಹಿಂದ ಮುಖಂಡರಿಂದ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ ಎಸ್ ಶಿವರಾಮ್, ಸಂಚಾಲಕರಾದ ಎಸ್ ಯೋಗೇಶ್ ಉಪ್ಪಾಾರ, ಎಸ್ ರವಿನಂದನ್, ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಮಾರ, ನಂಜಂಡಸ್ವಾಾಮಿ, ಪ್ರಗತಿಪರ ಚಿಂತಕ ಹೆಚ್ ಜನಾರ್ಧನ್ (ಜನ್ನಿಿ) ಸೇರಿದಂತೆ ಲ್ಲಿ 20 ಕ್ಕೂ ಹೆಚ್ಚು ಅಹಿಂದ ಮುಖಂಡರು, ಪ್ರಗತಿಪರ ಚಿಂತಕರು ಸೇರಿ ಹಲವರು ಭಾಗಿಯಾಗಿದ್ದರು.
ಸಿದ್ದರಾಮಯ್ಯ ಇವತ್ತಿಿನ ಅನಿವಾರ್ಯ ಎಂಬ ಹೆಸರಿನಲ್ಲಿ ನಡೆದ ಸಭೆಯಲ್ಲಿ ಅಹಿಂದ ಸಮಾವೇಶದ ದಿನಾಂಕ ನಿಗದಿ ಸೇರಿದಂತೆ ಹಲವು ವಿಚಾರಗಳು ಚರ್ಚೆ ನಡೆಸಲಾಯಿತು. ಕಾಂಗ್ರೆೆಸ್ ಹೈಕಮಾಂಡ್ಗೆೆ ಸ್ಪಷ್ಟ ಸಂದೇಶ ಕೊಡಬೇಕು, ಕರ್ನಾಟಕ ಮತ್ತೊೊಂದು ರಾಜಸ್ಥಾಾನ ಆಗಬಾರದು. ಸಿದ್ದರಾಮಯ್ಯ ಅವರ ಶಕ್ತಿಿಯನ್ನು ಕಾಂಗ್ರೆೆಸ್ ಹೈಕಮಾಂಡ್ಗೆೆ ತಿಳಿಸಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯರನ್ನು ಸಿಎಂ ಸ್ಥಾಾನದಿಂದ ಬದಲಾವಣೆ ಮಾಡಬಾರದು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಅಹಿಂದ ಸಮಾವೇಶಕ್ಕೆೆ 25 ಸಾವಿರ ಜನರನ್ನು ಸೇರಿಸಬೇಕು. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿ ತಡೆ ಹಿಡಿಯುವ ಯೋಜನೆ ಮಾಡಿದ್ದಾರೆ. ಕಾಂಗ್ರೆೆಸ್ ನ ಕೆಲ ಶಾಸಕರು ಸಿದ್ದರಾಮಯ್ಯ ಅವರ ಬಗ್ಗೆೆ ಕೆಟ್ಡದಾಗಿ ಮಾತನಾಡುತ್ತಿಿದ್ದಾರೆ. ರಾಜ್ಯದಲ್ಲಿ ಅಹಿಂದ ಮತಗಳು ಇಲ್ಲದೇ ಯಾರು ಕೂಡ ಅಧಿಕಾರಕ್ಕೆೆ ಬರಲು ಸಾಧ್ಯವಿಲ್ಲ.
ಶೇ. 65ರಷ್ಟು ಅಹಿಂದ ಮತದಾರರು ಕಾಂಗ್ರೆೆಸ್ ಬೆನ್ನಿಿಗೆ ನಿಂತಿದ್ದಾರೆ. ಅಹಿಂದ ಮತಗಳು ಇಲ್ಲದೇ ಗ್ರಾಾಮ ಪಂಚಾಯತಿಗೂ ಸದಸ್ಯನಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆೆಸ್ ಹೈಕಮಾಂಡ್ ಗೆ ಸಂದೇಶ ರವಾನಿಸಲು ಸಮಾವೇಶ ನಡೆಸಲಾಗುತ್ತಿಿದೆ ಎಂ ಸಭೆ ನಂತರ ಅಹಿಂದ ಮುಖಂಡ ಕೆ ಎಸ್ ಶಿವರಾಮ್ ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ದುರ್ಬಲ ಮಾಡಿದರೆ ಅಹಿಂದ ವರ್ಗ ದುರ್ಬಲ ಅಗುತ್ತದೆ ಎಂದು ಷಡ್ಯಂತ್ರ ಮಾಡುತ್ತಿಿದ್ದಾರೆ. ನಾವು ಡಿ. ಕೆ. ಶಿವಕುಮಾರ್ ವಿರೋಧಿಗಳಲ್ಲ. ಯಾರ ವಿರುದ್ಧವಾಗಿಯೂ ನಾವು ಸಮಾವೇಶ ಮಾಡುತ್ತಿಿಲ್ಲ. ಸಿಎಂ ಸಿದ್ದರಾಮಯ್ಯ ಪರವಾಗಿ ನಮ್ಮ ಸಮುದಾಯದ ಹಕ್ಕೊೊತ್ತಾಾಯಕ್ಕಾಾಗಿ ಸಮಾವೇಶ ಮಾಡುತ್ತಿಿದ್ದೇವೆ.
ಅಹಿಂದ ಸಮಾವೇಶದ ಮೂಲಕ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನೇ ಮುಂದುವರೆಸುವಂತೆ ಹೈಕಮಾಂಡ್ಗೆ ಒತ್ತಾಾಯ ಮಾಡಲಾಗುತ್ತದೆ. ಸಿದ್ದರಾಮಯ್ಯ ರಾಜ್ಯಕ್ಕೆೆ ಎಷ್ಟು ಅನಿವಾರ್ಯ ಎಂಬುದನ್ನು ಹೈಕಮಾಂಡ್ಗೆೆ ತಿಳಿಸಲು ಸಮಾವೇಶ ಆಯೋಜನೆ ಮಾಡಲಾಗುತ್ತಿಿದೆ ಎಂದು ಹೇಳಿದರು.
ಕಾಂಗ್ರೆೆಸ್ ವರಿಷ್ಠರಿಗೆ ಸ್ಪಷ್ಟ ಸಂದೇಶ ಕೊಡಬೇಕು, ಕರ್ನಾಟಕ ಮತ್ತೊೊಂದು ರಾಜಸ್ಥಾಾನ ಆಗಬಾರದು. ಸಿದ್ದರಾಮಯ್ಯ ಅವರ ಶಕ್ತಿಿಯನ್ನು ಕಾಂಗ್ರೆೆಸ್ ಹೈಕಮಾಂಡ್ಗೆ ತಿಳಿಸಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯರನ್ನು ಸಿಎಂ ಸ್ಥಾಾನದಿಂದ ಬದಲಾವಣೆ ಮಾಡಬಾರದು. ಅಹಿಂದ ಸಮಾವೇಶಕ್ಕೆೆ 25 ಸಾವಿರ ಜನರನ್ನು ಸೇರಿಸಲಾಗುವುದು ಎಂದು ತಿಳಿಸಿದರು.

