ಸುದ್ದಿಮೂಲ ವಾರ್ತೆ ರಾಯಚೂರು, ಡಿ.24
ರಾಯಚೂರು ರಿಪೋರ್ಟರ್ಸ್ ಗಿಲ್ಡ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಪಾದಕರ ಸಂಘದ ಸಂಯುಕ್ತಾಾಶ್ರಯದಲ್ಲಿ ಡಿ.28ರಂದು ಬೆಳಿಗ್ಗೆೆ 11ಕ್ಕೆೆ ಪತ್ರಿಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಹಾಗೂ ಪ್ರಶಸ್ತಿಿ ಪ್ರದಾನ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೊಷ್ಠಿಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಉದ್ಘಾಾಟಿಸಲಿದ್ದು , ಪತ್ರಕರ್ತರ ತುರ್ತು ನಿಧಿಗೆ ವಿಧಾನ ಪರಿಷತ್ ಶಾಸಕ ಎ. ವಸಂತಕುಮಾರ ಚಾಲನೆ ನೀಡಿದರೆ, ಗಿಲ್ಡ್ನ ವೈಬ್ಸೈಟ್ನ್ನು ಸಂಸದ ಜಿ.ಕುಮಾರ ನಾಯಕ ಲೋಕಾರ್ಪಣೆ ಮಾಡುವರು, ವಿವಿಧ ದತ್ತಿಿ ಪ್ರಶಸ್ತಿಿಗಳನ್ನು ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ ಪ್ರದಾನ ಮಾಡುವರು ಪತ್ರಿಿಕಾ ವಿತರಕರಿಗೆ ಚಳಿ ಮತ್ತು ಮಳೆ ಕೋಟುಗಳನ್ನು ಪಾಲಿಕೆ ಮಾಜಿ ಮೇಯರ್ ನರಸಮ್ಮ ಮಾಡಗಿರಿ ವಿತರಿಸುವರು ಎಂದರು.
ಹಿರಿಯ ಪತ್ರಕರ್ತ ಜಗನ್ನಾಾಥ ಆರ್ ದೇಸಾಯಿ, ಜಿಲ್ಲಾಾಧಿಕಾರಿ ಕೆ.ನಿತೀಶ್, ಸಿಇಓ ಈಶ್ವರ್ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾಾರೆ.
ಇದೇ ವೇಳೆ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಅವರಿಗೆ ವಿಶೇಷ ಸನ್ಮಾಾನ ಮಾಡಲಿದ್ದುಘಿ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಜೀವಮಾನ ಸಾಧನೆ ಪ್ರಶಸ್ತಿಿಯನ್ನು ಹಿರಿಯ ಪತ್ರಕರ್ತ ರಘುನಾಥರೆಡ್ಡಿಿ ಮನ್ಸಲಾಪೂರು ಅವರಿಗೆ 25 ಸಾವಿರ ನಗದು ಸೇರಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ವಿವಿಧ ವಾರ್ಷಿಕ ದತ್ತಿಿ ಪ್ರಶಸ್ತಿಿಗಳಿಗೆ ಹಿರಿಯ ವರದಿಗಾರ ಚಂದ್ರಕಾಂತ್ ಮಸಾನಿ, ಅಬ್ದುಲ್ ಖಾದರ್, ಕೆ.ಶ್ರೀನಿವಾಸ, ಬಿ. ರಾಜು ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಕ್ರಿಿಕೆಟ್ ಪಂದ್ಯಾಾವಳಿಯನ್ನು ಡಿ.25ರಂದು ಬೆಳಿಗ್ಗೆೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಾ ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಗಿಲ್ಡ್ ಉಪಾಧ್ಯಕ್ಷ ಎಂ.ಜಯರಾಮ್,ಉಭಯ ಸಂಘಗಳ ಪ್ರ.ಕಾರ್ಯದರ್ಶಿಗಳಾದ ವೆಂಕಟೇಶ ಹೂಗಾರ, ಖಾನ್ಸಾಬ್ ಮೋಮಿನ್, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರು, ಖಜಾಂಚಿ ಕೆ.ಸಣ್ಣ ಈರಣ್ಣ ಇದ್ದರು.
* ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಜೀವಮಾನ ಸಾಧನೆ ಪ್ರಶಸ್ತಿಿಗೆ ರಘುನಾಥರೆಡ್ಡಿಿ ಭಾಜನ * ವಿವಿಧ ಪ್ರಶಸ್ತಿಿಗಳಿಗೆ ಚಂದ್ರಕಾಂತ ಮಸಾನಿ, ಖಾದರ್ ಸೇರಿ ನಾಲ್ವರ ಆಯ್ಕೆೆ ಡಿ.28 ರಂದು ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ, ಪ್ರಶಸ್ತಿಿ ಪ್ರದಾನ ಸಮಾರಂಭ-ಜಾಗಟಗಲ್

