ಸುದ್ದಿಮೂಲ ವಾರ್ತೆ ಮಸ್ಕಿ, ಡಿ.24:
ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಾಮದಲ್ಲಿ ಪ್ರೇೇಮಿಸಿ ವಿವಾಹವಾಗಿ ದಾಂಪತ್ಯ ಜೀವನ ನಡೆಸುತ್ತಿಿದ್ದ ದಂಪತಿಗಳ ಮೇಲಿನ ಪೈಶಾಚಿಕ ದಾಳಿ ಹಾಗೂ ಕೊಲೆ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ದಲಿತ ಪರ ಸಂಘಟನೆಗಳ ಒಕ್ಕೂಟ ಮಸ್ಕಿಿ ತಾಲೂಕು ವತಿಯಿಂದ ಮಾನ್ಯ ಮುಖ್ಯಮಂತ್ರಿಿಗಳು ಹಾಗೂ ಗೃಹ ಸಚಿವರಿಗೆ ಮಸ್ಕಿಿ ತಹಶೀಲ್ದಾಾರ್ ಮಂಜುನಾಥ್ ಭೋಗಾವತಿ ಮುಖಾಂತರ ಮನವಿ ಸಲ್ಲಿಸಿದರು.
ದಲಿತ ಸಾಹಿತಗಳು ಸಿ ದಾನಪ್ಪ ನೀಲಗಲ್ ಮಾತನಾಡಿ, ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆಂಬ ಕಾರಣಕ್ಕೆೆ ಗರ್ಭಿಣಿ ಮಗಳನ್ನು ಕೊಲೆಗೈದು, ಯುವಕನ ಮನೆಯವರ ಮೇಲೆ ದಾಳಿ ನಡೆಸಿದ ತಪ್ಪಿಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.ಸಂವಿಧಾನ ದೇಶವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿದೆ. ದೇಶ ಸ್ವಾಾತಂತ್ರ್ಯ ಗಳಿಸಿ 78 ವರ್ಷಗಳ ನಂತರವೂ ಹಲವರು ಜಾತಿ ಸಂಕುಚಿತತೆಯಿಂದ ವರ್ತಿಸುತ್ತಿಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಪರಸ್ಪರ ಪ್ರೀೀತಿಸಿ, ವಿವಾಹವಾಗಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿಿದ್ದ ಮುಗ್ಧ ದಂಪತಿಯ ಮೇಲೆ, ಕುಟುಂಬದವರ ಈ ವರ್ತನೆ ಪ್ರಾಾಣಿಗಳಿಗಿಂತಲೂ ಕ್ರೂರವಾಗಿದೆ. ಈ ಘಟನೆಯನ್ನು ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ, ಶಾಂತಿ-ಸುವ್ಯವಸ್ಥೆೆ ಕಾಪಾಡಬೇಕು ಮತ್ತು 22ರಂದು ರಾಯಚೂರು ಜಿಲ್ಲೆಯ ಹಟ್ಟಿಿ ಸಮೀಪದ ಪಾಮನಕಲ್ಲೂರು ಕ್ರಾಾಸ್ ಹೊಲದಲ್ಲಿ ಜ್ಯೋೋತಿ ಎಂಬ ಯುವತಿಯ ಮೃತದೇಹ ಅನುಮಾನಸ್ಪದವಾಗಿ ಕಂಡುಬಂದಿದ್ದು, ಅದರ ಹಿಂದೆ ಇರುವ ಸತ್ಯ ತನಿಖೆ ಮಾಡಿ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ಮೌನೇಶ ಮುರಾರಿ, ಮಲ್ಲಯ್ಯ ಮುರಾರಿ, ಹನುಮಂತಪ್ಪ ವೆಂಕಟಾಪುರ, ಅಶೋಕ ಮುರಾರಿ, ದುರ್ಗ ಪ್ರಸಾದ್ ತೋರಣ ದಿನ್ನಿಿ, ಮಲ್ಲಪ್ಪ ಗೋನಾಳ, ಕಿರಣ್ ವಿ ಮುರಾರಿ, ಕಾಶಿಮಪ್ಪ ಡಿ ಮುರಾರಿ, ದುರ್ಗಪ್ಪ ಮುರಾರಿ, ಗಂಗಾರ್ಧ ಮುರಾರಿ, ಮಲ್ಲಿಕಾ ಮುರಾರಿ, ಬಸವಂತಪ್ಪ ಹಿರೆಕಡಬೋರ, ಸುಭಾಷ್, ಹಾಗೂ ದಲಿತ ಮುಖಂಡರು, ಇತರರು ಉಪಸ್ಥಿಿತರಿದ್ದರು.
ಇನಾಂ ವೀರಾಪುರ ಮರ್ಯಾದೆ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಆಗ್ರಹ

