ಸುದ್ದಿಮೂಲ ವಾರ್ತೆ ಬಳ್ಳಾರಿ, (ಸಿರುಗುಪ್ಪ), ಡಿ.24:
ಶಿಕ್ಷಣವು ನಿರಂತರ ಯಾತ್ರೆಯ ಅಮೂಲ್ಯ ಸಂಪತ್ತಾಾಗಿದ್ದು ದೇಶದ ಅಭಿವೃದ್ಧಿಿಗಾಗಿ ಸದ್ಭಳಗೆ ಆಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಕರೆ ನೀಡಿದ್ದಾಾರೆ.
ಬಳ್ಳಾಾರಿ-ಸಿರುಗುಪ್ಪ ರಸ್ತೆೆಯ ಮೌಂಟ್ ವ್ಯೂೆನಲ್ಲಿ ಇರುವ ಕಿಷ್ಕಿಿಂದ ವಿಶ್ವವಿದ್ಯಾಾಲಯದ ಆವರಣದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಾಲಯದ ಪ್ರಥಮ ಘಟಿಕೋತ್ಸವಕ್ಕೆೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾಾರ್ಥಿಗಳು ಜ್ಞಾಾನವಂತರಾಗಿ, ಉತ್ತಮ ಪ್ರಜೆಗಳಾಗಿ ರಾಷ್ಟ್ರಕ್ಕಾಾಗಿ ದುಡಿಯುವಂತೆ ಶಿಕ್ಷಣ ಉಪಯೋಗಕ್ಕೆೆ ಬರಬೇಕು ಎಂದರು.
ಶಿಕ್ಷಣ ಕೇವಲ ಪದವಿಗಾಗಿ ಸೀಮಿತ ಆಗಬಾರದು. ಶಿಕ್ಷಣ ಜ್ಞಾಾನ ಸಂಪಾದನೆಗೆ ಅವಕಾಶ ನೀಡುವಂತೆ ಇರಬೇಕು.
ಶಿಕ್ಷಣದ ಸಾಧನೆ ಜ್ಞಾಾನಮಾರ್ಗ ಆಗಿರಬೇಕು. ವಿದ್ಯಾಾರ್ಥಿಗಳು ಕಲಿತ ವಿದ್ಯೆಯನ್ನು ದೇಶದ ಏಳಿಗೆಗಾಗಿ ಧಾರೆ ಎರೆದು, ಅಭಿವೃದ್ಧಿ ಸಾಧಿಸುವಂತೆ ಇರಬೇಕು ಎಂದರು.
ನಮ್ ಯುವ ಸಮೂಹವು ಕೇವಲ ಬೌದ್ಧಿಕವಾಗಿ ಬೆಳೆಯದೇ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಪ್ರಾಾಚೀನ ಭಾರತೀಯ ಪರಂಪರೆ, ಸಂಸ್ಕಾಾರ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವಂತೆ ಬೆಳೆಯಬೇಕು. ಯುವಶಕ್ತಿಿಯು ನಮ್ಮ ಭಾರತದ ಸಮಗ್ರವಾದ ಮೂಲವನ್ನು ಭವಿಷ್ಯದ ಪರಂಪರೆಗೆ ಕೊಂಡೊಯ್ಯುವಂತೆ ಇರಬೇಕು. ಇಲ್ಲಿಯ ಪವಿತ್ರವಾದ ಮಣ್ಣಿಿನಲ್ಲಿ ಸ್ಥಾಾಪನೆ ಆಗಿರುವ ಕಿಷ್ಕಿಿಂದ ಖಾಸಗಿ ವಿಶ್ವವಿದ್ಯಾಾಲಯವು ಯುವಶಕ್ತಿಗೆ ಉತ್ತಮವಾದ ದಿಕ್ಸೂಚಿ ಆಗಿ ದೇಶಕ್ಕೆೆ ಕೊಡುಗೆ ನೀಡುವಂತೆ ಆಗಲಿ ಎಂದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ಕಲ್ಯಾಾಣ ಕರ್ನಾಟಕದ ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆೆಗಳನ್ನು ಕಟ್ಟಿ – ಬೆಳೆಸುವುದು ಸವಾಲಿನ ಕೆಲಸ. ಅಂಥಹದ್ದರಲ್ಲಿ ಕೇವಲ 2 ವರ್ಷದಲ್ಲಿ ಕಿಷ್ಕಿಿಂದ ವಿಶ್ವವಿದ್ಯಾಾಲಯವು ಸರ್ವಾಂಗೀಣವಾಗಿ ಬೆಳೆದು ನಿಂತಿರುವುದು ಶ್ಲಾಾಘನೀಯ.
ಕರ್ನಾಟಕದಲ್ಲಿ ಪ್ರಸ್ತುತ 29 ಖಾಸಗಿ ವಿಶ್ವವಿದ್ಯಾಾಲಯಗಳಿವೆ. ಅಂತಾರಾಷ್ಟ್ರೀಯ ವಿಶ್ವವಿದ್ಯಾಾಲಯಗಳು ರಾಜ್ಯಕ್ಕೆೆ ಬರುತ್ತಿಿದ್ದು, ಗುಣಮಟ್ಟದ ಶಿಕ್ಷಣ, ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒಲವು ನೀಡಬೇಕಾಗಿದೆ.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಸೃಜನಶೀಲ – ಕ್ರಿಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಸಂಸದರಾದ ಜಗದೀಶ್ ಶೆಟ್ಟರ್ ಅವರು, ಹಿಂದುಳಿದ ತಾಲ್ಲೂಕುಗಳಲ್ಲಿ ವಿಶ್ವವಿದ್ಯಾಾಲಯಗಳನ್ನು ಸ್ಥಾಪಿಸಿರುವ ಸರ್ಕಾರದ ನಿರ್ಧಾರವು ಅತ್ಯಂತ ಪ್ರಶಂಸನೀಯ. ಕಿಷ್ಕಿಿಂದ ವಿಶ್ವವಿದ್ಯಾಲಯವು ಈ ಭಾಗದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದರು.
ವಳ ಬಳ್ಳಾಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ಅಭಿನಂದಿಸಲಾಯಿತು.
ಎಂಬಿಎ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುವ ಶಬಾನಾ (9.33 ಸಿಜಿಪಿಎ) ಮತ್ತು ಬೆಳ್ಳಿಿ ಪದಕ ಪಡೆದಿರುವ ಸೌಗಂಧಿಕಾ ಲಕ್ಷ್ಮಿಿ (9.27 ಸಿಜಿಪಿಎ) ಅವರಿಗೆ ಹಾಗೂ ಎಂಸಿಎ ವಿಭಾಗದಲ್ಲಿ ಬಂಗಾರದ ಪದಕ ಪಡೆದಿರುವ ಸಜ್ಜ ಜಗತಿ ಅವರಿಗೆ (9.82 ಸಿಜಿಪಿಎ) ಮತ್ತು ಬೆಳ್ಳಿಿ ಪದಕ ಪಡೆದಿರುವ ಸಂಧ್ಯಾಾ ಜಿ (9.66 ಸಿಜಿಪಿಎ) ಅವರಿಗೆ ರ್ಯಾಾಂಕ್ ಮತ್ತು ಪದಕವನ್ನು ಪ್ರದಾನ ಮಾಡಿ, ಶುಭ ಕೋರಲಾಯಿತು. ಅಲ್ಲದೇ, 80 ವಿದ್ಯಾಾರ್ಥಿಗಳಿಗೆ ಘಟಿಕೋತ್ಸವದ ಪದವಿಯನ್ನು ಘೋಷಣೆ ಮಾಡಿ, ಪ್ರಮಾಣವಚನ ಬೋಧಿಸಲಾಯಿತು.
ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ, ಟಿ.ಇ.ಎಚ್.ಆರ್.ಡಿ ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್, ಕಿಷ್ಕಿಿಂದ ವಿಶ್ವವಿದ್ಯಾಾಲಯದ ಕುಲಾಧಿಪತಿ ಡಾ. ಯಶವಂತ್ ಭೂಪಲ್, ಕುಲಸಚಿವ ಡಾ. ಯು. ಈರಣ್ಣ, ಕುಲಪತಿ (ಮೌಲ್ಯಮಾಪನ) ಡಾ. ರಾಜು ಜಾಡರ್, ಹಣಕಾಸು ಅಧಿಕಾರಿ ವೈ. ನಮ್ರತಾ ಸೇರಿದಂತೆ ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾಾರ್ಥಿಗಳು ಹಾಗೂ ಪೋಷಕರು ಉಪಸ್ಥಿಿತರಿದ್ದರು.
ಕಿಷ್ಕಿಿಂದ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಟಿ.ಎನ್. ನಾಗಭೂಷಣ ಅವರು ಸ್ವಾಾಗತ ಕೋರಿದರು. ಸಹಕುಲಾಧಿಪತಿ ವೈ.ಜೆ. ಪೃಥ್ವಿಿರಾಜ್ ಅವರು ವಂದನಾರ್ಪಣೆ ಸಲ್ಲಿಸಿದರು.
ಶಿಕ್ಷಣ ನಿರಂತರ ಯಾತ್ರೆಯ ಅಮೂಲ್ಯ ಸಂಪತ್ತು : ರಾಜ್ಯಪಾಲ ಗೆಹ್ಲೋಟ್

