ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.24:
ವಿಶ್ವಕರ್ಮ ಸಮುದಾಯವು ಸಾಮಾಜಿಕ ನ್ಯಾಾಯದಡಿಯಲ್ಲಿ ನ್ಯಾಾಯ ಪಡೆಯಬೇಕಾದರೆ ಸಂಘಟನೆ ಜಾಗೃತಿ ಅರಿವು ಬಹಳ ಮುಖ್ಯ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಧ್ಯಕ್ಷ ವಿಜಯಕುಮಾರ ಪತ್ತಾಾರ ಕನಕಗಿರಿ ಹೇಳಿದರು.
ನಗರದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ಕಲಬುರಗಿ ಜಿಲ್ಲಾ ಘಟಕಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು. ಸಮ ಸಮಾಜ ನಿರ್ಮಾಣದಲ್ಲಿ ರಾಜಕೀಯ ಪ್ರಾಾತಿನಿಧ್ಯ, ಆರ್ಥಿಕ, ಸಾಮಾಜಿಕ , ಶೈಕ್ಷಣಿಕವಾಗಿ ವಿಶ್ವಕರ್ಮರಿಗೆ ಅನ್ಯಾಾಯವಾಗುತ್ತಿಿದೆ ಎಂದರು.
ಯಾದಗಿರಿ, ಕಲಬುರಗಿ, ಬೀದರ ವಿಭಾಗ ಅಧ್ಯಕ್ಷರಾದ ಚಂದ್ರಶೇಖರ ಪತ್ತಾಾರ ಮಾತನಾಡಿ, ಕಲ್ಯಾಾಣ ಕರ್ನಾಟಕ ಭಾಗದ ವಿಶ್ವಕರ್ಮರು ಒಕ್ಕೂಟದ ಬಲವರ್ಧನೆ ಜೊತೆಗೆ ರಾಜಕೀಯ, ಆರ್ಥಿಕ, ಸಮಾಜಿಕವಾಗಿ ಜಾಗೃತರಾಗಿ ಬೆಳೆಯಬೇಕೆಂದು ಅಭಿಪ್ರಾಾಯಪಟ್ಟರು.
ವಿಶ್ವಕರ್ಮ ಮಹಾ ಒಕ್ಕೂಟದ ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆೆ ಮಾಡಲಾಯಿತು. ಅಧ್ಯಕ್ಷರನ್ನಾಾಗಿ ಮಾರುತಿ ಎಂ ಕಮ್ಮಾಾರ್, ಜಿಲ್ಲಾ ಗೌರವಾಧ್ಯಕ್ಷರಾಗಿ ಮೋನಪ್ಪ ಚಿಂಚನಸೂರ್. ನಗರ ಅಧ್ಯಕ್ಷರ ಮಂಜುನಾಥ ದಂಡೋತಿ, ಜಿಲ್ಲಾ ಸಂಚಾಲಕರಾಗಿ ಮಹೇಶ್ ಸುಲ್ತಾಾನಪುರ್ ಹಾಗೂ ದತ್ತು ಕುಮಾರ್ ಸುತಾರ್ ಮತ್ತು ಮಲ್ಲು ಭೀಮಳ್ಳಿಿ ಜಿಲ್ಲಾ ಉಪಾಧ್ಯಕ್ಷರಾಗಿ ರಾಜಶೇಖರ್ ವಿಶ್ವಕರ್ಮ ಮತ್ತು ಸುಧಾಕರ್ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಕಮ್ಮಾಾರ್, ಜಿಲ್ಲಾ ಖಜಾಂಚಿಯಾಗಿ ಶ್ರೀನಿವಾಸ್ ಬಡಿಗೇರ್ ಮತ್ತು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಾಗಿ ಸಂಗೀತಾ ಪಂಚಾಳ್ ಆಯ್ಕೆೆಯಾದರು.
ಈ ಸಮಾರಂಭದಲ್ಲಿ ಹಿರಿಯರಾದ ಮಾನಯ್ಯ ಬಡಿಗೇರ್, ಸಾಹಿತಿ ನರಸಿಂಗರಾವ್ ಹೇಮನೂರ, ನೌಕರರ ಸಂಘದ ಅಧ್ಯಕ್ಷ ಗಂಗಾಧರ ಪೋದಾರ, ನಾಗಮೂರ್ತಿ ವಿಶ್ವಕರ್ಮ, ಶ್ರೀನಿವಾಸ್ ಪಾಂಚಾಳ ಸೇರಿ ಅನೇಕರು ಇದ್ದರು.
ವಿಶ್ವಕರ್ಮ ಮಹಾ ಒಕ್ಕೂಟ ಕಲಬುರಗಿ ಜಿಲ್ಲಾ ಘಟಕ ಉದಯ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ಜಾಗೃತಿ ಅರಿವು ಮುಖ್ಯ : ವಿಜಯಕುಮಾರ ಪತ್ತಾರ

