ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.24:
ಹಿಂದುಳಿದ ಕಲ್ಯಾಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಿಗೆ ಸಂವಿಧಾನಕ್ಕೆೆ ತಿದ್ದುಪಡಿ ತಂದು 371(ಜೆ) ಕಾಯ್ದೆೆ ವಿಶೇಷ ಮೀಸಲಾತಿ ತಂದು ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಿಗೆ ರಾಜ್ಯ ಸರ್ಕಾರ ಒಂದೆಡೆ ಪಣ ತೊಟ್ಟಿಿದ್ದರೆ, ಅತ್ತ ಕೇಂದ್ರ ಸರ್ಕಾರ ಮ್ಯಾಾಚಿಂಗ್ ಗ್ರ್ಯಾಾಂಟ್ ನೀಡದೆ ವಿಳಂಬ ಧೋರಣೆ ತೋರುತ್ತಿಿದೆ ಎಂದು ಕೆಕೆಆರ್ಡಿರ್ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ನಗರದ ಕೆಕೆಆರ್ಡಿರ್ಬಿ ಮಂಡಳಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ, ಪ್ರಧಾನಮಂತ್ರಿಿ, ಹಣಕಾಸು ಸಚಿವರಿಗೆ ಹಲವಾರು ಬಾರಿ ಸಿಎಂ ಅವರು ಪತ್ರ ಬರೆದಿದ್ದಾರೆ. ಇದಲ್ಲದೆ ಖುದ್ದಾಗಿ ಭೇಟಿಯಾಗಿ ಮನವರಿಕೆ ಮಾಡಿದ್ದರೂ ಇದುವರೆಗೆ ಅನುದಾನ ಬಂದಿಲ್ಲ. ಹೀಗಾಗಿ ಸಿಎಂ ಅವರೊಂದಿಗೆ ಚರ್ಚಿಸಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದರು.
2013-14 ರಿಂದ 2025-26ನೇ ಸಾಲಿನ ವರೆಗೆ ರಾಜ್ಯ ಸರ್ಕಾರದಿಂದ ಕೆಕೆಆರ್ಡಿರ್ಬಿ ಮಂಡಳಿಗೆ 24,878 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಇದೇ ಮೊತ್ತವನ್ನು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೆಕೆಆರ್ಡಿರ್ಬಿ ಮಂಡಳಿಗೆ ನೀಡಬೇಕು. ಕೇಂದ್ರದಿಂದ ಅನುದಾನ ಬಂದಲ್ಲಿ ಪ್ರದೇಶದಲ್ಲಿ ಇನ್ನೂ ಹಚ್ಚಿಿನ ಅಭಿವೃದ್ಧಿಿ ಕೆಲಸ ಕಾರ್ಯಗಳು ಮಾಡಲು ಸಾಧ್ಯವಾಗಲಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿಿನಲ್ಲಿ ಡಾ.ಛಾಯಾ ದೇಗಾಂವಕರ್ ನೇತೃತ್ವದ ತಜ್ಞರ ಸಮಿತಿ ಈಗಾಗಲೆ ಕಳೆದ ಡಿ.16 ರಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ವರದಿ ಸಲ್ಲಿಸಿದ್ದು, ಕೆಪಿಎಸ್ ಶಾಲೆ ನಿರ್ಮಾಣ, ದ್ವಿಿಭಾಷಾ ಪದ್ದತಿ ಬೋಧನೆ, ಶಿಕ್ಷಣದಲ್ಲಿ ಗುಣಮಟ್ಟ, ಶಿಕ್ಷಕರ ಕೊರತೆ ನೀಗಿಸುವ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ 247 ಕೆಪಿಎಸ್ ಶಾಲೆಯಲ್ಲಿ ಕಲ್ಯಾಾಣದಲ್ಲಿರುವುದು ಕೇವಲ 60 ಶಾಲೆ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಮಂಡಳಿಯಿಂದ 200, ಶಿಕ್ಷಣ ಇಲಾಖೆಯಿಂದ 100 ಶಾಲೆಗಳು ಈ ಭಾಗದಲ್ಲಿ ತಲೆ ಎತ್ತಲಿವೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಧಾರಣೆಗೆ 3.44 ಕೋಟಿ ರೂ. ಖರ್ಚು ಮಾಡಲಾಗುತ್ತಿಿದೆ. ಇದರಲ್ಲಿ ಪ್ರತಿ ತಾಲೂಕಿಗೆ 25 ಲಕ್ಷ ವ್ಯಯ ಮಾಡಲಾಗುತ್ತಿಿದೆ. 5,530 ಶಿಕ್ಷಕರ ಭರ್ತಿ ಕಾರ್ಯ ನಡೆದಿದೆ. ಪ್ರಸಕ್ತ 2025-26ನೇ ಸಾಲಿನಲ್ಲಿ ಮಾರ್ಚ್ 31 ರೊಳಗೆ 4,000 ಕೋಟಿ ರೂ. ಹಣ ಖರ್ಚು ಮಾಡುವ ಮೂಲಕ ಅನುದಾನ ಖರ್ಚಿನಲ್ಲಿ ಇತಿಹಾಸ ದಾಖಲೆ ಬರೆಯಲಾಗುವುದು ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.
ಕೇಂದ್ರದಿಂದ ಮಲತಾಯಿ ಧೋರಣೆ:
ಕೇಂದ್ರ ಸರ್ಕಾರವು 15ನೇ ಹಣಕಾಸು, ಭದ್ರಾಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ರಾಜ್ಯಕ್ಕೆೆ ಹಂಚಿಕೆಯಾದ 1.25 ಲಕ್ಷ ಕೋಟಿ ರೂ. ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿಿದೆ. ಭದ್ರಾಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ., ಬೆಂಗಳೂರು ಅಭಿವೃದ್ದಿಗೆ ಘೋಷಿಸಿದ 6,000 ಕೋಟಿ ರೂ., 15ನೇ ಹಣಕಾಸಿನಡಿ ಹಂಚಿಕೆ ಮಾಡಿದ ವಿಶೇಷ ಅನುದಾನ 5,495 ಕೋಟಿ ರೂಪಾಯಿಗಳಲ್ಲಿ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ.
ಇದಲ್ಲದೆ 15ನೇ ಹಣಕಾಸು ಆಯೋಗದಲ್ಲಿನ ಆರೋಗ್ಯ ಕ್ಷೇತ್ರಕ್ಕೆೆ ಹಂಚಿಕೆ ಮಾಡಿದ ಅನುದಾನದಲ್ಲಿ 874 ಕೋಟಿ ರೂ., ಗ್ರಾಾಮೀಣ ಸ್ಥಳೀಯ ಸಂಸ್ಥೆೆಗೆ ಹಂಚಿಕೆ ಮಾಡಿದರಲ್ಲಿ 774 ಕೋಟಿ ರೂ., ನಗರ-ಸ್ಥಳೀಯ ಸಂಸ್ಥೆೆಗಳಿಗೆ ಶಿಾರಸ್ಸು ಮಾಡಿದ 1,028 ಕೋಟಿ ರೂ., ತೆರಿಗೆ ಸೂತ್ರ ಬದಲಾವಣೆಯಿಂದ ನಷ್ಟ 80,000 ಕೋಟಿ ರೂ., ಎನ್.ಡಿ.ಆರ್.ಎ್ ನಡಿ 7,254 ಕೋಟಿ ರೂ., ಕೇಂದ್ರ ಪುರಸ್ಕೃತ ಯೋಜನೆಗಳಿಗೆ 10,524, ಸೆಸ್ ಮತ್ತು ಸರ್ಚಾರ್ಜ್ ನಿಂದ 8,300 ಕೋಟಿ ರೂ. ಸೇರಿ ಒಟ್ಟಾಾರೆ ಕಳೆದ 5 ವರ್ಷದಲ್ಲಿ ರಾಜ್ಯಕ್ಕೆೆ 1,25,559 ಕೋಟಿ ರೂ. ಹಣ ಕೇಂದ್ರದಿಂದ ಬರಬೇಕಿದೆ ಎಂದು ಅಂಕಿ-ಸಂಖ್ಯೆೆಯೊಂದಿಗೆ ವಿವರಿಸಿದರು.
ಹಿಂದಿನ ಯು.ಪಿ.ಎ. ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಉದ್ಯೋೋಗ ಖಾತ್ರಿಿ ಯೋಜನೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರಿಡಲಾಗಿತ್ತು. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರವು ವಿಬಿ-ಜಿ-ರಾಮ್-ಜಿ ಹೆಸರಿಡುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಅವಮಾನ ಮಾಡಿದೆ. ಅಲ್ಲದೆ ಕಾಯ್ದೆೆ ತಿದ್ದುಪಡಿ ತಂದು 60-40 ಮಾದರಿಯಲ್ಲಿ ಕೇಂದ್ರ-ರಾಜ್ಯ ಸರ್ಕಾರ ಅನುದಾನ ಭರಿಸಬೇಕೆಂದು ತಿಳಿಸಲಾಗಿದೆ. ಹಿಂದೆಲ್ಲ ಕೇಂದ್ರವೇ ಶೇ.100 ಅನುದಾನ ಭರಿಸುತ್ತಿಿತ್ತು. ಇದು ರಾಜ್ಯಗಳಿಗೆ ಮಾರಕವಾದ ನಿರ್ಣಯವಾಗಿದೆ. ಕೇಂದ್ರದ ಎನ್.ಡಿ.ಎ. ಸರ್ಕಾರವು ದೇಶದ ಬಡ ಜನರ ಕಲ್ಯಾಾಣ, ಉದ್ಯೋೋಗ ನೀಡುವ ಬದಲು ಕೇವಲ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡುವಲ್ಲಿ ತಲ್ಲೀನವಾಗಿದೆ ಎಂದರು.
ಮ್ಯಾಚಿಂಗ್ ಗ್ರ್ಯಾಾಂಟ್ ; ಶೀಘ್ರವೇ ಕೇಂದ್ರಕ್ಕೆ ನಿಯೋಗ -ಡಾ.ಅಜಯ್ ಸಿಂಗ್

