ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.24:
ವಿವಿಧ ಕಾರಣಗಳಿಂದ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಾಮನೂರು-ನರಿಬೋಳಿ ಬ್ರಿ್ಜ್ಿ ಕಾಮಗಾರಿ ಮತ್ತು ಭೂ ಸ್ವಾಾಧೀನ ಪ್ರಕ್ರಿಿಯೆಯ ಸಮಸ್ಯೆೆ ಬಗೆಹರಿಸುವ ಮೂಲಕ ಮುಂದಿನ 2026 ರ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ೌಜಿಯಾ ತರನ್ನುಮ್, ಲೋಕೋಪಯೋಗಿ ಸಚಿವರ ವಿಶೇಷ ಕರ್ತವ್ಯಾಾಧಿಕಾರಿಗಳಾದ ವಿ ಎನ್ ಪಾಟೀಲ್ ಸೇರಿದಂತೆ ಸೇಡಂ ಮತ್ತು ಕಲಬುರಗಿ ಪ್ರಾಾದೇಶಿಕ ಆಯುಕ್ತರು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗೊಂದಿಗೆ ಚಾಮನೂರು-ನರಿಬೋಳಿ ಬ್ರಿ್ಜ್ಿ ಕಾಮಗಾರಿ ಮತ್ತು ಭೂ ಸ್ವಾಾಧೀನ ಪ್ರಕ್ರಿಿಯೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಈ ಬ್ರಿಿಡ್ಜ್ ಪೂರ್ಣಗೊಳಿಸುವದರಿಂದ ಜೇವರ್ಗಿ ಹಾಗೂ ಚಿತ್ತಾಾಪುರದ ಜನರಿಗೆ ಹೆಚ್ಚಿಿನ ಅನುಕೂಲವಾಗಲಿದೆ ಎಂದು ಹೇಳಿದರು.
ಬ್ರಿಿಡ್ಜ್ ಕಾಮಗಾರಿಗೆ ಅವಶ್ಯಕವಿರುವ ಭೂ ಸ್ವಾಾಧೀನ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಇತ್ತೀಚಿಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಠಿಿಯಿಂದ ಪ್ರಸ್ತುತ ಕಾಮಗಾರಿಯಲ್ಲಿ ಮಾಡಲಾಗಿದ್ದ 30 ಗರ್ಡರ್ಸ್ಗಳು ಭೀಮ ನದಿಯ ಪ್ರವಾಹಕ್ಕೆೆ ತುತ್ತಾಾಗಿ ಉರುಳಿ ಬಿದ್ದಿದ್ದು, ಸದರಿ 30 ಗರ್ಡರ್ಸ್ ಹಾಗೂ ಕಾಮಗಾರಿ ಸ್ಥಳದಲ್ಲಿ ಬಾಕಿ ಇರುವ 24 ಗರ್ಡರ್ಸ್ಗಳ ಅಂದಾಜು ರೂ. 6,90,61,203 ಮೊತ್ತವನ್ನು ಗುತ್ತಿಿಗೆದಾರರಿಂದ ವಸೂಲು ಮಾಡಲು ಸೂಚಿಸಿದರು.
ಸದರಿ ಕಾಮಗಾರಿಯಲ್ಲಿ ಸೇತುವೆಯ ಭಾಗಶಃ ಕಾಮಗಾರಿಯನ್ನು ನಿರ್ವಹಿಸಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಕಾಮಗಾರಿ ಕೆಲಸಗಳನ್ನು ಸ್ಥಗಿತಗೊಳಿಸಿರುವ ಗುತ್ತಿಿಗೆದಾರರ ಮೇಲೆ ಕ್ರಮಕೈಗೊಳ್ಳುವುದು. ನಿಯಮಾನುಸಾರ ಬಾಕಿ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್ ಆಹ್ವಾಾನಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಚಾಮನೂರು- ನರಿಬೋಳಿ ಬ್ರಿ್ಜ್ಿ ಕಾಮಗಾರಿ ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳಿಸಿ: ಡಾ. ಅಜಯ್ ಧರ್ಮಸಿಂಗ್

